ಸಂಸದ ಸಾಗರ ಖಂಡ್ರೆ, ಡಾ.ವಾಲಿಗೆ ಶಟಕಾರ ಕುಟುಂಬ ದಿಂದ ಸನ್ಮಾನ
ಬೀದರ್: ನಗರದಲ್ಲಿ ಸೋಮವಾರ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬ್ರೀಮ್ಸ್) ಬೋಧಕ ಆಸ್ಪತ್ರೆಯ ನಿರ್ದೇಶಕರಾದ ಡಾ.ಶಿವಕುಮಾರ ಶಟಕಾರ ಅವರ ನಿವಾಸಕ್ಕೆ ಲೋಕಸಭೆ ಸದಸ್ಯರಾದ ಸಾಗರ ಈಶ್ವರ ಖಂಡ್ರೆ, ಹಾಗೂ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಡಳಿತ ಮಂಡಳಿ ಸದಸ್ಯರಾದ ಡಾ.ರಜನೀಶ ವಾಲಿ ಅವರಿಗೆ ಶಟಕಾರ ಕುಟುಂಬ ಹಾಗೂ ಅವರ ಬಂಧು ಬಳಗದಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬ್ರಿಮ್ಸ್ ಆಸ್ಪತ್ರೆಯ ನಿರ್ದೇಶಕರಾದ ಡಾ.ಶಿವಕುಮಾರ ಶಟಕಾರ ಅವರ ಸುಪುತ್ರರಾದ ಯೋಗೇಶ ಶಟಕಾರ, ಉದ್ಯಮಿಗಳಾದ ಸಂತೋಷ ತಾಳಂಪಳ್ಳಿ, ಸಪ್ನಾ ಚಂದ್ರಶೇಖರ ಪಾಟೀಲ ಹಾಗೂ ಇತರರಿದ್ದರು.