ಬೀದರ್

ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ: ಬೆಳೆಗಳಿಗೆ ವಿಮೆ ನೊಂದಣಿ ಮಾಡಿಸಲು ರೈತಬಾಂಧವರಲ್ಲಿ ಮನವಿ


ಬೀದರ, ಜುಲೈ 21 – ಕರ್ನಾಟಕ ಸರ್ಕಾರದ ನಡುವಳಿಯಂತೆ 2023-24ನೇ ಸಾಲಿನ ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಸರ್ಕಾರದ ಆದೇಶದ ಪ್ರಕಾರ ಹೂಕೋಸು, ಹಸಿ ಮೆಣಸಿನಕಾಯಿ (ನೀ), ಶುಂಠಿ ಹಾಗೂ ಮಾವು ಬೆಳೆಗಳಿಗೆ ವಿಮೆ ನೊಂದಣಿ ಮಾಡಿಸಲು ಅವಕಾಶ ಇರುತ್ತದೆ.
ವಿಮಾ ನೊಂದಣಿಗೆ ಜುಲೈ 31 ಕೊನೆಯ ದಿನಾಂಕವಾಗಿರುತ್ತದೆ. ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆದ ರೈತರು ವಿಮೆ ನೊಂದಾಯಿಸಿಕೊಳ್ಳಲು ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿ ಹಾಗೂ ಸ್ವಯಂ ಘೋಷಿತ ದೃಢೀಕರಣ ಪತ್ರ ಒಳಗೊಂಡAತೆ ತಮ್ಮ ಸಮೀಪದ ಬ್ಯಾಂಕ್ ಶಾಖೆಗೆ ಸಂಪರ್ಕಿಸುವುದು. ಹವಾಮಾನ ಅಂಶಗಳಾದ ಮಳೆ ಪ್ರಮಾಣ, ಗಾಳಿಯ ವೇಗ, ಆರ್ಧತೆ ಇತ್ಯಾದಿ ಮಾಹಿತಿಗಳನ್ನು ಸ್ಥಳೀಯವಾಗಿ ಲಭ್ಯವಿರುವ ಟೆಲಿ ಮೆಟ್ರಿಕ್ ಮಳೆಮಾಪನ ಕೇಂದ್ರಗಳಲ್ಲಿ ದಾಖಲಿಸುವ ಅಂಶಗಳ ಆಧಾರದ ಮೇಲೆ ವಿಮೆ ನಷ್ಟವನ್ನು ತೀರ್ಮಾನಿಸಲಾಗುತ್ತದೆ.
ಬೀದರ ಜಿಲ್ಲೆಗೆ ಆಯ್ಕೆಯಾದ ಬೆಳೆಗಳ ಹೆಸರು ವಿಮಾ ಮೊತ್ತ ಮತ್ತು ವಿಮಾ ಕಂತಿನ ವಿವರ: ಹೂಕೋಸು ಪ್ರತಿ ಹೆಕ್ಟೇರಿಗೆ ವಿಮಾ ಮೊತ್ತ 62000 ರೂ., ರೈತರು ಹೆಕ್ಟೇರಿಗೆ ಪಾವತಿಸಬೇಕಾದ ವಿಮಾ ಕಂತಿನ ದರ ಶೇಕಡಾ (5%) 3100 ರೂ., ಹಸಿ ಮೆಣಸಿನಕಾಯಿ (ನೀ) ಪ್ರತಿ ಹೆಕ್ಟೇರಿಗೆ ವಿಮಾ ಮೊತ್ತ 71000 ರೂ., ರೈತರು ಹೆಕ್ಟೇರಿಗೆ ಪಾವತಿಸಬೇಕಾದ ವಿಮಾ ಕಂತಿನ ದರ ಶೇಕಡಾ (5%) 3550 ರೂ., ಶುಂಠಿ ಪ್ರತಿ ಹೆಕ್ಟೇರಿಗೆ ವಿಮಾ ಮೊತ್ತ 130000 ರೂ., ರೈತರು ಹೆಕ್ಟೇರಿಗೆ ಪಾವತಿಸಬೇಕಾದ ವಿಮಾ ಕಂತಿನ ದರ ಶೇಕಡಾ (5%) 6500 ರೂ., ಹಾಗೂ ಮಾವು ಬೆಳೆಗೆ ಪ್ರತಿ ಹೆಕ್ಟೇರಿಗೆ ವಿಮಾ ಮೊತ್ತ 80000 ರೂ., ರೈತರು ಹೆಕ್ಟೇರಿಗೆ ಪಾವತಿಸಬೇಕಾದ ವಿಮಾ ಕಂತಿನ ದರ ಶೇಕಡಾ (5%) 4000 ರೂ. ಇರುತ್ತದೆ.
ಪ್ರಸ್ತುತ ಸಾಲಿನಲ್ಲಿ ಯೋಜನೆವಾರು ಮತ್ತು ಬೆಳೆವಾರು ವಿವರಗಳನ್ನು ಆನ್‌ಲೈನ್ ಪೋರ್ಟಲ್ (ತಿತಿತಿ.sಚಿmಡಿಚಿಞshಚಿಟಿe.ಞಚಿಡಿಟಿಚಿಣಚಿಞಚಿ.gov.iಟಿ) ಮೂಲಕ ನೊಂದಾಯಿಸಲು ಎಲ್ಲಾ ಬ್ಯಾಂಕಿನ ಶಾಖೆಗಳಲ್ಲಿ ಸದರಿ ಸೌಲಭ್ಯಗಳ ಒದಗಿಸಲಾಗಿದ್ದು ರೈತಬಾಂಧವರು ತಮ್ಮ ಹತ್ತಿರ ಬ್ಯಾಂಕ ಶಾಖೆಗಳಲ್ಲಿ ವಿಮೆ ಮಾಡಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಹಾಗೂ ತಮ್ಮ ಗ್ರಾಮ ಪಂಚಾಯತಗೆ ಅನುಮೋದನೆಯಾದ ಬೆಳೆಗಳ ಬಗ್ಗೆ ತಿಳಿಯಲು ತಮ್ಮ ಸಂಬAಧಿಸಿದ ತಾಲೂಕಿನ ತೋಟಗಾರಿಕೆ ಕಛೇರಿಗಳಿಗೆ ಅಥವಾ ಸಮೀಪದ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಬೀದರ ಜಿಲ್ಲಾ ಪಂಚಾಯತ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Ghantepatrike kannada daily news Paper

Leave a Reply

error: Content is protected !!