ಸಿದ್ಧಾರೂಢ ಮಠ: 22 ರಿಂದ ಪ್ರವಚನ
ಬೀದರ್: ಶ್ರಾವಣ ಪ್ರಯುಕ್ತ ನಗರದ ಸಿದ್ಧಾರೂಢ ಮಠದಲ್ಲಿ ಆಗಸ್ಟ್ 22 ರಿಂದ ಒಂದು ತಿಂಗಳ ಪ್ರವಚನ ಹಮ್ಮಿಕೊಳ್ಳಲಾಗಿದೆ.
ಮಠದ ಪೀಠಾಧಿಪತಿ ಡಾ. ಶಿವಕುಮಾರ ಸ್ವಾಮೀಜಿ ಅವರು ನಿತ್ಯ ಸಂಜೆ 6.30ಕ್ಕೆ ಆಧ್ಯಾತ್ಮ ಪ್ರವಚನ ನಡೆಸಿಕೊಡಲಿದ್ದಾರೆ.
ಪ್ರತಿ ದಿನ ಬೆಳಿಗ್ಗೆ 7ಕ್ಕೆ ಸಿದ್ಧಾರೂಢರ ಮಹಾ ರುದ್ರಾಭಿಷೇಕ, ಶೀಗಳ ಪಾದಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸದ್ಗುರು ಕೃಪೆಗೆ ಪಾತ್ರರಾಗಬೇಕು ಎಂದು ಮಠದ ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ ಕೋರಿದ್ದಾರೆ.