ಸಾರ್ವಜನಿಕ ಆಸ್ಪತ್ರೆಯಲ್ಲಿ ನೂತನ ಪ್ರಯೋಗಾಲಯ ಉದ್ಘಾಟಿಸಿದ ಶಾಸಕ ಡಾ.ಅವಿನಾಶ ಜಾಧವ.
ಚಿಂಚೋಳಿ:- ಪಟ್ಟಣದ ಚಂದಾಪುರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಮಾರು 55 ಲಕ್ಷ ರೂಪಾಯಿಗಳ ಮೌಲ್ಯದಲ್ಲಿ ನಿರ್ಮಿಸಿದ ನೂತನ ರಕ್ತ ಪ್ರಯೋಗಾಲಯ ಮತ್ತು ನೇತ್ರ ಶಸ್ತ್ರ ಚಿಕಿತ್ಸೆ ಕೋಣೆಯನ್ನು ಶಾಸಕ ಡಾ.ಅವಿನಾಶ ಜಾಧವ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಕಳೆದ ದಶಕಗಳಿಂದಲೂ ಹಳೆಯ ಕೊಠಡಿಗಳಲ್ಲಿಯೇ ರಕ್ತ ಸೇರಿದಂತೆ ವಿವಿಧ ರೋಗಗಳಿಗೆ ಸಂಬಂಧಿಸಿದಂತೆ ಪ್ರಯೋಗಾಲಯವನ್ನು ನಡೆಸುತ್ತಿದ್ದು, ಈಗ ನೂತನವಾಗಿ ಸುಮಾರು 55 ಲಕ್ಷ ರೂ.ಗಳಲ್ಲಿ ಕೊಠಡಿಗಳನ್ನು ನಿರ್ಮಿಸಿದ್ದು ಟೈಫರ್ಡ್,ಮಲೇರಿಯಾ,ರಕ್ತ ಪರೀಕ್ಷೆ,ಟಿಬಿ ಸೇರಿದಂತೆ ಇನ್ನಿತರ ರೋಗಗಳಿಗೆ ಪರೀಕ್ಷೆ ಮಾಡಲಾಗುತ್ತದೆ.ಇದರಿಂದ ಬಡವರಿಗೆ ಸಾರ್ವಜನಿಕರಿಗೆ ಬಹಳಷ್ಟು ಅನುಕೂಲವಾಗಲಿದ್ದು ಜನತೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಟಿಎಚ್. ಓ ಡಾ. ಮಹ್ಮದ್ ಗಫಾರ್, ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಸಂತೋಷ ಪಾಟೀಲ್,ವಿಜಯಕುಮಾರ ಚೇಂಗಟಾ ಮುಖಂಡರಾದ ಕೆ.ಎಂ.ಬಾರಿ,
ಭೀಮಶೆಟ್ಟಿ ಮುರುಡಾ, ಪ್ರೇಮ ಸಿಂಗ್ ಜಾಧವ, ರಾಜು ಪವಾರ್, ಗೋಪಲ ರಾವ ಕಟ್ಟಿಮನಿ,ರಾಮರೆಡ್ಡಿ ಅಭಿಷೇಕ ಮಲಕನೂರ್ ಸೇರಿದಂತೆ ಇನ್ನು ಮುಂತಾದ ಮುಖಂಡರು ಮತ್ತು ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.