ಬೀದರ್

ಸ್ವಜನ ಪಕ್ಷಪಾತ ಒತ್ತಡ ಆಮಿಷಗಳಿಗೆ ಒಳಗಾಗಿ ಸಾಲ ನೀಡಿದಲ್ಲಿ ಸಂಸ್ಥೆಗೆ ನಷ್ಟ : ಪ್ರಧಾನ ವ್ಯವಸ್ಥಾಪಕ ವಿಠಲ ರೆಡ್ಡಿ

ರೈತರು ಗ್ರಾಮೀಣ ಜನರೇ ಸಹಕಾರಿ ಸಂಸ್ಥೆಗಳ ಬೆನ್ನೆಲುಬಾಗಿದ್ದಾರೆ. ಡಿಸಿಸಿ ಬ್ಯಾಂಕು ಮತ್ತು ಪ್ಯಾಕ್ಸಗಳು ರೈತಜನರಿಗಾಗಿಯೇ ಮುಡಿಪಾಗಿದ್ದು ಜನರ ಆವಶ್ಯಕತೆUಳಿಗನುಗುಣವಾಗಿ ಸೇವೆಗಳನ್ನು ಒದಗಿಸುವುದರ ಮೂಲಕ Àಊರಿನ ಅಭಿವೃದ್ದಿ ಮತ್ತು ಸಮಾಜದ ಆರ್ಥಿಕ ಅಭಿವೃದ್ದಿಗೆ ಕಾರಣವಾಗುತ್ತಿವೆ. ಜನರೇ ಸಂಘಟಿತರಾಗಿ ತಮಗೆ ಬೇಕಾದ ವ್ಯವಸ್ಥೆಗಳನ್ನು ಸೇವೆಗಳನ್ನು ತಾವೇ ರೂಪಿಸಿಕೊಳ್ಳುವದೇ ಸಹಕಾರದ ಧ್ಯೇಯವಾಗಿದೆ. ಸಹಕಾರೀ ಕ್ಷೇತ್ರದಲ್ಲಿ ಗ್ರಾಹಕ ಸೇವೆಯೇ ಪ್ರಧಾನವಾಗಿದೆ. ಸಹಕಾರಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವವರು ಅಧಿಕಾರಿಗಳಾಗಿದ್ದರೂ ಸೇವಕರಂತೆ ಕಾರ್ಯನಿರ್ವಹಿಸಬೇಕು. ಸಿಬ್ಬಂದಿಗಳಲ್ಲಿ ಸಮಯ ಪಾಲನೆ ಮತ್ತು ಪ್ರಾಮಾಣಿಕತೆ ಇದ್ದಾಗ ಜನರಲ್ಲಿ ಗ್ರಾಹಕರಲ್ಲಿ ಸಹಕಾರೀ ಸಂಸ್ಥೆಗಳ ಬಗ್ಗೆ ವಿಶ್ವಾಸ ಮೂಡುತ್ತದೆ. ವ್ಯವಹಾರ ಸಮರ್ಪಕವಾಗಿದ್ದಾಗ ಠೇವಣಿ ಪ್ರಮಾಣ ಜಾಸ್ತಿಯಾಗುತ್ತದೆ. ಸಾಲ ನೀಡಲು ಬಂಡವಾಳ ಹರಿದು ಬರುತ್ತದೆ. ಸಹಕಾರಿ ಹಣಕಾಸು ಸಂಸ್ಥೆಗಳ ಸಿಬ್ಬಂದಿಗಳು ಮತ್ತು ಆಡಳಿತ ಮಂಡಳಿಯವರು ಸಾಲ ನೀಡುವಾಗ ಬಹಳ ಎಚ್ಚರಿಕೆ ವಹಿಸಿ ನಿರ್ಧಾರ ಕೈಗೊಳ್ಳಬೇಕು. ಉತ್ತಮ ಗ್ರಾಹಕರಿಗೆ ಆಯ್ದು ಸಾಲ ನೀಡಬೇಕು. ಸ್ವಜನ ಪಕ್ಷಪಾತ ಒತ್ತಡ ಆಮಿಷಗಳಿಗೆ ಒಳಗಾಗಿ ಸಾಲ ನೀಡಿದಲ್ಲಿ ಸಂಸ್ಥೆಗೆ ನಷ್ಟವಾಗುವ ಸಂಭವ ಹೆಚ್ಚಾಗಿರುತ್ತದೆ. ಆಡಳಿತ ಮಂಡಳಿಗಳು ಸಾಲ ನೀಡುವುದಕ್ಕಿಂತಲೂ ಸಾಲ ವಸೂಲಾತಿಗೆ ಆದ್ಯತೆ ನೀಡಬೇಕು. ವಸೂಲಾತಿ ಹೆಚ್ಚಾದಾಗ ಬಡ್ಡಿ ಆಕರಣೆ ಹೆಚ್ಚಾಗುವುದರಿಂದ ಸಂಸ್ಥೆಗೆ ಲಾಭ ಆಗುತ್ತದೆ. ಇದರಿಂದ ಸದಸ್ಯರಿಗೆ ಲಾಭಾಂಶ ಹಂಚಿಕೆ ಹೆಚ್ಚಾಗುವುದರ ಜೊತೆಗೆ ಸಿಬ್ಬಂದಿಗಳಿಗೂ ಉತ್ತಮ ಸಂಬಳ ಸೌಲಭ್ಯಗಳು ಸಿಗುತ್ತವೆ. ಇಂದು ದೇಶದಾದ್ಯಂತ ಸಹಕಾರ ಸಂಸ್ಥಗೆಳನ್ನು ಕಂಪ್ಯೂಟರೀಕರಣಗೊಳಿಸುವ ಪ್ರಕ್ರಿಯೆ ಜಾರಿಯಲ್ಲಿದ್ದು ಆಧುನಿಕ ಬ್ಯಾಂಕಿಂಗ ಸೇವೆಯನ್ನು ರೈತರಿಗೆ ಒದಗಿಸುª ಈ ಅವಕಾಶವನ್ನು ಬಳಸಿಕೊಳ್ಳಬೇಕು. ದೇಶ ಕಟ್ಟುವ ಕಾಯಕದಲ್ಲಿ ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳಬೇಕು. ಸೇವೆಯೊಂದಿಗೆ ಲಾಭ ಸಿದ್ದಾಂತದಡಿಯಲ್ಲಿ ಸೇವೆ ನೀಡುವ ಸಹಕಾರಿ ಸಂಸ್ಥೆಗಳು ರೈತಪರ ಕಾಳಜಿಯೊಂದಿಗೆ ಸೇವೆ ನೀಡುವಲ್ಲಿ ಮೊದಲಿಗರಾಗಿರಬೇಕು. ಸಿಬ್ಬಂದಿಗಳು ತಂತ್ರಜ್ಞಾನವನ್ನು ಕಲಿಯಬೇಕು. ಆದುನಿಕ ಸೇವೆ ನೀಡಲು ಸಿಬ್ಬಂದಿಗಳಿಗೆ ತರಬೇತಿಗಳು ಆವಶ್ಯಕವಾಗಿವೆ ಈ ನಿಟ್ಟಿನಲ್ಲಿ ನಡೆಯುತ್ತಿರುವ ತರಬೇತಿಯಲ್ಲಿ ಉತ್ತಮವಾಗಿ ಎಲ್ಲರೂ ಭಾಗವಹಿಸಬೇಕು ಇದರ ಪೂರ್ಣಪ್ರಯೋಜನ ಪಡೆಯಬೇಕು ಎಂದು ಡಿಸಿಸಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ವಿಠಲ ರೆಡ್ಡಿ ಯಡಮಲ್ಲೆಯವರು ನುಡಿದರು.

