ಸುಪ್ರಿಮ್ ಕೋರ್ಟಿನ ಹೇಳಿಕೆಯಂತೆ ಪ್ರತಿ ವರ್ಷ 10% ಸಾವುಗಳು ಕಡಿಮೆಯಾಗಬೇಕು ಶಿರೋಳಕರ
ಇಂದು ದಿನಾಂಕ 03-08-2023ರಂದು ಬೆಳಗ್ಗೆ 11:00 ಗಂಟೆಗೆ ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಸಂಚಾಲಿತ ಶ್ರೀ ವಿದ್ಯಾರಣ್ಯ ಪ್ರೌಢ ಶಾಲೆಯಲ್ಲಿ ಪ್ರಾದೇಶಿಕ ಸಾರಿಗೆ ಕಛೇರಿ, ಸಂಚಾರಿ ಪೋಲಿಸ ಠಾಣೆ ಹಾಗೂ ಬೀದರ ಮೋಟರ್ ವಾಹನ ತರಬೇತಿ ಶಾಲೆ ಸಂಘದ ಸಂಯುಕ್ತಾಶ್ರಯದಲ್ಲಿ ರಸ್ತೆ ಸುರಕ್ಷತೆ ಅಭಿಯಾನ-2023 ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಮುರುಗೇಂದ್ರ .ಎಸ್. ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಮಾತನಾಡಿದ ರಸ್ತೆ ಸಾರಿಗೆಯ ಸುರಕ್ಷತೆಯಲ್ಲಿ ಯಾವುದೇ ರೀತಿಯ ಅಪಘಾತಗಳು ಆಗದಂತೆ ನೋಡಿಕೊಳ್ಳುವುದು ಮತ್ತು ಸಣ್ಣ ಪುಟ್ಟ ಕೆಲಸಕ್ಕೆ ಪಾಲಕರು ಮಕ್ಕಳಿಗೆ ವಾಹನ ಕೊಡಬಾರದು. ಒಂದು ವೇಳೆ ವಾಹನ ನೀಡಿದರೆ ಕಾನೂನ ಬಾಹಿರವಾಗುವುದು. ಸುಪ್ರಿಮ್ ಕೋರ್ಟಿನ ಹೇಳಿಕೆಯಂತೆ ರಸ್ತೆ ಅಪಘಾತದಲ್ಲಿ ಪ್ರತಿ ವರ್ಷ 10% ಸಾವುಗಳು ಕಡಿಮೆಯಾಗಬೇಕು, ರಸ್ತೆಯ ಮೇಲೆ ಬರುವ ಚಿಹ್ನೆ ನೋಡಿ ರಸ್ತೆ ಸಂಚಾರಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ರಸ್ತೆ ಅಪಘಾತಕ್ಕೆ ಒಳಗಾದ ವ್ಯಕ್ತಿಗಳು ಬಹಳಷ್ಟು ಚಾಲಕರು ವಿಕಲಚೇತನರಾಗುತ್ತಿದ್ದಾರೆ, ಅವರ ಕುಟುಂಬದ ಜವಾಬ್ದಾರಿ ಅವರಮೇಲಿದ್ದರೆ ಅವರ ಕಟುಂಬ ಕುಂಠಿತವಾಗುತ್ತದೆ. ರಸ್ತೆಯ ಮೇಲೆ ಬರುವಾಗ ವಿದ್ಯಾರ್ಥಿಗಳು ಗುಂಪಾಗಿ ಬಂದು ಸಂಚಾರಕ್ಕೆ ಅಡಚಣೆ ಮಾಡಬಾರದು.
