ಬೀದರ್

ಸಾಹಿತ್ಯ ಪರಿಷತ್ತಿಗೆ ಇಂಜಿನಿಯರ್‍ಗಳ ಕೊಡುಗೆ ಅಪಾರ – ಸುರೇಶ ಚನಶೆಟ್ಟಿ

ಕನ್ನಡ ಸಾಹಿತ್ಯ ಸಾಹಿತ್ಯ ಪರಿಷತ್ತು ಹುಟ್ಟುವಲ್ಲಿ ಇಂಜಿನಿಯರ್ ಆಗಿದ್ದ ಸರ್ ಎಂ. ವಿಶ್ವೇಶ್ವರಯ್ಯನವರ ಪಾತ್ರ ದೊಡ್ಡದಾಗಿರುವ ಕಾರಣ ಇಂಜಿನಿಯರ್‍ಗಳ ಕೊಡುಗೆ ಅವಿಸ್ಮರಣೀಯವೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ ಚನಶೆಟ್ಟಿ ನುಡಿದರು.

ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಹಾಗೂ ಶ್ರೀ ಅಶೋಕ ಖೇಮಶೆಟ್ಟೆ ಅಭಿಮಾನಿ ಬಳಗ ಆಯೋಜಿಸಿದ ಶ್ರೀ ಅಶೋಕ ಖೇಮಶೆಟ್ಟೆ ಸಹಾಯಕ ಅಭಿಯಂತರರು, ಕರ್ನಾಟಕ ಲೋಕೋಪಯೋಗಿ ಇಲಾಖೆ, ಭಾಲ್ಕಿ. ಇವರ ವಯೋನಿವೃತ್ತಿಯ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ನಿಷ್ಠೆ ಮಾತ್ತು ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿದವರನ್ನು ಗೌರವಿಸುವುದು ನಾಗರಿಕ ಸಮಾಜದ ಆದ್ಯ ಕರ್ತವ್ಯವಾಗಿದ್ದು ಅದನ್ನು ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಮರ್ಥವಾಗಿ ನಿರ್ವಹಿಸುತ್ತಿದೆ. ಅಲ್ಲದೆ ಸಂಸ್ಕøತಿ ಹಾಗೂ ಸಂಸ್ಕಾರಕ್ಕೆ ಹೆಸರಾದ ಖೇಮಶೆಟ್ಟೆ ಪರಿವಾರದ ಅಶೋಕ ಖೇಮಶೆಟ್ಟೆ ತಮ್ಮ ಕರ್ತವ್ಯವನ್ನು ಪ್ರಾಮಾಣಿಕ ದೃಷ್ಟಿಯಿಂದ ನೆರವೇರಿಸಿದ್ದನ್ನು ನೆನಪಿಸಿದರು.

