ಬೀದರ್

ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಾಹಕರುಗಳಿಗೆ ಒಂದು ದಿನದ ವಿಶೇಷ ತರಬೇತಿ ಕಾರ್ಯಕ್ರಮ ಶಿಬಿರ

ಹುಮನಾಬಾದ: ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿ., ಬೆಂಗಳೂರು, ಬೀದರ ಜಿಲ್ಲಾ ಸಹಕಾರ ಯೂನಿಯನ್ ನಿ., ಬೀದರ, ಕಲಬುರಗಿ, ಬೀದರ ಹಾಗೂ ಯಾದಗೀರ ಹಾಲು ಒಕ್ಕೂಟ ಕಲಬುರುಗಿ ಮತ್ತು ಸಹಕಾರ ಇಲಾಖೆ, ಬೀದರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹುಮನಾಬಾದ ಮತ್ತು ಬಸವಕಲ್ಯಾಣ ತಾಲೂಕಿನಲ್ಲಿ ಬರುವ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಾಹಕರುಗಳಿಗೆ ಒಂದು ದಿನದ ವಿಶೇಷ ತರಬೇತಿ ಕಾರ್ಯಕ್ರಮ ಶಿಬಿರ ನಡೆಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಪಿ .ವಿ ಪಾಟೀಲ, ವ್ಯವಸ್ಥಾಪಕ ನಿರ್ದೇಶಕರು, ಕಲಬುರಗಿ, ಬೀದರ ಹಾಗೂ ಯಾದಗೀರ ಹಾಲು ಒಕ್ಕೂಟ, ಕಲಬುರಗಿ ಇವರು ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡುತ್ತಾ ಸಹಕಾರ ಕ್ಷೇತ್ರದಲ್ಲಿ ಪ್ರಮಾಣಿಕವಾಗಿ ಕೆಲಸ ಮಾಡಬೇಕು. ಸಹಕಾರ ಕ್ಷೇತ್ರದಲ್ಲಿ ಬರುವ ಸಹಕಾರಿಗಳಿಗೆ ಗರ್ವ, ದರ್ಪ ಇರಬಾರದು. ಎಲ್ಲರೂ ತನಗಾಗಿ, ತಾನು ಎಲ್ಲರಿಗಾಗಿ ಎಂಬ ಮನೋಭಾವ ಹೊಂದಿರಬೇಕು. ಪ್ರತಿಯೊಂದು ಹಾಲು ಉತ್ಪಾಧಕರ ಸ. ಸಂಘಗಳು ಕಾಲ ಕಾಲಕ್ಕೆ ತಕ್ಕಂತೆ ಸಂಘಗಳ ಲೆಕ್ಕಪರಿಶೋಧನೆ ಕಡ್ಡಾಯವಾಗಿ ಮಾಡಿಸಬೇಕು ಮತ್ತು ಸಂಘದ ವಾರ್ಷಿಕ ಮಹಾಸಭೆ ಕಡ್ಡಾಯವಾಗಿ ಜರುಗಿಸಬೇಕು ಎಂದು ತಿಳಿಸಿದರು. ಸಹಕಾರ ಕ್ಷೇತ್ರಕ್ಕೆ ಸರಕಾರವು ಬಹಳಷ್ಟು ಸಹಾಯ ಮಾಡುತ್ತಿದೆ. ಕರ್ನಾಟಕ ರಾಜ್ಯದಲ್ಲಿ ನಮ್ಮ ಒಕ್ಕೂಟವು 7ನೇ ಸ್ಥಾನದಲ್ಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ. ಪ್ರವೀಣ ಸಹಾಯಕ ವ್ಯವಸ್ಥಾಪಕರು, ಕಲಬುರಗಿ, ಬೀದರ ಹಾಗೂ ಯಾದಗೀರ ಹಾಲು