ಸುನೀತಾ ಚನ್ನಬಸವ ಗೌರವ ಡಾಕ್ಟರೇಟ್ ಪ್ರಶಸ್ತಿ, ಸನ್ಮಾನ.
ಬೀದರ: ಶ್ರೀಮತಿ ಸುನೀತಾ ಚನ್ನಬಸವ ಬಿಕ್ಲೆ ಇವರು ಕಳೆದ 15 ವರ್ಷಗಳಿಂದ ಸಮಾಜ ಸೇವೆಯಲ್ಲಿ ನಿರಂತರವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಸದರಿಯವರು ಸಮಾಜ ಸೇವೆ ಅಲ್ಲದೇ ಕವನಗಳು ಬರೆಯುವುದು, ಅನೇಕ ಕಾರ್ಯಕ್ರಮಗಳಲ್ಲಿ ನಿರೂಪಣೆ, ಉಪನ್ಯಾಸ, ಸಂಗೀತ ಕಾರ್ಯಕ್ರಮ ಇನ್ನೂ ಅನೇಕ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಛಾಪು ಮೂಡಿಸಿದ್ದಾರೆ.
ಸದರಿಯವರ ಸೇವೆಯನ್ನು ಅರಿತ ಏಶಿಯಾ ಇಂಟರ್‌ನ್ಯಾಷ್ನಲ್ ಕಲ್ಚರ್ ಅಕಾಡೆಮಿ ಹೊಸುರು ವತಿಯಿಂದ ಡಾ. ಕೆ.ಎ. ಮನುಕರಟ, ಡಾ. ಜೆ. ಹರಿದಾಸ, ಡಾ. ಎಸ್.ವಿ. ರಾವ, ಎಂ.ಡಿ. ಚೇತನ ಶರ್ಮಾ, ವಿಜಯರಾಜ ಗುರುಜಿ, ಡಾ. ರವಿಂದ್ರನಾಥ ಗುರುಜಿ ಇವರು ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ, ಗೌರವಿಸಿದರು