ಕರ್ನಾಟಕ ಸರ್ಕಾರದ ಕರ್ನಾಟಕ ಲೋಕೋಪಯೋಗಿ ಇಲಾಖೆಯ ನಿವೃತ್ತ ಕಾರ್ಯದರ್ಶಿಗಳಾದ ಪಿ. ಸಿದ್ದಪ್ಪ ಸಮಾರಂಭ ಉದ್ಘಾಟಿಸಿ ಮಾತನಾಡುತ್ತ ಲೋಕೋಪಯೋಗಿ ಇಲಾಖೆಯು ಅನೇಕ ಸಾರ್ವಜನಿಕ ಕೆಲಸ ಮಾಡಬಹುದಾದ ಜನೋಪಯೋಗಿ ಇಲಾಖೆಯಾಗಿದ್ದು ಅನೇಕ ಒತ್ತಡಗಳ ಮಧ್ಯೆಯೂ ಹಾಗೂ ಗುಣಾತ್ಮಕ ಕಾಮಗಾರಿ ಮಾಡುವ ಪ್ರಮುಖ ಜವಾಬ್ದಾರಿ ಸಹಾಯಕ ಅಭಿಯಂತರದ್ದಾಗಿದೆ. ಅದನ್ನು ಅಶೋಕ ಖೇಮಶಟ್ಟಿಯವರು ಅತ್ಯಂತ ಕಾಳಜಿ ಪೂರ್ವಕವಾಗಿ ನಿಭಾಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರೆಂದು ನುಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಘಟಕದ ಅಧ್ಯಕ್ಷರಾದ ರಾಜೇಂದ್ರ ಕುಮಾರ ಗಂದಗೆಯವರು ಮಾತನಾಡುತ್ತ ನಿವೃತ್ತ ಸರಕಾರಿ ನೌಕರರ ಗೌರವಾರ್ಥವಾಗಿ ಶೀಘ್ರದಲ್ಲೆ ನಿವೃತ್ತ ಸರಕಾರಿ ನೌಕರರ ಸಮ್ಮೇಳನ ಆಯೋಜಿಸಲಾಗುವುದೆಂದು ಹೇಳಿದರು.
ಜಿಲ್ಲಾ ಬಸವಕೇಂದ್ರದ ಅಧ್ಯಕ್ಷರಾದ ಶರಣಪ್ಪ ಮಿಠಾರೆಯವರು ಮಾತನಾಡುತ ಕ್ರಿಯಾಶೀಲರಾದವರು ನಿವೃತ್ತರಾದರೆ ವೃತ್ತಿಯಿಂದ ಮಾತ್ರ ನಿವೃತ್ತಿ ಪ್ರವೃತ್ತಿಯಿಂದ ಸಮಾಜಕ್ಕೆ ತೊಡಗಿಸಿಕೊಂಡಂತೆ. ಹಾಗಾಗಿ ಕಾಯಕವೇ ಪೂಜೆಯೆಂದು ನಂಬಿರುವ ಅಶೋಕ ಖೇಮಶಟ್ಟಿಯವರದ್ದು ಸತ್ಯಶುದ್ಧ ಕಾಯಕವೆಂದು ಬಣ್ಣಿಸಿದರು. ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಕುಶಾಲ ಯಾಬಾ ಅವರು ಮಾತನಾಡುತ್ತ ವೈಯಕ್ತಿಕ ಬದುಕು ಬದುಕಲ್ಲ ಸಾಮಾಜಿಕ ಜೀವನವೇ ನಿಜವಾದ ಬದುಕು ಅದನ್ನು ಖೇಮಶಟ್ಟಿಯರು ನಿಭಾಯಿಸುತ್ತಿದ್ದು ಎಂಥ ಕಷ್ಟದ ದಿನಗಳಲ್ಲಿಯೂ ಎದೆಗುಂದದೆ ಬದುಕನ್ನು ಎದುರಿಸಿದ್ದಾರೆಂದು ನುಡಿದರು.
ಹೆಡಗಾಪುರ ಹಿರೇಮಠ ಸಂಸ್ಥಾನದ ಪೂಜ್ಯ ಶ್ರೀ ಷ ಬ್ರ. ಶಿವಲಿಂಗ ಶಿವಾಜಾರ್ಯರು ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಡಾ. ಬಸವರಾಜ ಬಲ್ಲೂರ ಪ್ರಸ್ತಾವಿಕ ನುಡಿ ನುಡಿದರು. ಇದೆ ಸಂದರ್ಭದಲ್ಲಿ ನಿವೃತ್ತ ಸಹಾಯಕ ಅಭಿಯಂತರಾದ ಅಶೋಕ ಖೇಮಶೆಟ್ಟೆ ಹಾಗೂ ಕವಿತಾ ಖೇಮಶೆಟ್ಟೆ ಅವರನ್ನು ಸನ್ಮಾನಿಸಲಾಯಿತು. ಶಿವಶಂಕರ ಟೋಕರೆ, ವಿದ್ಯಾವತಿ ಬಲ್ಲೂರ ರಾಜಮ್ಮ ಚಿಕಪೆಟೆ, ಕರುಣಾದೇವಿ ಜೀರ್ಗೆ, ಈಶ್ವರಮ್ಮ ಪಾಟೀಲ ಮೊದಲಾದವರು ಸ್ವರಚತ ಕವನ ವಾಚನ ಮಾಡಿದರು. ರಾಜಮ್ಮ ಚಿಕಪೆಟೆ ಸ್ವಾಗತಿಸಿದರೆ ಟಿ. ಎಂ. ಮಚ್ಚೆ ನಿರೂಪಿಸಿದರು. ವಿದ್ಯಾವತಿ ಬಲ್ಲೂರ ವಂದಿಸಿದರು.

Ghantepatrike kannada daily news Paper

Leave a Reply

error: Content is protected !!