ಬೀದರ್

ಹಾವು ಕಡಿದು ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಈಶ್ವರಸಿಂಗ್ ಠಾಕೂರ ಅವರಿಂದ ವೈಯಕ್ತಿಕ ನೆರವು

ಬೀದರ,ಆ.19:- ಭಾರತೀಯ ಜನತಾ ಪಾರ್ಟಿಯ ಕಲಬುರಗಿಯ ಸಂಘಟನಾ ಸಹ ಪ್ರಭಾರಿ  ಈಶ್ವರಸಿಂಗ್ ಠಾಕೂರ ಅವರು ಬೀದರ ತಾಲೂಕಿನ ಅಲಿಯಂಬರ (ಹಳೆಂಬರ) ಗ್ರಾಮದ ರೈತ ಮಹಿಳೆ ಮಹಾದೇವಿ ವಿಶ್ವನಾಥ ಮರಕಲೆ ಅವರು ದಿನಾಂಕ: 15-08-2023ರಂದು ಹಾವು ಕಡಿದು ಮೃತಪಟ್ಟಿರುತ್ತಾರೆ. ಮೃತ ಮಹಿಳೆಯ ಕುಟುಂಬಕ್ಕೆ ಇಂದು ಭೇಟಿ ನೀಡಿ ಸಾಂತ್ವನ ಹೇಳಿ ವೈಯಕ್ತಿಕ ಆರ್ಥಿಕ ನೆರವು ನೀಡಿ, ಪರಿವಾರದ ಸದಸ್ಯರಿಗೆ ಸರ್ಕಾರದಿಂದ ಉಚಿತ ಆರ್ಥಿಕ ನೆರವು ಕೊಡಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬೀದರ ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ರೈತ ಮೋರ್ಚಾದ ಉಪಾಧ್ಯಕ್ಷರಾದ ದೀಪಕ ಗಾದಗಿ, ಕರಬಸಪ್ಪ ಉಪ್ಪೆ, ನಾಗಶೆಟ್ಟಿ ಬಾಬಶೆಟ್ಟಿ, ಬಾಬುರಾವ ಮದನಾಪೂರೆ, ಶಿವಕುಮಾರ ಮಡಿವಾಳ, ಸಂಜುಕುಮಾರ ಡೊಣೆ, ನಾಗೇಶ ಬಾಬಶೆಟ್ಟಿ ಹಾಗೂ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!