ಸಿಇಪಿಟಿ ಶೀಘ್ರ ಪ್ರಾರಂಭಿಸಿ :ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ
ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಸಿಇಪಿಟಿ ಘಟಕ ಆರಂಭಗೊಳ್ಳದ ಕಾರಣ ಕೈಗಾರಿಕೆಗಳವರು ರಾಸಾಯನಿಕ ನೀರನ್ನು ಸಣ್ಣ ನಾಲೆಗಳ ಮೂಲಕ ನೇರವಾಗಿ ಬಯಲು ಪ್ರದೇಶಕ್ಕೆ ಹರಿಸುತ್ತಿದ್ದಾರೆ ಹೀಗಾಗಿ ಕೈಗಾರಿಕಾ ಪ್ರದೇಶದ ಸುತ್ತಲಿರುವ ನೀರು ಕಲುಷಿತಗೊಳ್ಳುತ್ತಿದೆ ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಿ ಘಟಕ ಪ್ರಾರಂಭಿಸಬೇಕು ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಬೀದರ್ ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೊಳಾರ (ಕೆ) ಕೈಗಾರಿಕಾ ಪ್ರದೇಶದಲ್ಲಿರುವ ವಿವಿಧ ಕಂಪೆನಿಗಳ ರಾಸಾಯನಿಕ ಕೈಗಾರಿಕೆಗಳ ವಿಷಪೂರಿತ ನೀರನ್ನು ಸಂಸ್ಕರಿಸಿ ಪುನರ್ ಬಳಕೆಗೆ ಯೋಗ್ಯಗೊಳಿಸಲು ಬೀದರ್ ದಕ್ಷಿಣ ಕ್ಷೇತ್ರದ ಕೊಳಾರ(ಕೆ) ಕೈಗಾರಿಕೆ ಪ್ರದೇಶದಲ್ಲಿ ನಿರ್ಮಿಸಿರುವ ‘ಕಾಮನ್ ಎಫ್ಲೂಯೆಂಟ್ ಟ್ರೀಟ್‌ಮೆಂಟ್ ಪ್ಲಾಂಟ್’ (ಸಿಇಪಿಟಿ) ಸಿದ್ಧಗೊಂಡು ವರ್ಷಗಳೇ ಕಳೆದರೂ ಕಾರ್ಯಾರಂಭ ಮಾಡದ ಕಾರಣ ಇದರ ಪರಿಣಾಮ ವಿಷಯುಕ್ತ ನೀರು ಅಂತರ್ಜಲ ಸೇರುತ್ತಿರು ಹಿನ್ನೆಲೆಯಲ್ಲಿ ಶಾಸಕರಾದ ಡಾ ಶೈಲೇಂದ್ರ ಬೆಲ್ದಾಳೆ ಅವರು ಖುದ್ದ ತಾವೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಕೇಂದ್ರ ಸರ್ಕಾರದ ₹೪೪.೩೪ ಕೋಟಿ ಅನುದಾನದಲ್ಲಿ ೧೫ ಎಕರೆಯಲ್ಲಿ ಸುಸಜ್ಜಿತ ಸಿಇಪಿಟಿ ಘಟಕ ನಿರ್ಮಿಸಿದೆ. ೨೦೧೭–೧೮ರಲ್ಲಿ ಕೈಗೆತ್ತಿಕೊಂಡಿದ್ದ ಕೆಲಸ ಎರಡು ವರ್ಷಗಳ ಹಿಂದೆಯೇ ಪೂರ್ಣಗೊಂಡಿದೆ. ಆದರೆ, ಇದುವರೆಗೆ ಅದು ಕೆಲಸವೇ ಆರಂಭಿಸದಿರಲು ಕಾರಣ ಏನು?
ಈ ವಿಷಯ ಕುರಿತು ಬೆಳಗಾವಿ ಅಧಿವೇಶನದಲ್ಲೂ ಧ್ವನಿ ಎತ್ತಲಿದ್ದೇನೆ ಎಂದರು.
ಸಿಇಪಿಟಿ ಘಟಕವು ೧.೨ ಎಂಎಲ್‌ಡಿ ರಾಸಾಯನಿಕ ನೀರನ್ನು ಸಂಸ್ಕರಿಸಿ ಪುನರ್ ಬಳಕೆಗೆ ಯೋಗ್ಯಗೊಳಿಸುವ ಸಾಮರ್ಥ್ಯ ಹೊಂದಿದೆ. ಕುಡಿಯಲು ಹೊರತುಪಡಿಸಿ ಇತರೆ ಉದ್ದೇಶಗಳಿಗೆ ಸಂಸ್ಕರಿಸಿದ ನೀರು ಬಳಸಬಹುದಾಗಿದೆ ಈ ಘಟಕ ಪ್ರಾರಂಭಿಸಿದರೆ ಉತ್ತಮವಾಗುತ್ತದೆ. ಈ ಘಟಕ ಪ್ರಾರಂಭವಾಗದ ಕಾರಣ ಕೆಲವು ಕೈಗಾರಿಕೆಗಳು ಟ್ಯಾಂಕರ್‌ಗಳ ಮೂಲಕ ರಾಸಾಯನಿಕ ಕೊಳಚೆ ನೀರನ್ನು ತಡರಾತ್ರಿ ಹೊಲಗಳ ಸುತ್ತಮುತ್ತ ಹರಿಸಿ ಹೋಗುತ್ತಿದ್ದಾರೆ. ಮತ್ತೆ ಕೆಲವೆಡೆ ನೆಲದಲ್ಲಿ ಗುಂಡಿ, ಕೊಳವೆಬಾವಿಗಳನ್ನು ನಿರ್ಮಿಸಿ ಅದರೊಳಗೆ ವಿಷಕಾರಕ ನೀರು ಹರಿಸುತ್ತಿದ್ದಾರೆ. ಮಳೆ ಬಂದಾಗ ವಿಷಯುಕ್ತ ನೀರು ಎಲ್ಲೆಡೆ ಹರಿದು ಸುತ್ತಮುತ್ತಲಿನ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಇದರಿಂದ ಬೆಳೆಗಳ ಇಳುವರಿ ಕೂಡ ಕುಂಠಿತಗೊAಡಿರು ದೂರುಬಂದಿದೆ ತಕ್ಷಣ ಅಧಿಕಾರಿಗಳು ಎಚ್ಚೆತ್ತುಕೊಂಡು ಕೂಡಲೇ ಸಿಇಪಿಟಿ ಘಟಕವು ಪ್ರಾರಂಭಿಸಬೇಕು ಇಲ್ಲವಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಶಾಸಕರಾದ ಡಾ ಶೈಲೇಂದ್ರ ಬೆಲ್ದಾಳೆ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಮುಖಂಡರಾದ ಶಿವಕುಮಾರ ಸ್ವಾಮಿ, ಉಮೇಶ ಯಾಬಾ ಮತ್ತಿತರರು ಉಪಸ್ಥಿತರಿದ್ದರು.