ಬೀದರ್

ಸಮಾಜದಲ್ಲಿ ಶಾಂತಿ ನೆಲೆಸುವಂತೆ ಕರ್ತವ್ಯವನ್ನು ಮಾಡಬೇಕು : ಉಪಮಹಾನಿರೀಕ್ಷಕ ಅಜಯ ಹಿಲೋರಿ

ಭಾಲ್ಕಿ ತಾಲೂಕಿನ ಧನ್ನೂರಾ ಪೊಲೀಸ್ ಠಾಣೆಗೆ ಕಲಬುರ್ಗಿ ಈಶಾನ್ಯ ವಲಯ ಪೊಲೀಸ್ ಉಪಮಹಾನಿರೀಕ್ಷಕ ಅಜಯ ಹಿಲೋರಿ ಭೇಟಿ ನೀಡಿ , ಪೊಲೀಸ್ ಠಾಣೆಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಡಿವೈಎಸ್ ಪಿ ಶಿವಾನಂದ ಪವಾಡಶೆಟ್ಟಿ, ಸಿಪಿಐ ಜಿ.ಎಸ್ ಬಿರಾದರ್, ಪಿ ಎಸ್ ಐ ವಿಶ್ವರಾಧ್ಯ, ವೀರಶೆಟ್ಟಿ ಸೇರಿದಂತೆ ಇತರರಿದ್ದರು.
ಸಮಾಜದಲ್ಲಿ ನ ದಿನಿತ್ಯದ ಘಟನೆಗಳ ಬಗ್ಗೆ ಪೊಲೀಸರು ಮಾಹಿತಿಗಳನ್ನು ಕಲೆಹಾಕಿ , ಮಾಹಿತಿ ಗಳನ್ನು ಸಂಗ್ರಹಿಸಿ , ಸಮಾಜದಲ್ಲಿ ಶಾಂತಿ ನೆಲೆಸುವಂತೆ ಶಿಸ್ತಿನ ಸಿಪಾಯಿಗಳಾಗಿ ದಕ್ಷ ಅಧಿಕಾರಿಗಳಾಗಿ ತಮ್ಮ ಕರ್ತವ್ಯವನ್ನು ಮಾಡಬೇಕು ಎಂದು ಕಲಬುರ್ಗಿ ಈಶಾನ್ಯ ವಲಯ ಪೊಲೀಸ್ ಉಪಮಹಾನಿರೀಕ್ಷಕ ಅಜಯ ಹಿಲೋರಿ ತಿಳಿಸಿದರು. ಸಮಾದಲ್ಲಿ ಜರುಗುವ ಅಘಾತಕಾರಿ ಸಂಗತಿಗಳನ್ನು ನಿಯಂತ್ರಿಸಿ , ತಮ್ಮ ಠಾಣಾ ವ್ಯಾಪ್ತಿಯ ಎಲ್ಲ ಹಳ್ಳಿಗಳ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಅವರಿಗೆ ನ್ಯಾಯ ದೊರಕಿಸಿ ಕೊಡುವ ಕೆಲಸವೇ ಪೊಲೀಸ್ ಇಲಾಖೆಯದಾಗಿದೆ ಎಂದರು.
ನಂತರ ಠಾಣೆ ಆವರಣದಲ್ಲಿ ಆಲದ ಸಸಿಯನ್ನು ನೆಟ್ಟು ಪ್ರತಿಯೊಬ್ಬರು ಹಸಿರುಕರಣ ಮತ್ತು ಪ್ರಕೃತಿಯ ಉಳಿವಿಗಾಗಿ ಪಣ ತೊಡುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಠಾಣಾ ಆವರಣದಲ್ಲಿನ ಸ್ವಚ್ಚತೆ, ಆಡಳಿತ, ಅಲ್ಲಿನ ಪೊಲೀಸರ ಕರ್ತವ್ಯದ ಬಗ್ಗೆ ಮೆಚ್ಚುಗೆವ್ಯಕ್ತಪಡಿಸಿದರು.
ಇದೇ ವೇಳೆ ಠಾಣಾ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ಬ್ಯಾಡ್ಮಿಂಟನ್ ಕ್ರೀಡಾಂಗಣವನ್ನು ಉದ್ಘಾಟಿಸಿದರು. . ಡಿವೈಎಸ್ ಪಿ ಶಿವಾನಂದ ಪವಾಡಶೆಟ್ಟಿ, ಸಿಪಿಐ ಜಿ.ಎಸ್ ಬಿರಾದರ್, ಪಿ ಎಸ್ ಐ ವಿಶ್ವರಾಧ್ಯ, ವೀರಶೆಟ್ಟಿ ಸೇರಿದಂತೆ ಇತರರಿದ್ದರು.

Ghantepatrike kannada daily news Paper

Leave a Reply

error: Content is protected !!