ಸ್ವೀಕೃತಿ ಪತ್ರ ಸಿಕ್ಕಿದ್ರೆ ಮಾತ್ರ ‘ಗೃಹಲಕ್ಷ್ಮಿ’ಯ ಹಣ ಬರಲಿದೆ : ಸಚಿವೆಲಕ್ಷ್ಮೀ ಹೆಬ್ಬಾಳ್ವರ್
‘ಗೃಹಲಕ್ಷ್ಮಿ’ ಯೋಜನೆಗೆ ಸಂಬಂಧಪಟ್ಟಂತೆ ಸಚಿವೆ ಲಕ್ಷ್ಮೀ ಹೆಬ್ಬಾಳರ್ ಮಹತ್ವದ ಮಾಹಿತಿ ನೀಡಿದ್ದಾರೆ. ಗೃಹಲಕ್ಷ್ಮಿಗೆ ಅರ್ಜಿ ಹಾಕಿದ ಮಹಿಳೆಯರಿಗೆ ಅರ್ಜಿ ಸ್ವೀಕೃತಿಗೊಂಡ ಬಗ್ಗೆ ಸ್ವೀಕೃತಿ ಪತ್ರ ನೀಡಲಾಗುತ್ತದೆ. ಅಲ್ಲದೆ, ಎಸ್ಎಂಎಸ್ ಮೂಲಕ ಕೂಡ ಮಾಹಿತಿ ನೀಡಲಾಗುತ್ತದೆ. ಅರ್ಜಿ ಹಾಕಿದವರು ಸ್ವೀಕೃತಿ ಪತ್ರ ಪಡೆಯುವುದು ಕಡ್ಡಾಯವಾಗಿದೆ. ಸ್ವೀಕೃತಿ ಪತ್ರ ಸಿಕ್ಕಿದವರು ಮಾತ್ರ ಯೋಜನೆಗೆ ಅರ್ಹರು ಮತ್ತು ಅವರ ಖಾತೆಗೆ ಹಣ ಬರಲಿದೆ. ಅರ್ಜಿ ಸಲ್ಲಿಸುವಾಗ ವೆಬ್ ಸೈಟ್ ನಲ್ಲಿ ಆಧಾರ್ ಕಾರ್ಡ್ ಸಂಖ್ಯೆ ಹಾಕಲಾಗುತ್ತದೆ. ಈ ವೇಳೆ ಅರ್ಜಿ ಸಲ್ಲಿಸುವವರು ಆದಾಯ ತೆರಿಗೆ ಮತ್ತು ಜಿಎಸ್ ಟಿ ಪಾವತಿಸುತ್ತಿದ್ದರೆ ತಕ್ಷಣ ಗೊತ್ತಾಗುತ್ತದೆ. ಅಂಥವರಿಗೆ ಯೋಜನೆಯ ಪ್ರಯೋಜನ ಸಿಗುವುದಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ವರ್ ತಿಳಿಸಿದ್ದಾರೆ.