ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘಕ್ಕೆ ನೇಮಕ – ಗೌರವ ಸನ್ಮಾನ
ಬೀದರ: ಶಾಂತಿಕಿರಣ ಶಿಕ್ಷಣ ಸಂಸ್ಥೆಯ ಅಡಿಯಲ್ಲಿನ ಬೀದರ ತಾಲೂಕಿನ ಚಿಮಕೋಡ ಗ್ರಾಮದಲ್ಲಿರುವ ಗುರುಕೃಪಾ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಶಾಂತಾಬಾಯಿ ಬಿರಾದಾರ ಹಾರೂರಗೇರಿಯವರು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಪ್ರಯುಕ್ತ ಗುರುಕೃಪಾ ಶಾಲೆಯಲ್ಲಿ ಸನ್ಮಾನಿಸಲಾಯಿತು. ಇವರ ಈ ಆಯ್ಕೆಗೆ ಸಂಸ್ಥೆಯ ಅಧ್ಯಕ್ಷ ಚಂದ್ರಕಾಂತ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿ ‘ಗಡಿಭಾಗದ ನಮ್ಮ ಗುರುಕೃಪಾ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಲೇ ಶಿಕ್ಷಕಿರ ಸಂಘದ ಸಂಘಟನೆಗಳಲ್ಲಿ ಕ್ರಿಯಾಶೀಲರಾಗಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದು ಹರ್ಷ ತಂದಿದೆ. ಇದು ನಮ್ಮ ಶಾಲೆಗೆ ಮಾತ್ರವಲ್ಲ ಇಡೀ ಜಿಲ್ಲೆಗೆ ಕೀರ್ತಿ ತರುವ ವಿಷಯವಾಗಿದೆ ಎಂದು ಶ್ಲಾಘಿಸಿದರು. ಇವರ ಈ ಆಯ್ಕೆಗೆ ಸಂಸ್ಥೆಯ ಅಧ್ಯಕ್ಷ ಚಂದ್ರಕಾಂತ ಪಾಟೀಲ, ಶಾಲೆಯ ಮುಖ್ಯಗುರು ಬಸವರಾಜ ಅಲ್ಲಾಪುರ, ಕ್ಲಸ್ಟರ್ ಸಿ.ಆರ್.ಪಿ. ಮಲ್ಲಿಕಾರ್ಜುನ ಬಿರಾದಾರ, ಕಂಗಟಿ ಶಾಲೆಯ ಮುಖ್ಯಗುರು ಮಹಾದೇವಿ, ಚಿಲ್ಲರ್ಗಿ ಪ್ರಾಥಮಿಕ ಶಾಲೆಯ ಮುಖ್ಯಗುರು ಸತ್ಯವತಿ, ಬಸಂತಪುರ ಶಾಲಾ ಮುಖ್ಯಗುರು ಸುನಿಲಕುಮಾರ ಗಾಯಕವಾಡ, ಹಮಿಲಾಪುರ ಶಾಲಾ ದೈಹಿಕ ಶಿಕ್ಷಕ ವಿಜಯಕುಮಾರ, ಮಾಳೆಗಾಂವ ಶಾಲೆಯ ದೈಹಿಕ ಶಿಕ್ಷಕಿ ಶೋಭಾವತಿ, ಸಹಶಿಕ್ಷಕರಾದ ತುಕಾರಾಮ, ಜೈಶೀಲ, ಚಂದ್ರಕಾಂತ ದಂಡೆ, ಮಹೇಶ ಅಲ್ಲಾಪೂರ, ಕಲ್ಯಾಣರಾವ ಪಾಟೀಲ ಗಾದಗಿ ಸೇರಿದಂತೆ ಇನ್ನಿತರರು ಅಭಿನಂದನೆಗಳನ್ನು ತಿಳಿಸಿದ್ದಾರೆ.