ಬೀದರ್

ಸಾರ್ವಜನಿಕರು ಜನನ/ಮರಣ ಮಾಹಿತಿ ಇ-ಜನ್ಮ ತಂತ್ರಾAಶದಲ್ಲಿ ನಮೂದಿಸಿ ಪ್ರಮಾಣ ಪತ್ರ ಪಡೆಯಬೇಕು

ಬೀದರ. ಜೂನ್.30 :- ಸರ್ಕಾರದ ಆದೇಶದಂತೆ ಗ್ರಾಮೀಣ ಪ್ರದೇಶದಲ್ಲಿ ನಾಗರಿಕ ನೋಂದಣಿ ಪದ್ಧತಿಯನ್ನು ಬಲಪಡಿಸಲು ಹಾಗೂ ಘಟಿಸುವ ಶೇಕಡಾ 100% ರಷ್ಟು ಜನನ-ಮರಣ ನೋಂದಣಿ ಘಟನೆಗಳನ್ನು ದಾಖಲಿಸಲು ಜನನ-ಮರಣ ನೋಂದಣಿ ಅಧಿನಿಯಮ 1969 ರ ಪ್ರಕರಣ 7(5) ರನ್ವಯ ಜನನ-ಮರಣ ಘಟನೆಗಳು ಘಟಿಸಿದ 30 ದಿನಗಳ ಒಳಗಿನ ಘಟನೆಗಳನ್ನು ನೋಂದಾಯಿಸಲು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳನ್ನು ಜನನ-ಮರಣ ಉಪನೋಂದಣಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಆದುದರಿಂದ ದಿನಾಂಕ: 01/07/2024 ರಿಂದ ಬರುವಂತೆ ಜನನ-ಮರಣ ಘಟನೆ ಸಂಭವಿಸಿದ 30 ದಿನದ ಒಳಗಾಗಿ ನೋಂದಣಿ ಮಾಡಿ ಪ್ರಮಾಣ ಪತ್ರ ವಿತರಿಸುವ ಅಧಿಕಾರವನ್ನು ಗ್ರಾಮ ಪಂಚಾಯತ್ ಕಾರ್ಯದರ್ಶಿಗಳಿಗೂ ಸಹ ನೀಡಿ ಜನನ-ಮರಣ ಮುಖ್ಯ ನೋಂದಣಾಧಿಕಾರಿ ಬೆಂಗಳೂರು ರವರು ಸುತ್ತೋಲೆ ಹೊರಡಿಸಿರುತ್ತಾರೆ.
ನೊಂದಣಾಧಿಕಾರಿಗಳು/ಉಪನೋAದಣಾಧಿಕಾರಿಗಳ ವಿವರ: 1 ರಿಂದ 21 ದಿನಗಳೊಳಗೆ (ಉಚಿತ ನೋಂದಣಿ) ಮನೆಯಲ್ಲಾಗಿದ್ದರೆ ಗ್ರಾಮೀಣ ಪ್ರದೇಶದವರು ಗ್ರಾಮ ಪಂಚಾಯತ್ ಕಾರ್ಯದರ್ಶಿಗಳಿಂದ ನಗರ ಪ್ರದೇಶದವರು ನಗರ ಸಭೆ/ಪುರಸಭೆ/ಪಟ್ಟಣ ಪಂಚಾಯತದ ಆರೋಗ್ಯ ನಿರೀಕ್ಷಕರರಿಂದ ಪಡೆಯುವುದು. 21 ರಿಂದ 30 ದಿನಗಳೊಳಗೆ (ನಿಗದಿತ ವಿಳಂಬ ಶುಲ್ಕದೊಂದಿಗೆ) ಖಾಸಗಿ ಆಸ್ಪತ್ರೆಯಲ್ಲಾಗಿದ್ದರೆ ಗ್ರಾಮೀಣ ಪ್ರದೇಶದವರು ಖಾಸಗಿ ಆಸ್ಪತ್ರೆಯ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದು ಗ್ರಾಮ ಪಂಚಾಯತ್ ಕಾರ್ಯದರ್ಶಿಗಳಿಂದ ಹಾಗೂ ನಗರ ಪ್ರದೇಶದವರು ಖಾಸಗಿ ಆಸ್ಪತ್ರೆಯ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದು ನಗರ ಸಭೆ/ಪುರಸಭೆ/ಪಟ್ಟಣ ಪಂಚಾಯತದ ಆರೋಗ್ಯ ನಿರೀಕ್ಷಕರಿಂದ ಪಡೆಯುವುದು.
