ಸರ್ಕಾರಿ ವಸತಿ ನಿಲಯಗಳಲ್ಲಿ ರಾತ್ರಿ ಕಾವಲುಗಾರರನ್ನು ನೇಮಕ ಮಾಡಲು ಸರ್ಕಾರಕ್ಕೆ ಸೋನಾರೆ ಒತ್ತಾಯ
ಬೀದರ, ಜೂನ್. 08ಃ ಕಲ್ಯಾಣ ಕರ್ನಾಟಕ ಭಾಗದ ಬೀದರ ಸೇರಿದಂತೆ ಎಲ್ಲ 7 ಜಿಲ್ಲೆಗಳಲ್ಲಿ ಸಮಾಜ ಕಲ್ಯಾಣ, ಹಿಂದುಳಿದಳ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ನಡೆಯುತ್ತಿರುವ ಸರ್ಕಾರಿಪ್ರಾಥಮಿಕ, ಪದವಿ, ಪದವಿ ಪೂರ್ವ, ಇಂಜೀನಿರಿAಗ್, ಡಿಪ್ಲೋಮಾ,ಮೋರಾರ್ಜಿ, ರಾಣಿ ಕಿತ್ತೂರ ಚೆನ್ನಮ್ಮಾ ವಸತಿ ನಿಲಯಗಳು ಮತ್ತು ವಸತಿ ಶಾಲೆಗಳಲ್ಲಿ ರಾತ್ರಿ ಮತ್ತು ಹಗಲು ಹೊತ್ತಿನಲ್ಲಿ ಕಾವಲುಗಾರರನ್ನು (ಸೆಕ್ಯೂರೆಟಿ ಗಾರ್ಡಗಳನ್ನು) ನೇಮಕ ಮಾಡಬೇಕು ಎಂದು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷರಾದ ವಿಜಯಕುಮಾರ ಸೋನಾರೆಯವರು ಪತ್ರಿಕಾ ಪ್ರಕಟಣೆಯ ಮೂಲಕ ರಾಜ್ಯ ಸರ್ಕಾರಕ್ಕೆ ವಿನಯಪೂರ್ವಕವಾಗಿ ಒತ್ತಾಯ ಮಾಡಿದ್ದಾರೆ.
ಕಲ್ಯಾ|ಣ ಕರ್ಬಟಕ ಪ್ರದೇಶದ ಗ್ರಾಮೀಣ ಪ್ರದೇಶದ ಬಡವರ ಮಕ್ಕಳು ಸರ್ಕಾರಿ ವಸತಿ ನಿಲಯಗಳಲ್ಲಿ ಶಾಲೆಗಳಲ್ಲಿ ಉಳಿದುಕೊಂಡು ವಸತಿ ಅಥವಾ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಾರೆ. ಸರ್ಕಾರಿ ವಸತಿ ನಲಯಗಳು ಮತ್ತು ಶಾಲೆಗಳಲ್ಲಿ ಸೇಕ್ಯೂರಟಿ ಗಾರ್ಡಗಳು ಇಲ್ಲದ ಕಾರಣ ವಿದ್ಯಾರ್ಥಿಗಳು ರಾತ್ರಿ ವೇಳೆಯಲ್ಲಿ ಬೇಕಾಬಿಟ್ಟಿ ಓಡಾಡಿಕೊಂಡು, ವೇಳೆ ಇಲ್ಲದ ವೇಳೆಯಲ್ಲಿ ವಸತಿ ನಿಲಯ ಹಾಗೂ ವಸತಿ ಶಾಲೆಗಳಿಗೆ ಬರುತ್ತಿದ್ದಾರೆ. ರಾತ್ರಿ ಕಾವಲುಗಾರರು ಇಲ್ಲದ ಕಾರಣ ವಿದ್ಯಾರ್ಥಿಗಳಿಗೆ ಯಾರೂ ಹೇಳುವವರು ಕೇಳುವವರು ಇಲ್ಲದಂತಾಗಿದೆ. ಹೀಗಾಗಿ ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಉಜಲ್ವ ಭವಿಷ್ಯಕ್ಕಾಗಿ ಶೀಘ್ರವೇ ರಾತ್ರಿ ಕಾವಲುಗಾರರನ್ನು ನೇಮಕ ಮಾಡಬೇಕು ಎಂದು ಕೋರಿದ್ದಾರೆ.
ಸರ್ಕಾರಿ ವಸತಿ ನಿಲಯಗಳು ಮತ್ತು ವಸತಿ ಶಲೆಗಳಲ್ಲಿ ರಾತ್ರಿ ಕಾವಲುಗಾರರು ಇಲ್ಲದ ಕಾರಣ ಬಡಾವಣೆಯ ಉಡಾಳರು, ಪುಂಡ-ಪೋಕರಿಗಳು ನಿಲಯಗಳು ಮತ್ತು ಶಾಲೆಗಳ ಆವರಣಗಳಲ್ಲಿ ನುಗ್ಗಿ ತುಂಡು-ಗುAಡು ಪಾರ್ಟಿ ಮಾಡುವ ಮೂಲಕ ವಿದ್ಯಾರ್ಥಿಗಳ ವಿದ್ಯಾಭಷಕ್ಕೆ ತೊಂದರೆ ಮಾಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಓದಿನಂತೆ ಗಮನ ಹರಿಸಲು ಆಗುತ್ತಿಲ್ಲ. ರಾತ್ರಿ ಕಾವಲುಗಾರರು ಇದ್ದರೆ ರಾತ್ರಿ ವೇಳೆ ಪುಂಡರು ಬರಲು ಹೆದರುತ್ತಾರೆ. ಅಲ್ಲದೇ ವಿದ್ಯಾರ್ಥಿಗಳು ಸಹ ಸಮಯಕ್ಕೆ ವಸತಿ ಹಾಗೂ ನಿಲಯಕ್ಕೆ ಬರುತ್ತಾರೆ. ಆದುದರಿಂದ ರಾಜ್ಯ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ರಾತ್ರಿ ಕಾವಲುಗಾರರ ನೇಮಕಾತಿಗೆ ರಾಜ್ಯ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ವಿನಂತಿಸಿಕೊAಡಿದ್ದಾರೆ.s