ಒಕ್ಕೂಟ, ಕಲಬುರಗಿ ಇವರು ಮಾತನಾಡುತ್ತಾ ಹಾಲು ಉತ್ಪಾದಕರ ಸಹಕಾರ ಸಮಘಗಳು ಕಂಪ್ಯೂಟರಿಕರಣ ಅತಿ ಅಗತ್ಯ ಎಂದು ತಿಳಿಸಿದರು. ಕೇಂದ್ರ ಮತ್ತು ರಾಜ್ಯ ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಇನ್ನೋರ್ವ ಅತಿಥಿಗಳಾದ ಶ್ರೀ ಮಹೇಶ, ಸಹಾಯಕ ವ್ಯವಸಾಪ್ಥಕರು, ಕಲಬುರಗಿ, ಬೀದರ ಹಾಗೂ ಯಾದಗೀರ ಹಾಲು ಒಕ್ಕೂಟ, ಕಲಬುರಗಿ ಇವರು ಮಾತನಾಡುತ್ತಾ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಕಾಲ ಕಾಲಕ್ಕೆ ತಕ್ಕಂತೆ ಸಂಘಗಳ ಕಾಯಿದೆ ತಿದ್ದುಪಡಿ ಕುರಿತು ತರಬೇತಿ ನೀಡಬೇಕು. ಲಾಭದಲ್ಲಿರುವ ಸಂಘಗಳು ಸಹಕಾರ ಶಿಕ್ಷಣ ನಿಧಿ ಪಾವತಿಸಬೇಕು ಎಂದು ತಿಳಿಸಿದರು. ಹಸುಗಳು, ದನಗಳ ಆರೋಗ್ಯದ ಬಗ್ಗೆ ಗಮನ ಹರಿಸಿ ಅವುಗಳಿಗೆ ಸರಿಯಾದ ಚಿಕಿತ್ಸೆ ಕೊಡಿಸಬೇಕು ಎಂದು ತಿಳಿಸಿದರು. ಸರಿಯಾದ ರೀತಿಯಲ್ಲಿ ಹಾಲನ್ನು ಒದಗಿಸುವಂತೆ ಸದಸ್ಯರಲ್ಲಿ ತಿಳಿಹೇಳಬೇಕು. ಸದಸ್ಯರ ಜೊತೆ ಉತ್ತಮವಾದ ಬಾಂದವ್ಯ ಇದ್ದರೆ ಮಾತ್ರ ಸಂಘವು ಅಭಿವೃದ್ಧಿ ಹೊಂದುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಬೀರಪ್ಪ ವಿಸ್ತೀರಣಾಧಿಕಾರಿ, ಹುಮನಾಬಾದ , ಶ್ರೀ ಪ್ರವೀಣಕುಮಾರ ವಿಸ್ತರಣಾಧಿಕಾರಿ, ಬಸವಕಲ್ಯಾಣ , ಶ್ರೀ ಸಾಗರ , ವಿಸ್ತರಣಾಧಿಕಾರಿ , ಹಾಲು ಒಕ್ಕೂಟದ ಅಧಿಕಾರಿಗಳು ಮತ್ತು ಯೂನಿಯನ್ನಿನ ಅಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆ ಶ್ರೀ ಮಾರುತಿ ಜಿಲ್ಲಾ ಸಹಕಾರ ಶಿಕ್ಷಕರು ಜಿಲ್ಲಾ ಸಹಕಾರ ಯೂನಿಯನ್ ನಿ., ಬೀದರ ಮತ್ತು ವಂದನಾರ್ಪಣೆ ಶ್ರೀಮತಿ ಹೆಚ್. ಆರ್. ಮಲ್ಲಮ್ಮ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿಲ್ಲಾ ಸಹಕಾರ ಯೂನಿಯನ್ ನಿ., ಬೀದರ ಇವರು ನಡೆಸಿಕೊಟ್ಟರು.

Ghantepatrike kannada daily news Paper

Leave a Reply

error: Content is protected !!