ಬೀದರ ಡಿಸಿಸಿ ಬ್ಯಾಂಕಿನ ಡಾ|| ಗುರುಪಾದಪ್ಪಾ ನಾಗಮಾರಪಳ್ಳಿ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಕರ್ನಾಟಕ ರಾಜ್ಯ ಸಹಕಾರೀ ಮಹಾಮಂಡಲ ಮತ್ತು ಬೀದರ ಸಹಕಾರೀ ಯೂನಿಯನ ವತಿಯಿಂದ ಬೀದರ ಜಿಲ್ಲೆಯ ಆಯ್ದ ಪ್ಯಾಕ್ಸಗಳ ಮುಖ್ಯ ಕಾರ್ಯನಿರ್ವಾಹಕರಿಗೆ ನಡೆದ ಅನುತ್ಪಾದಕ ಆಸ್ತಿ ನಿರ್ವಹಣೆ ಮತ್ತು ಸಾಲ ವಸೂಲಾತಿ ಕ್ರಮಗಳ ತರಬೇತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಂಘಗಳ ಅಭಿವೃದ್ದಿಗೆ ಉತ್ತಮ ನಾಯಕತ್ವ ಬಹಳ ಮುಖ್ಯವಾಗಿದೆ. ಸಂಘಗಳ ಕಾರ್ಯಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿದಾಗ ಅನುಭವ ಸಿಗುತ್ತದೆ ಎಂದು ಹೇಳಿದರು.

