ಬೀದರ್

ಸಿಡಿಲು ಬಡಿದು ಎತ್ತುಗಳು ಸಾವು ಗ್ರಾ.ಪಂ ಅಧ್ಯಕ್ಷರಿಂದ ಸಹಾಯ ಧನ

ಬೀದರ ತಾಲೂಕಿನ ಕೊಳಾರ(ಕೆ) ಪಂಚಾಯತ ವ್ಯಾಪ್ತಿಯಲ್ಲಿ ಬರುವ ಬಕಚೌಡಿ ಗ್ರಾಮದಲ್ಲಿ ಜೂನ್17 ರಂದು ಸಿಡಿಲು ಬಡಿದು ಸುಮಾರು 2 ಲಕ್ಷ ಬೆಲೆ ಬಾಳುವ 2 ಎತ್ತುಗಳು ಮೃತಪಟ್ಟಿರುತ್ತವೆ. ಇವುಗಳು ಬಡ ರೈತ ಚನಬಸಪ್ಪ ಅವರ ಜೀವನಕ್ಕೆ ಆಶ್ರಯವಾಗಿರುತ್ತದೆಂದು ತಿಳಿದು ಗ್ರಾಮ ಪಂಚಾಯತ ಅಧ್ಯಕ್ಷರಾದ ಪ್ರಶಾಂತ ಶರಗಾರ ಅವರು 10000 (ಹತ್ತುಸಾವಿರ) ರೂಪಾಯಿಗಳ ವೈಯಕ್ತಿಕವಾಗಿ ಹಾಗೂ 15000 ರೂಪಾಯಿ ಪಂಚಾಯತವತಿಯಿAದ ಸಹಾಯ ಮಾಡಿರುತ್ತಾರೆ.
ಈ ಸಮಯದಲ್ಲಿ ಮಾಜಿ ಪಂಚಾಯತ ಅಧ್ಯಕ್ಷರಾದ ಗಣೇಶರಡ್ಡಿ ಪಂಚಾಯತ ಸದಸ್ಯರಾದ ರವಿಕುಮಾರ ಬಿರಾದಾರ ಹಾಗೂ ವಿಜಯಕುಮಾರ ಭಾವಿಕಟ್ಟಿ ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!