ಸರಕಾರಿ ಐಟಿಐ ಪ್ರವೇಶಕ್ಕೆ ಆಫ್ ಲೈನ್ ಅರ್ಜಿ ಆಹ್ವಾನ
ಬೀದರ ಜಿಲ್ಲೆಯ ಸರಕಾರಿ ಐಟಿಐ ವಿವಿಧ ವೃತ್ತಿಗಳಿಗೆ ಖಾಲಿ ಇರುವ 2024-25ನೇ ಶೈಕ್ಷಣಿಕ ಸಾಲಿನ ಪ್ರವೇಶಕ್ಕಾಗಿ ಆಫ್ ಲೈನ್ ಮುಖಾಂತರ ಅರ್ಜಿಯನ್ನು ಹತ್ತನೇ ಪಾಸಾದ, 14 ವರ್ಷ ಮೇಲ್ಪಟ್ ವಿದ್ಯಾರ್ಥಿಗಳು ದಿನಾಂಕ 04/07/2024 ರಿಂದ 31-08-2024ರ ವರೆಗೆ ಅರ್ಜಿಯನ್ನು ಸಮೀಪದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಖುದ್ದಾಗಿ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಮುಂದುವರೆದು ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮೂಲ ದಾಖಲಾತಿಗಳೊಂದಿಗೆ ಹಾಗು ಒಂದು ಸೆಟ್ ಝಿರಾಕ್ಸ್ ಪ್ರತಿಯೆಂದಿಗೆ ರೂ. 1200/- ಪಾವತಿಸಿ, ಖಾಲಿ ಇರುವ ಸ್ಥನಗಳಿಗೆ ತಕ್ಷಣ ಪ್ರವೇಶ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಬೀದರ : 9110412264, 7795203335 ಸಂಖ್ಯೆಗೆ ಸಂಪರ್ಕಿಸಬಹುದು, ಎಂದು ನಗರದ ಸರಕಾರಿ ಕೈಗಾರಿಕಾ ಸಂಸ್ಥೆಯ ಪ್ರಾಚಾರ್ಯ ಲಕ್ಷ್ಮೀಕಾಂತ ತಿಳಿಸಿದ್ದಾರೆ. ಪ್ರಯುಕ್ತ ಸದರಿ ಮಾಹಿತಿಯನ್ನು ಬೀದರ ಜಿಲ್ಲೆಯ ಮಕ್ಕಳ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲು ಕೋರಿದೆ.