ಬೀದರ್

ಸಾರ್ವಜನಕರ ಸಮಸ್ಯೆ ಬಗೆಹರಿಸಬೇಕೆಂದು ಅಂಬೇಡ್ಕರ ಯುವಸೇನೆ ಒತ್ತಾಯ.

ಬೀದರ ನಗರ ಹಾಗೂ ಉತ್ತರ-ದಕ್ಷಿಣ ಕೇತ್ರದ ನಾಡ ಕಛೇರಿಗಳಲ್ಲಿ ಮತ್ತು ಬ್ಯಾಂಕ್‌ಗಳಲ್ಲಿ ಆಧಾರ ಕಾರ್ಡ ಹೆಸರು ತಿದ್ದುಪಡಿ, ಮತ್ತು ಮೊಬೈಲ್ ಸಂಖ್ಯೆ ಸೇರಿಸಿಕೊಳ್ಳಲು ಸಾರ್ವಜನಿಕರು ನಾಡ ಕಛೇರಿಗಳಿಗೆ ಮತ್ತು ಬ್ಯಾಂಕಗಳಿಗೆ ದಿನಾಲೂ ಅಲೆದಾಡಿದರು, ಅವರ ಸಮಸ್ಯೆ ಬಗೆಹರಿವುತ್ತಿಲ್ಲ. ಬೀದರದಲ್ಲಿ ಬಹಳಷ್ಟು ಆಧಾರ ಕೇಂದ್ರಗಳು ಇರುತ್ತವೆ. ಆದರೆ ಈ ಕೇಂದ್ರಗಳು ಸಾರ್ವಜನಿಕರ ಸಮಸ್ಯೆ ಬಗೆಹರಿಸುವ ಕಾರ್ಯ ಮಾಡದೆ ಸಾರ್ವಜನಿಕರಿಗೆ ಬಹಳ ತೊಂದರೆ ನೀಡುತ್ತಿರುವ ಕೇಂದ್ರಗಳ ವಿರುದ್ಧ ಸಮಗ್ರ ತನಿಖೆ ಮಾಡಿ ಅವರಿಗೆ ನೀಡಿರುವ ಕೇಂದ್ರಗಳನ್ನು ರದ್ದುಪಡಿಸಿ ಸಾರ್ವಜನಿಕರಿಗೆ ನಿಗದಿತ ಸಮಯದಲ್ಲಿ ಅನುಕೂಲ ಮಾಡುವವರೆಗೆ ಅವರಿಗೆ ಕೇಂದ್ರಗಳನ್ನು ನೀಡಿ ಸಾರ್ವಜನಕರ ಸಮಸ್ಯೆ ಬಗೆಹರಿಸಬೇಕೆಂದು ಅಂಬೇಡ್ಕರ ಯುವಸೇನೆ ಜಿಲ್ಲಾ ಸಮಿತಿ ವತಿಯಿಂದ ಒತ್ತಾಯ.

Ghantepatrike kannada daily news Paper

Leave a Reply

error: Content is protected !!