ಬೀದರ್

ಸರಕಾರವನ್ನು ಅಸ್ಥಿರತೆಯನ್ನುಂಟು ಮಾಡುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ಮೂಲಕ ರಾಷ್ಟçಪತಿ ಅವರಿಗೆ ಮನವಿ

ಬೀದರ: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಇತ್ತೀಚ್ಚಿಗೆ ತಿಂಗಳಿAದ ಕಾಂಗ್ರೆಸ್ ಪಕ್ಷದ ರಾಜ್ಯ ಆಡಳಿತದ ಮೇಲೆ ವಿರೋಧ ಪಕ್ಷದ ಸ್ಥಾನದಲ್ಲಿರುವ ಬಿ.ಜೆ.ಪಿ. ಯೊಂದಿಗೆ ಮೈತ್ರಿ ಮಾಡಿಕೊಂಡ ಜೆ.ಡಿ.ಎಸ್. ಪಕ್ಷಯು ಸೇರಿಕೊಂಡು ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರಕಾರವನ್ನು ಅಸ್ಥಿರತೆಗೊಳಿಸಬೇಕೆಂದು ರಾಜ್ಯಪಾಲರ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುವಂತೆ ಕೇಂದ್ರ ಬಿ.ಜೆ.ಪಿ. ಸರಕಾರದಿಂದ ಒತ್ತಡ ಹಾಕಿಸಿ ರಾಜ್ಯಪಾಲರು ಕೇಂದ್ರ ಸರಕಾರದ ತನ್ನ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಈ ರೀತಿ ನಡೆದುಕೊಳ್ಳುತ್ತಿರುವುದರಿಂದ ಪ್ರಜಾಪ್ರಭುತ್ವದ ಮೂಲಭೂತ ತತ್ವಕ್ಕೆ ಅಪಾಯವಾಗುತ್ತದೆ, ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ಬರುತ್ತದೆ. ರಾಜ್ಯ ರಾಜ್ಯಪಾಲರು ಸಾಂವಿಧಾನಿಕ ಪ್ರತಿನಿಧಿಯಾಗಿ ಕೆಲಸ ಮಾಡುವ ಬದಲು ಕೇಂದ್ರ ಸರಕಾರದ ಕೈಗೊಂಬೆಯAತೆ ನಡೆದುಕೊಂಡಿದ್ದಾರೆÀ. ಜೊತೆಗೆ ಸರಕಾರವನ್ನು ಅಸ್ಥಿರಗೊಳಿಸುವ ನಡೆಗೆ ಬೆಂಬಲ ನೀಡಿದ್ದಾರೆ. ಜೊತೆಗೆ ಭ್ರಷ್ಟಚಾರ ನಿಯಂತ್ರಣ ಕಾಯಿದೆ 17-ಂ ಅಡಿ ಅನುಮತಿ ನೀಡುವ ವೇಳೆ ಪಾಲಿಸಬೇಕಾಗಿರುವ ನಿಯಮಗಳನ್ನು (SಔP) ಉಲ್ಲಂಘಿಸಲಾಗಿದೆ. 2021 ನೇ ಸೆಪ್ಟೆಂಬರ್ 3 ರಂದು ಕೇಂದ್ರ ಸರಕಾರ ಈ ಬಗ್ಗೆ ಸ್ಪಷ್ಠ ಮಾರ್ಗಸೂಚಿ ಹೊರಡಿಸಲಾಗಿದೆ ಇದನ್ನು ಪರಿಗಣಿಸಿಲ್ಲ. ರಾಜ್ಯಪಾಲರು ದೇಶದ ರಾಷ್ಟçಪತಿಗಳ ಪ್ರತಿನಿಧಿಯಾಗಿದ್ದು, ಸಂವಿಧಾನದ ಪ್ರತಿ ನಿಧಿಗಳಾಗಿ ಕೆಲಸ ಮಾಡಬೇಕು. ಅದನ್ನು ಬಿಟ್ಟು ಕೇಂದ್ರ ಸರಕಾರ ಹಾಗೂ ಬಿ.ಜೆ.ಪಿ. ಪ್ರತಿನಿಧಿಗಳಾಗಿ ಕೆಲಸ ಮಾಡುತ್ತಿರುವದು ಅಕ್ಷಮ್ಯ. ರಾಜ್ಯಪಾಲರ ಈ ನಡಾವಳಿಯನ್ನು ತೀರ್ವವಾಗಿ ಖಂಡಿಸುತ್ತೆವೆ
