ಬೀದರ್

ಸಂಘಗಳನ್ನು ಬಲಪಡಿಸುವ ಕೆಲಸ ಮಾಡಬೇಕು : ಅಭಿಷೇಕ ಆರ್ ಪಾಟೀಲ

ಪ್ರಜಾಪ್ರಭುತ್ವದ ತತ್ವಗಳ ಮೂಲ ತಳಹದಿಯಲ್ಲಿ ಸ್ಥಾಪಿತವಾಗಿರುವ ಸಹಕಾರ ಸಂಘಗಳು ಜನರ ಆರ್ಥಿಕ ಆವಶ್ಯಕತೆಗಳನ್ನು ಅವರ ಮನೆ ಬಾಗಿಲಲ್ಲೇ ಪೂರೈಸುವ ಜವಾಬ್ದಾರಿಯನ್ನು ಹೊಂದಿವೆ. ಸದಸ್ಯರೇ ಮಾಲಕರಾಗಿರುವ ವಿಶಿಷ್ಠ ವ್ಯವಸ್ಥೆ ಹೊಂದಿರುವ ಸಹಕಾರ ಸಂಘಗಳು ಸ್ವಾಯತ್ತ ಸಂಸ್ಥೆಗಳಾಗಿವೆ. ಸರಕಾರದ ನೀತಿ ನಿಯಮಗಳಿಗೆ ಬದ್ದವಾಗಿ ನಡೆಯುತ್ತಿವೆ. ವ್ಯಾಪಾರದಲ್ಲಿ ಶೋಷಣೆಯನ್ನು ತಡೆಗಟ್ಟುವ ಗುರಿಯನ್ನು ಹೊಂದಿವೆ. ಸಮ ಸಮಾಜದ ನಿರ್ಮಾಣದಲ್ಲಿ ಸಹಕಾರ ಸಂWಗÀಳ ಕೊಡುಗೆ ಗಣನೀಯವಾಗಿದೆ. ವ್ಯವಹಾರದಲ್ಲಿ ಆದುನಿಕ ಯುಗದ ಪೈಪೋಟಿಗೆ ಹೊಂದಿಕೆಯಾಗದೇ ಸಂಸ್ಥೆಗಳು ಸೊರಗುತ್ತಿವೆ. ಅದಕ್ಕಾಗಿ ಸರಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಕಾಮನ್ ಸರ್ವೀಸ ಸೆಂಟ್ರರ್ ಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಬೀದರ ಜಿಲ್ಲೆಯ 188 ಸಹಕಾರ ಸಂಘಗಳನ್ನು ಈ ಯೋಜನೆಯಡಿ ತರಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮ ಮಟ್ಟದಲ್ಲೇ ಎಲ್ಲಾ ರೀತಿಯ ಕಂಪ್ಯೂಟರ ಸ್ನೇಹಿ ಸೌಲಭ್ಯಗಳು ದೊರಕುವಂತೆ ಸಂಘಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಪುರಸ್ಖøತ ಯೋಜನೆಯಡಿಯಲ್ಲಿ ಕಂಪ್ಯೂಟರಗಳನ್ನು ಒದಗಿಸಲಾಗಿದೆ. ಬೀದರಿನ ಗ್ರಾಮೀಣ ಪ್ರದೇಶದಲ್ಲಿ ಕೂಡಾ ಅನಿರ್ಬಂಧಿತ ಸೇವೆ ನೀಡಲು ಬಿಎಸ್‍ಎನ್‍ಎಲ್ ಕೂಡಾ ಹೊಸ ಯೋಜನೆ ಜಾರಿಗೆ ತಂದಿದ್ದು ಪ್ರಾಥಮಿಕ ಸಹಕಾರಿ ಸಂಘಗಳಿಗೆ ಹೆಚ್ಚಿನ ವೇಗದ ಬ್ರಾಡ್ ಬೇಂಡ್ ಇಂಟರ್ನೆಟ್ ಸಂಪರ್ಕವನ್ನು ವಿಶೇಷವಾಗಿ ಕಮ್ಮಿ ದರದಲ್ಲಿ ಒದಗಿಲಾಗುತ್ತಿದೆ. ಇದರ ಪ್ರಯೋಜನವನ್ನು ಕೂಡಲೇ ಬೀದರಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಪಡೆದುಕೊಳ್ಳಬೇಕು. ಸ್ವಾವಲಂಬಿ ಸಂಸ್ಥೆಯಾಗುವುದರ ಜೊತೆಗೆ ಜನರಿಗೆ ಉತ್ತಮ ಸೇವೆ ನೀಡುವಲ್ಲಿ ಮುಂದಡಿಯಿಡಬೇಕು. ಜಗತ್ತಿನ 118 ದೇಶಗಳಲ್ಲಿ ವ್ಯವಸ್ಥಿತವಾಗಿ ವ್ಯವಹಾರ ನಡೆಸುತ್ತಿರುವ ಸಹಕಾರ ವ್ಯವಸ್ಥೆ ನಮ್ಮಲ್ಲಿ ಇನ್ನಷ್ಟು ಬಲಗೊಳ್ಳಬೇಕಿದೆ. ಅದಕ್ಕಾಗಿ ನಮ್ಮ ಸರಕಾರವು ಹಲವು