ಸಂಚಾರಿ ಪೋಲಿಸ ಠಾಣೆಯ ಪಿ.ಐ. ಕಪೀಲ್‍ದೇವ್.ಎ.ಜಿ. ಅವರು ಮಕ್ಕಳಿಗೆ ಉದ್ದೇಶಿಸಿ ತಮ್ಮ ತಂದೆ, ಅಣ್ಣತಮ್ಮಂದಿರು ಹಾಗೂ ಸಂಬಂಧಿಕರ ಬಳಿ ಇರುವ ವಾಹನಗಳಿಗೆ ಆರ್.ಸಿ. ರಿನಿವಲ್, ಪಿ.ಯು.ಸಿ., ವಾಹನ ವಿಮೆ ಕಡ್ಡಾಯವಾಗಿ ತಪಾಸಣೆ ಮಾಡಬೇಕು. ಮನೆಯಿಂದ ವಾಹನ ಚಲಾಯಿಸಿಕೊಂಡು ಹೊರಹೊಗುವಾಗ ಕುಟುಂಬಸ್ತರಿಗೆ ಕಡ್ಡಾಯವಾಗಿ ಹೆಲ್ಮೇಟ್ ಧರಿಸಬೇಕೆಂದು ಮನವಿ ಮಾಡಬೇಕು ಹಾಗೂ ದ್ವಿ-ಚಕ್ರವಾಹನ ಮೇಲೆ ಮೂರು ಜನ ಸವಾರಿ ಮಾಡಬಾರದು ಹಾಗೂ ವಾಹನ ಚಲಾಯಿಸುವಾಗ ಹೆಡ್-ಫೋನ್ ಬಳಕೆ, ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು. ಕಾರ್ ಚಾಲಕರು ಕಡ್ಡಾಯವಾಗಿ ಸಿಟ್ ಬೇಲ್ಟ್ ಧರಿಸಬೇಕು. ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುವುದರೊಂದಿಗೆ ಸಂಚಾರಿ ನಿಯಮಗಳ ಸಂಚಾರಿ ಚಿಹ್ನೆ ಓದಲು ಹವ್ಯಾಸ ಬಳಸಿಕೊಳ್ಳಬೇಕು. ಸಂಚಾರಿ ನಿಯಮಗಳು ಪಾಲನೆ ಮಾಡುವುದರಿಂದ ರಸ್ತೆ ಅಪಘಾತಗಳು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿಕೊಂಡ ಸಂಸ್ಥೆಯ ಕೋಶಾಧ್ಯಕ್ಷರಾದ ಎನ್. ಕೃಷ್ಣಾರೆಡ್ಡಿ ಅವರು ಮಾತನಾಡಿ ಎಲ್ಲ ವಿದ್ಯಾರ್ಥಿಗಳು ಈ ಕಾರ್ಯಕ್ರಮ ಸದುಪಯೋಗ ಪಡೆದುಕೊಂಡು ಕಡ್ಡಾಯವಾಗಿ ವಿದ್ಯಾರ್ಥಿಗಳು ತಮ್ಮ ಪಾಲಕರಿಗೆ ಈ ಕಾರ್ಯಕ್ರಮದ ಕುರಿತು ಅರಿವು ಮೂಡಿಸಬೇಕು.
ವೇದಿಕೆ ಮೇಲೆ ಶ್ರೀ ವಿದ್ಯಾರಣ್ಯ ಪ್ರೌಢ ಶಾಲೆಯ ಮುಖ್ಯಗುರುಗಳಾದ ಪ್ರತಿಭಾ ಚಾಮಾ, ಬೀದರ ಮೋಟಾರ್ ವಾಹನ ತರಬೇತಿ ಶಾಲೆಯ ಉಪಧ್ಯಕ್ಷರಾದ ಶಿವರಾಜ ಜಮಾದಾರ ಖಾಜಾಪೂರ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಪ್ರಾದೇಶಿಕ ಸಾರಿಗೆ ಕಛೇರಿಯ ಸಿಬ್ಬಂಧಿ ವೀರೆಂದ್ರ ಎಂ. ಹಾಗೂ ದತ್ತಾತ್ರಿ ಅಷ್ಟಗಿರಕ, ಪಿ.ಸಿ. ಸಂಜುಕುಮಾರ ಚಿಕ್ಕಬಸ್ಸೆ ಹಾಗೂ ಶಾಲೆಯ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಿದರು.
ಕು. ಲಕ್ಷ್ಮೀ ಮತ್ತು ಕು. ದೃಷ್ಟಿ ಶಾಲಾ ಪ್ರಾರ್ಥನೆ ಮಾಡಿದರು. ಬಾಲಾಜಿ ರಾಠೋಡ್ ನಿರೂಪಣೆ ಮಾಡಿದರೆ ಶಿವಪುತ್ರ ನೆಳಗೆ ವಂದಿಸಿದರು.