ಸಮಾರಂಭದಲ್ಲಿ ಅಧ್ಯಕ್ಷ ಸ್ಥಾನ ವಹಿಸಿದ್ದ ಬೀದರ ಜಿಲ್ಲಾ ಸಹಕಾರ ಯೂನಿಯನ ಅಧ್ಯಕ್ಷರಾದ ಪರಮೇಶ್ವರ ಮುಗಟೆರವರು ಮಾತನಾಡಿ ತರಬೇತಿಗಳು ಹೊಸ ಕಾರ್ಯವಿಧಾನಗಳನ್ನು ಪರಿಚಯಿಸುವಲ್ಲಿ ಶಿಕ್ಷಣವನ್ನು ನೀಡುತ್ತವೆ. ಕೆಲಸ ಮಾಡುವಲ್ಲಿ ಸಿಬ್ಬಂದಿಗಳ ಉತ್ಸಾಹವನ್ನು ಹೆಚ್ಚಿಸುತ್ತವೆ. ತರಬೇತಿಗಳಲ್ಲಿ ಭಾಗವಹಿಸಿ ಜ್ಞಾನ ಹೆಚ್ಚಿಸಿಕೊಳ್ಳುವುದರ ಜೊತೆಗೆ ಅನುಭವವನ್ನು ಪಡೆಯಬಹುದಾಗಿದೆ. ತರಬೇತಿಗಳನ್ನು ಆಯೋಜಿಸಲು ಬೀzರ ಜಿಲ್ಲಾ ಸಹಕಾರ ಯೂನಿಯನ ಸದಾ ಸಿದ್ದವಿz. ಸಹಕಾರಿ ಸಂಸ್ಥೆಗಳ ಅಭಿವೃದ್ದಿಗಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತದೆ ಎಂದು ಹೇಳಿದರು.

ಸಮಾರಂಭದಲ್ಲಿ ಸಹಕಾರಿ ಯೂನಿಯನಿನ ನಿರ್ಧೇಶಕ ಗುಂಡಪ್ಪಾ ಕಾರ್ಯಕ್ರಮ ಸಹಾಯಕರಾದ ರೇಣುಕಾ, ಸಹಾರ್ದದ ಮಂಜುನಾಥ ಬಾಗವತ, ಎಸ್ ಜಿ ಪಾಟೀಲ ಅನಿಲ್ ಪರೇಶ್ಯಾನೆ ಮತ್ತು ತರಬೇತುದಾರ ಧಾರವಾಡದ ಈಶ್ವರ ಮಾದರ ಉಪಸ್ಥಿತರಿದ್ದರು. ಈಶ್ವರ ಮಾದರ ಅವರು ಸಾಲ ವಸೂಲಾತಿಯಲ್ಲಿ ಕೈಗೊಳ್ಳ ಬೇಕಾದ ಕಾನೂನು ಕ್ರಮಗಳು, ದಾವಾ ಹೂಡಿಕೆ ಮತ್ತು ಅದರಿಂದ ಎದುರಾಗುವ ಒತ್ತಡದ ಸನ್ನಿವೇಶಗಳ ನಿಭಾವಣೆ ಬಗ್ಗೆ ತರಬೇತಿ ನೀಡಿದರು. ಸಾಲ ನೀಡುವಾಗ ತೆಗೆದುಕೊಳ್ಳಬೇಕಾದ ದಾಖಲಾತಿಗಳ ಮಹತ್ವದ ಬಗ್ಗೆ ತಿಳಿಸಿದರು.

ಸಹಾರ್ದ ನಿರ್ದೇಶಕ ಬಿ. ಸುಬ್ರಹ್ಮಣ್ಯ ಪ್ರಭು, ತರಬೇತಿ ಉದ್ದೇಶಗಳನ್ನು ವಿವರಿಸಿದರು. ಸಹಕಾರೀ ರಂಗದ ಪುನಶ್ಚೇತನ ಮತ್ತು ಪರಿಣಾಮಕಾರಿ ಕಾರ್ಯನಿರ್ವಹಣೆಗಾಗಿ ಸಹಕಾರೀ ಸಚಿವಾಲಯದ ಸ್ಥಾಪನೆ ಆಗಿದ್ದು ಸಹಕಾರದಿಂದ ಸಮೃದ್ದಿ ಎಂಬ ತತ್ವÀದಡಿಯಲ್ಲಿ ಎಲ್ಲಾ ಸಹಕಾರ ಸಂಸ್ಥಗಳನ್ನು ಎಕರೂಪ ವ್ಯವಸ್ಥೆಯಡಿ ತರುವ ಪ್ರಯತ್ನವಾಗುತ್ತಿದೆ. ಸಹಕಾರೀ ಕ್ಷೇತ್ರಕ್ಕೂ ಆದುನಿಕತೆಯ ಸ್ಪರ್ಶ ನೀಡಲಾಗುತ್ತಿದೆ ಅದಕ್ಕಾಗಿ ಸಾಲ ನೀಡಿಕೆ ಮತ್ತು ವಸೂಲಾತಿ ಮಹತ್ವದ್ದಾಗಿದೆ ಎಂದು ವಿವರಿಸಿದರು ಮತ್ತು ಕಾರ್ಯಕ್ರಮ ನಿರ್ವಹಿಸಿದರು.

ಸಹಕಾರ ಯೂನಿಯನಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್ ಆರ್ ಮಲ್ಲಮ್ಮಾ ಅವರು ಸ್ವಾಗತಿಸಿದರೆ, ಶಿಕ್ಷಕ ಮಾರುತಿಯವರು ವಂದಿಸಿದರು.

Ghantepatrike kannada daily news Paper

Leave a Reply

error: Content is protected !!