ಕಲಬುರಗಿ

ಸುಲೇಪೇಟ ಗ್ರಾಮದಲ್ಲಿ ವಿಶ್ವ ಆದಿವಾಸಿ ಬುಡಕಟ್ಟು ದಿನಾಚರಣೆ

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದಲ್ಲಿ ವಿಶ್ವ ಆದಿವಾಸಿ ಬುಡಕಟ್ಟು ದಿನಾಚರಣೆಯನ್ನು ಗ್ರಾಮ ಪಂಚಾಯತಿ ಆಚಿರಿಸಿದೆ.

ಕಾರ್ಯಕ್ರಮದಲ್ಲಿ ಅಲೆಮಾರಿ ಕುಟುಂಬದ ಮಕ್ಕಳಿಗೆ ನೋಟ್‌ಬುಕ್‌ಗಳು ಮತ್ತು ಲೆಕ್ಕಣಿಕೆಗಳನ್ನು ಹಾಗೂ ಕುಟುಂಬಗಳಿಗೆ ಹೊದಿಗೆ ಮತ್ತು ಟೋಪಿಗಳನ್ನು ಪೋಲಿಸ್ ಸಬ್‌ ಇನ್ಸ್‌ಪೆಕ್ಟರ್‌ ನಂದಿನಿ ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷ ಸಂತೋಷ ರಾಠೋಡ್ ವಿತರಣೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ನಿವೃತ್ತ ಮುಖ್ಯೋಪಧ್ಯಾಯ ಸಿರಾಜ್, ಯುವ ಮುಖಂಡ ರಜಾಕ್ ಪಟೇಲ್ ರೇವಣಸಿದ್ದಪ್ಪ ಸುಬೇದಾರ್, ಮಾರುತಿ ಗಂಜಗಿರಿ, ಗೋಪಾಲ ಗಾರಂಪಳ್ಳಿ ಗಮ್ಮು ರಾಠೋಡ, ಸುಭಾಷ್ ತಾಡಪಳ್ಳಿ, ಹಾಫೀಜ್ ಸರ್ದಾರ್, ಬಿಚ್ಚಪ ಭಜಂತ್ರಿ, ಹರ್ಷವರ್ಧನ ಚಿಮ್ಮನಕಟ್ಟಿ, ಮೌನೇಶ್ ಗಾರಂಪಳ್ಳಿ, ರಫೀಕ್ ಸಾಗರ ಹೊಸಳ್ಳಿ ಮುಂತಾದವರು ಇದ್ದರು.

Ghantepatrike kannada daily news Paper

Leave a Reply

error: Content is protected !!