ಬೀದರ್

ಸಾಗರ್ ಖಂಡ್ರೆಯವರಿಗೆ ಅಭಿನಂದಿಸುತ್ತೇನೆ : ಭಗವಂತ ಖೂಬಾ

ರೈತನ ಮಗನಾಗಿದ್ದು, ಭಾರತೀಯ ಜನತಾ ಪಕ್ಷದ ಸಣ್ಣ ಕಾರ್ಯಕರ್ತನಿಗೆ, ಬೀದರ ಲೋಕಸಭಾ ಕ್ಷೇತ್ರದ ಜನತೆಯೂ 10 ವರ್ಷಗಳ ಕಾಲ ಕ್ಷೇತ್ರದ ಜನತೆಯ ಸೇವೆ ಮಾಡಲು ಅವಕಾಶ ನೀಡಿದ್ದಾರೆ, ಜನತೆ ನೀಡಿರುವ ಅವಕಾಶಕ್ಕೆ ಶಕ್ತಿ ಮೀರಿ ಶ್ರಮ ಹಾಕಿ, ಕ್ಷೇತ್ರದ ಸರ್ವತೋಮುಖ ಅಭಿವೃದ್ದಿ ಮಾಡಿರುವೆ, ಅದರ ಫಲವಾಗಿ ಕಳೆದ ಹತ್ತು ವರ್ಷಗಳಲ್ಲಿ ಹತ್ತಾರು ಹೊಸ ರೈಲುಗಳು, ರಾಷ್ಟ್ರೀಯ ಹೆದ್ದಾರಿಗಳು, ಸೈನಿಕ ಶಾಲೆ, ಸಿಪೇಟ್ ಕಾಲೇಜು, ಎಫ್.ಎಮ್. ಕೇಂದ್ರ, ಪಾಸಪೋರ್ಟ ಸೇವಾ ಕೇಂದ್ರ ಮುಂತಾದ ಅಭಿವೃದ್ದಿ ಕೆಲಸಗಳು ಮಾಡಿರುವೆ, ಒಬ್ಬ ಸಂಸದನಾಗಿ ಮಾಡಬೇಕಿದ್ದ ಎಲ್ಲಾ ಕೆಲಸಗಳು ಮಾಡಿರುವೆ.

ನನಗೆ ನಾನು ಮಾಡಿರುವ ಅಭಿವೃದ್ದಿ ಕಾರ್ಯಗಳಿಂದ ತೃಪ್ತಿಯಿದೆ, ಮತದಾರರ ಋಣ ತಿರಿಸಿದ್ದೇನೆ ಎಂಬ ಭಾವನೆ ನನಗಿದೆ. ಅದರೆ ಇಂದಿನ ಚುನಾವಣೆ ಫಲಿತಾಂಶದಲ್ಲಿ ಮತದಾರರು ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇನೆ.

ಸಾಗರ್ ಖಂಡ್ರೆಯವರಿಗೆ ಅಭಿನಂದಿಸುತ್ತೇನೆ, ಒಬ್ಬ ಒಳ್ಳೆಯ ಸಂಸದನಾಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಲಿ ಎಂದು ಶುಭ ಹಾರೈಸುತ್ತೇನೆ.

ನನಗೆ ಮತ ನೀಡಿರುವ ಮತದಾರರಿಗೆ ನಾನು ಸದಾ ಚಿರಋಣಿ, ಅವರೊಂದಿಗೆ ನಾನು ಎಂದಿಗೂ ಜೊತೆಯಾಗಿರುವೆ, ಈ ಚುನಾವಣೆಯಲ್ಲಿ ಹಗಲಿರುಳು ಶ್ರಮಿಸಿದ ಶಾಸಕರುಗಳು, ಮಾಜಿ ಶಾಸಕರುಗಳು, ಪಕ್ಷದ ಹಿರಿಯ, ಕಿರಿಯ ಮುಖಂಡರು ಹಾಗೂ ಕಾರ್ಯಕರ್ತರೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ ಮತ್ತು ಧನ್ಯವಾದಗಳು ತಿಳಿಯಪಡಿಸುತ್ತೇನೆ.

Ghantepatrike kannada daily news Paper

Leave a Reply

error: Content is protected !!