ಬೀದರ್

ಹಿರಿಯರು ಹಾಗೂ ಕಿರಿಯರ  ಮಧ್ಯದಲ್ಲಿ ಬಾಂಧವ್ಯ ಗಟ್ಟಿಗೊಳ್ಳ ಬೇಕು– ಗಂಗಪ್ಪ ಸಾವಳೇ..

ಕುಟುಂಬದಲ್ಲಿರುವ ಹಿರಿಯರು ಮತ್ತು ಕಿರಿಯರ ಮಧ್ಯದಲ್ಲಿ ಪರಸ್ಪರ ಸೌಹಾರ್ದಯುತ ನಡಾವಳಿಕೆ ಇದ್ದರೆ, ಅಲ್ಲಿ ಸುಖ ಶಾಂತಿ ನೆಲೆಸಿರುತ್ತದೆ ಎಂದು, ಸರಕಾರಿ ಅಭಿಯೋಜನೆಯ  ನಿವೃತ್ತ ಉಪ ನಿರ್ದೇಶಕರಾದ ಗಂಗಪ್ಪ ಸಾವಳೆಯವರು ಅಭಿಪ್ರಾಯ ಪಟ್ಟರು. ಅವರು ಬೀದರಿನ ಗುರುನಾನಕ್ ಕಾಲೋನಿಯಲ್ಲಿರುವ ಜೈಹಿಂದ್ ಹಿರಿಯ ನಾಗರಿಕರ ಸಂಘದಲ್ಲಿ ಹುಟ್ಟುಹಬ್ಬ ನಿಮಿತ್ಯ  ನಡೆದ ಸಸ್ಯಾರೋಪಣ, ಪರಿಸರ ಜಾಗೃತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ, ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.  ಕಿರಿಯರು ಹಿರಿಯರಿಗೆ ವಿಧೇಯರಾಗಿರಬೇಕು. ಆದಾಗ್ಯೂ ನಿರೀಕ್ಷಿತ್ ಮಟ್ಟದ ಗೌರವ ಸಿಗದೇ ಇದ್ದರೂ ಹಿರಿಯರು ತಾಳ್ಮೆಯಿಂದ ವರ್ತಿಸಬೇಕು. ಸಮಯ ಸಂದರ್ಭದಲ್ಲಿ ಎಲ್ಲವೂ ಸರಿಯಾಗುತ್ತದೆ. ಕಿರಿಯರಿಗೆ ವಸ್ತುಸ್ಥಿತಿ ಅರಿವಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಹಿರಿಯರ ತಾಳ್ಮೆ ಹೆಚ್ಚು ಕೆಲಸ ಮಾಡುತ್ತದೆ  ಎಂದು ನುಡಿದರು. ಹುಟ್ಟುಹಬ್ಬ ಆಚರಿಸಿಕೊಳ್ಳು  ತ್ತಿರುವ ಬಾಲಕಿ ಪೂರ್ವಿ ಬಾಬು ಸಸಿ ನೆಟ್ಟಳು.  ವೇದಿಕೆ ಕಾರ್ಯಕ್ರಮಕ್ಕೆ ಸಸಿಗೆ ನೀರೆರೆ ದು ಚಾಲನೆ ನೀಡಲಾಯಿತು. ಗಂಗಪ್ಪ- ವಿಜಯಲಕ್ಷ್ಮಿ ಸಾವಳೆ, ರಾಮಚಂದ್ರ-ನರಸಮ್ಮ ಗಜರೇ, ಬಸವರಾಜ್ ಲಲಿತಾಬಾಯಿ ಘುಳೆಯವರ ಹುಟ್ಟುಹಬ್ಬ ವನ್ನು ಆಚರಿಸಲಾಯಿತು. ಶತಾಯುಷಿ ಶ್ರೀಮತಿ ಕಲಾವತಿ ಘುಳೆ, ಶಿವಪುತ್ರ-ಜೈಶ್ರೀ ಮೆಟಗೆ ಯವರನ್ನು ಗೌರವಿಸಲಾಯಿತು. ವೀರಭದ್ರಪ್ಪ ಉಪ್ಪಿನ್,  ನಾರಾ ಯಣರಾವ್ ಕಾಂಬಳೆ, ಚಂದ್ರ ಶೇಖರ್ ದೇವಣಿ, ಸಂಜೀವ್ ಕುಮಾರ್ ಶೀಲವಂತ್  ರವರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಆರ್. ಆರ್. ಮುನಿಗ್ಯಾಲ್ ಅಧ್ಯಕ್ಷತೆ ವಹಿಸಿದ್ದರು.  ರಮಾ ಮುರ್ಕಿ ಸ್ವಾಗತ ಗೀತೆ ಹಾಡಿದರು. ವೀರಭದ್ರಪ್ಪ ಉಪ್ಪಿನ್ ನಿರೂಪಿಸಿದರು.ವಿಜಯ ಕುಮಾರ್ ಸೂರ್ಯಾನ್ ಸ್ವಾಗತಿಸಿದರು. ನಾರಾಯಣ ರಾವ್ ಕಾಂಬಳೆ ಪ್ರಾಸ್ತಾವಿಕ ಮಾತನಾಡಿದರು. ಸಾಮೂಹಿಕ ವಾಗಿ ರಾಷ್ಟ್ರಗೀತೆ ಹಾಡ ಲಾಯಿತು.ರಾಮಕೃಷ್ಣ ಸಾಳೆ,  ಲಲಿತಾಬಾಯಿ,   ಮಲ್ಲಿಕಾರ್ಜುನ ಪಾಟಿಲ್, ಗುರುಸ್ವಾಮಿ, ಬಸವರಾಜ್ ತೋರಣ, ನಂದಕುಮಾರ್ ಸ್ವಾಮಿ, ಸಂಜು ಪಾಟೀಲ್, ಪುಷ್ಪ, ಡಾ. ಸುಭಾಷ್ ಪೋಲಾ, ಮೋಹನರಾವ್, ವೀರಶೆಟ್ಟಿ, ಉಮೇಶ್ ಲಕಶೆಟ್ಟಿ, ಡಾಕ್ಟರ್ ಸತೀಶ್ ಎಕ್ಕೆಳ್ಳಿಕರ್, ಶಿಮ್ರಾನ್,  ಸೋಮೇಶ್ವರ  ಮುಂತಾದವರು ಹಾಜರಿದ್ದರು.

Ghantepatrike kannada daily news Paper

Leave a Reply

error: Content is protected !!