ಇನ್ನು ಕೇಂದ್ರ ಸರಕಾರ ಅನಗ್ಯವಾಗಿ ಜನರ್ಶಾವಾದಿಂದ ರಚನೆಯಾಗಿರುವ ರಾಜ್ಯ ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸಲು ರಾಜ್ಯಪಾಲರನ್ನು ಬಳಸಿಕೊಳ್ಳುತ್ತಿದೆ. ರಾಷ್ಟçಪತಿಗಳು ಇದನೆಲ್ಲವನ್ನು ಪರಿಗಣೆನೆಗೆ ತೆಗೆದುಕೊಂಡು ಕೂಡಲೇ ಗಮನಹರಿಸಿ ರಾಜ್ಯಪಾಲರನ್ನು ವಾಪಸ ಕರೆಸಿಕೊಳ್ಳಬೇಕು. ಬಹುಮತ ಹೊಂದಿರುವ ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಸರಕಾರವನ್ನು ಸುಗಮವಾಗಿ ನಡೆಯಲು ಸೂಕ್ತ ಕ್ರಮ ಜರುಗಬೇಕೆಂದು ಜನತಂತ್ರ ವ್ಯವಸ್ಥೆಯನ್ನು ಬುಡ ಮೇಲು ಮಾಡಲು ಹೊರಟಿರುವ ಬಿ.ಜೆ.ಪಿ., ಜೆ.ಡಿ.ಎಸ್. ನಡೆಯನ್ನು ಖಂಡಿಸಿ.
ಜನಪರ ಆಡಳಿತ ನೀಡುತ್ತಿರುವ ಜನಪ್ರಿಯ ಶೋಷಿತರ ಧೀಮಂತ ನಾಯಕರಾದ ಮಾನ್ಯ ಸಿದ್ಧರಾಮಯ್ಯಾ ಮುಖ್ಯಮಂತ್ರಿ ಸರ್ಕಾರವನ್ನು ಸಂಪೂರ್ಣವಾಗಿ ಬೆಂಬಲಿಸಿ ರಾಜ್ಯಾದಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆಯಿಂದ ಇಂದು ಬೃಹತ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿಗಳ ಕಛೇರಿಯ ವರೆಗೆ ನಡೆಸಿ ಘನತೇವೆತ್ತ ರಾಷ್ಟçಪತಿಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಪತ್ರ ಕಳುಹಿಸಿಕೊಡಲಾಗಿದೆ.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಸಂಚಾಲಕರಾದ ಮಾರುತಿ ಬೌದ್ಧೆ, ಜಿಲ್ಲಾ ಸಂಘಟನಾ ಸಂಚಾಲಕರಾದ ಅಶೋಕ ಗಾಯಕವಾಡ, ಜಿಲ್ಲಾ ಸಂಚಾಲಕರಾದ ಅರುಣ ಪಟೇಲ್, ಎಂ.ಎಸ್. ಮನೋಹರ್, ರಮೇಶ ಉಮಾಪುರೆ, ರಾಜಕುಮಾರ ವಾಘಮಾರೆ, ಶಿವರಾಜ ತಡಪಳ್ಳಿ , ವಾಮನ ಮೈಸಲಗೆ, ರಮೇಶ ಬೆಲ್ದಾರ, ಸತೀಶ ರತ್ನಾಕರ್, ಝರೇಪ್ಪಾ ವರ್ಮಾ, ಶಿರೋಮಣಿ ಹಲಗೆ , ಬಸವರಾಜ ಭಾವಿದೊಡ್ಡಿ , ರಾಹುಲ ಹಾಲಹಿಪ್ಪರ್ಗಾ, ವಿಜಯಕುಮಾರ ಭಾವಿಕಟ್ಟಿ , ಶಿವಕುಮಾರ ಗುನ್ನಳ್ಳಿ , ಗೌತಮ ಮುತ್ತಂಗಿಕರ್, ಜೈಭೀಮ ಚಿಮ್ಮನಾಯಕ, ಅಬ್ದುಲ್ ಮನ್ನಾನ ಸೇಠ, ಸಂತೋಷ ಜೋಳದಾಬಕೆ, ವಿಠಲದಾಸ ಪ್ಯಾಗೆ ಸೇರಿದಂತೆ ಅನೇಕರು ಉಪಸ್ಥಿರಿದ್ದರು.

Ghantepatrike kannada daily news Paper

Leave a Reply

error: Content is protected !!