30 ದಿನಗಂ ನಂತರ 1 ವರ್ಷದೊಳಗೆ (ನಿಗದಿತ ವಿಳಂಭ ಶುಲ್ಕದೊಂದಿಗೆ) ಮನೆಯಲ್ಲಾಗಿದ್ದರೆ ಗ್ರಾಮೀಣ ಪ್ರದೇಶದವರು ತಹಸೀಲ್ದಾರರ ಆದೇಶದೊಂದಿಗೆ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಸರ್ಕಾರಿ ಆಸ್ಪತ್ರೆ/ಪ್ರಾಥಮಿಕ ಅಥವಾ ಸಮುದಾಯ ಆರೋಗ್ಯ ಕೇಂದ್ರದಲ್ಲಾಗಿದ್ದರೆ ನಗರ ಪ್ರದೇಶದವರು ನಗರ ಸಭೆ/ಪುರಸಭೆ/ಪಟ್ಟಣ ಪಂಚಾಯತದ ಪೌರಾಯುಕ್ತರು/ಮುಖ್ಯಾಧಿಕಾರಿಗಳ ಆದೇಶದೊಂದಿಗೆ ಆರೋಗ್ಯ ನಿರೀಕ್ಷಕರು. 1 ವರ್ಷದ ನಂತರ ಮನೆಯಲ್ಲಾಗಿದ್ದರೆ ಕೋರ್ಟ ಆದೇಶ ಪಡೆದು ತಹಸೀಲ್ದಾರರ ಲಿಖಿತ ಅನುಮತಿಯೊಂದಿಗೆ ಗ್ರಾಮ ಆಡಳಿತ ಅಧಿಕಾರಿಗಳಿಂದ ಹಾಗೂ ಸರ್ಕಾರಿ ಆಸ್ಪತ್ರೆ/ಪ್ರಾಥಮಿಕ ಅಥವಾ ಸಮುದಾಯ ಆರೋಗ್ಯ ಕೇಂದ್ರದಲ್ಲಾಗಿದ್ದರೆ ಕೋರ್ಟ ಆದೇಶ ಪಡೆದು ನಗರ ಸಭೆ/ಪುರಸಭೆ/ಪಟ್ಟಣ ಪಂಚಾಯತದ ಪೌರಾಯುಕ್ತರು/ಮುಖ್ಯಾಧಿಕಾರಿಗಳ ಲಿಖಿತ ಅನುಮತಿಯೊಂದಿಗೆ ಆರೋಗ್ಯ ನಿರೀಕ್ಷಕರು.
ಜನನ-ಮರಣ ನೋಂದಣಿ ಅಧಿನಿಯಮ 1969ರಡಿ ಜನನ-ಮರಣ ನೋಂದಣಿ ಕಟ್ಟಾಯವಾಗಿರುವ ಕಾರಣ ಬೀದರ ಜಿಲ್ಲೆಯ ಸಾರ್ವಜನಿಕರು ತಮ್ಮ ಕುಟುಂಬದಲ್ಲಿ ಸಂಭವಿಸುವ ಜನನ ಮತ್ತು ಮರಣ ಘಟನೆಗಳ ಮಾಹಿತಿಯನ್ನು ಈ ಮೇಲಿನ ತಖ್ತೆ:ಯಲ್ಲಿ ತಿಳಿಸಿದಂತೆ, ಸಂಭAಧಿಸಿದ ಉಪ ನೋಂದಣಾಧಿಕಾರಿಗಳು/ನೋAದಣಾಧಿಕಾರಿಗಳಿಗೆ ನೀಡಿ ಕಡ್ಡಾಯವಾಗಿ ಇ-ಜನ್ಮ ತಂತ್ರಾAಶದಲ್ಲಿ ಒದಗಿಸಲಾಗುವ ಜನನ-ಮರಣ ಪ್ರಮಾಣ ಪತ್ರಗಳನ್ನು ಪಡೆಯಬೇಕೆಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಜನನ-ಮರಣ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 
Ghantepatrike kannada daily news Paper

Leave a Reply

error: Content is protected !!