ಸ್ವಚ್ಚತೆ ಜಾಗೃತಿ ಜನರಲ್ಲಿ ಅತ್ಯವಶ್ಯಕವಾಗಿದೆ-ಸಚಿವ ಈಶ್ವರ ಬಿ.ಖಂಡ್ರೆ
ಬೀದರ, ಆಗಸ್ಟ್ 15 – ನಗರಗಳು ಬೆಳೆದಂತೆ ತ್ಯಾಜ್ಯ ನಿರ್ವಹಣೆಯ ಸಮಸ್ಯೆ ಹೆಚ್ಚಾಗುತ್ತಿದ್ದು, ಜನರಲ್ಲಿ ಸ್ವಚ್ಚತೆಯ ಜಾಗೃತಿ ಅತ್ಯವಶ್ಯಕವಾಗಿದೆ, ಕಸವನ್ನು ಹಸಿ ಕಸ ಮತ್ತು ಒಣ ಕಸವನ್ನು ಸರಿಯಾಗಿ ವಿಂಗಡಣೆ ಮಾಡಿದರೆ ಆರೋಗ್ಯವಂತ ನಗರಗಳು ಆಗಿರುತ್ತವೆ ಎಂದು ಅರಣ್ಯ, ಜೈವಿಕ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಹೇಳಿದರು.
ಅವರು ಮಂಗಳವಾರ ನಗರಸಭೆ ವತಿಯಿಂದ ಶಿವನಗರ ಉದ್ಯಾನವನದಲ್ಲಿ ನಿರ್ಮಿಸಲಿರುವ ಪಿಂಕ್ ಓಪನ್ ಜಿಮ್ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಬೀದರ ಜಿಲ್ಲೆ ಇನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಆಗಬೇಕಾಗಿದೆ. ಈ ಹಿಂದೆ ನಾನು ಪೌರಾಡಳಿತ ಸಚಿವನಾಗಿದ್ದಾಗ 10 ರಿಂದ 20 ಉದ್ಯಾನವನಗಳು ಉದ್ಘಾಟನೆ ಮಾಡಿದ್ದೇನೆ. ಉದ್ಯಾನವನಗಳು ಮಕ್ಕಳು ಆಟವಾಡಲು ಅವರಿಗೆ ಮನರಂಜನೆ ನೀಡುತ್ತವೆ ಹಾಗೂ ಹಿರಿಯ ನಾಗರೀಕರು ಸೇರಿದಂತೆ ನಮಗೆಲ್ಲರಿಗೂ ಬೆಳಿಗ್ಗೆ ಹಾಗೂ ಸಂಜೆ ವಾಯು ವಿಹಾರ ಮಾಡಲು ಉತ್ತಮ ಸ್ಥಳಗಳಾಗಿವೆ ಎಂದರು.
ಬಹಳಷ್ಟು ಗ್ರಾಮೀಣ ಜನರು ಉದ್ಯೋಗ, ವ್ಯಾಪಾರ ಸೇರಿದಂತೆ ಇತರೆ ಕೆಲಸ ಕಾರ್ಯಗಳಿಗಾಗಿ ನಗರಗಳಿಗೆ ಹೆಚ್ಚಾಗಿ ಬರುತ್ತಿರುವುದರಿಂದ ಇಂದು ನಗರಗಳು ವೇಗ ಗತಿಯಲ್ಲಿ ಬೆಳೆಯುತ್ತಿರುವುದರಿಂದ ಅಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಆಗುತ್ತಿದ್ದು ಅವುಗಳ ಸುಧಾರಣೆ ಮಾಡಬೇಕಾಗಿದೆ ಎಂದರು.
ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಮ್ ಖಾನ್ ಅವರು ಮಾತನಾಡಿ, ಈ ಉದ್ಯಾನವನದಿಂದ ವಿಶೇಷವಾಗಿ ಮಹಿಳೆಯರು, ಹಿರಿಯರು ಹಾಗೂ ಮಕ್ಕಳಿಗೆ ತುಂಬಾ ಅನುಕೂಲವಾಗಲಿದೆ. ಬರುವ ಮುಂದಿನ ದಿನಗಳಲ್ಲಿ ಇತರೇ ಕಾಲೋನಿಗಳಲ್ಲಿಯೂ ಉದ್ಯಾನವನ ಮಾಡಲಾಗುವುದು. ಸಾರ್ವಜನಿಕರು ಉದ್ಯಾನವನಗಳಲ್ಲಿ ಸ್ವಚ್ಚತೆಯನ್ನು ಕಾಪಾಡುವುದರ ಜೊತೆಗೆ ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಅರವಿಂದಕುಮಾರ ಅರಳಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ., ಜಿಲ್ಲಾ ಪೊಲೀಸ್ ಅಧೀಕ್ಷಕ ಚನ್ನಬಸವಣ್ಣ ಲಂಗೋಟಿ, ಯೋಜನಾ ನಿರ್ದೇಶಕ ಮೋತಿಲಾಲ ಲಮಾಣಿ, ನಗರಸಭೆ ಆಯುಕ್ತ ಶಿವರಾಜ ರಾಠೋಡ, ಸದಸ್ಯರಾದ ರಾಜು ಚಿಂತಾಮಣಿ ಸೇರಿದಂತೆ ಶಿವನಗರ ಕಾಲೋನಿಯ ಜನರು ಉಪಸ್ಥಿತರಿದ್ದ