ರೀತಿಯ ಸಬ್ಸಿಡಿಗಳು, ಸಹಕಾರಿ ಸಂಸ್ಥೆಗಳಿಗೆ ಪ್ರೋತ್ಸಾಹಧನ ವಿತರಣೆ, ಬಡ್ಡಿದರದಲ್ಲಿ ಸಹಾಯಧನ, ಕೃಷಿ ಉತ್ಪನ್ನಗಳ ಖರೀದಿ ಕೇಂದ್ರಗಳು ಮೊದಲಾದ ಸೌಲಭ್ಯಗಳನ್ನು ನೀಡುತ್ತಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳನ್ನು ಕಂಪ್ಯೂಟರೀಕರಣಗೊಳಿಸುತ್ತಿದೆ. ಆಡಳಿತ ಮಂಡಲಿ ಸದಸ್ಯರಿಗೆ ತರಬೇತಿಗಳನ್ನು ಹಮ್ಮಿಕೊಳ್ಳುತ್ತಿದೆ. ತರಬೇತಿಗಳಲ್ಲಿ ಭಾಗವಹಿಸಿ ಮಾಹಿತಿ ಪಡೆದು ತಮ್ಮ ಸಂಘಗಳನ್ನು ಬಲಪಡಿಸುವ ಕೆಲಸ ಮಾಡಬೇಕು. ಗ್ರಾಹಕರಿಗೆ ವಿಶ್ವಾಸಾರ್ಹ ಮತ್ತು ಗುಣಮಟ್ಟದ ಸೇವೆ ನೀಡಬೇಕು ಎಂದು ಡಿಸಿಸಿ ಬ್ಯಾಂಕನ ಉಪಾಧ್ಯಕ್ಷರಾದ ಹುಮನಾಬಾದ್‍ನ ಅಭಿಷೇಕ ಆರ್ ಪಾಟೀಲರವರು ನುಡಿದರು.
ಸಹಾರ್ದ ತರಬೇತಿ ಕೇಂದ್ರ ನೌಬಾದ, ಡಿ.ಸಿ.ಸಿ ಬ್ಯಾಂಕ್ ಬೀದರ, ನಬಾರ್ಡ ಬೆಂಗಳೂರು ಮತ್ತು ಸಹಕಾರ ಇಲಾಖೆ ಬೀದರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಾಹಕರುಗಳಿಗೆ ನಡೆದ ಎರಡು ದಿನದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೃಷಿ ಆಧಾರಿತ ವ್ಯವಹಾರಗಳು ಮತ್ತು ರೈತರಿಗೆ ಆರ್ಥಿಕ ಸಹಾಯ ನೀಡುವ ಸಹಕಾರ ಸಂಸ್ಥೆಗಳು ಜನರ ಆಸ್ತಿಯಾಗಿವೆ. ಕೃಷಿಕರ ಜೀವನಾಡಿಯಾಗಿವೆ. ಗ್ರಾಮೀಣ ಜನರ ಆರ್ಥಿಕ ಸ್ವಾತಂತ್ರ್ಯಕ್ಕೆ ಅವರ ಸ್ವಾವಲಂಬಿತನಕ್ಕೆ ಶ್ರಮಿಸುವ ಸಹಕಾರಿ ಸಂಘಗಳು ತಮ್ಮ ಸೇವೆಯ ಗುಣಮಟ್ಟವನ್ನು ಸುಧಾರಿಸುವ ಆವಶ್ಯಕತೆಯಿದೆ. ಬದಲಾಗುವ ಸನ್ನಿವೇಶಗಳಿಗೆ ತಕ್ಕಂತೆ ತಮ್ಮ ವ್ಯವಹಾರದಲ್ಲಿ ಬದಲಾವಣೆ ತರುವ ಅಗತ್ಯವಿದೆ. ನೂತನ ವ್ಯವಹಾರಗಳನ್ನು ಆರಂಭಿಸುವ ಮೂಲಕ ಮತ್ತು ಹೊಸ ಪದ್ದತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಸ್ಪರ್ಧಾತ್ಮಕವಾಗಿ ಪೈಪೋಟಿ ನಡೆಸಬೇಕಿದೆ. ಇಲ್ಲವಾದಲ್ಲಿ ಜನರಿಂದ ಜನರಿಗಾಗಿ ಜನರೇ ಸೃಷ್ಠಿಸಿಕೊಂಡ ಈ ವ್ಯವಸ್ಥೆ ಕುಸಿಯುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಸಂಘದ ಮುಖ್ಯ ಕಾರ್ಯನಿರ್ವಾಹಕರು ಮತ್ತು ಸಿಬ್ಬಂದಿಗಳು ಹೆಚ್ಚಿನ ಮುತುವರ್ಜಿ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಹಾರ್ದ ತರಬೇತಿ ಕೇಂದ್ರ, ನಿರ್ದೇಶಕರಾದ ಸುಬ್ರಮಣ್ಯ ಪ್ರಭು, ಸ್ವಾಗತಿಸಿದರು. ಸಹಾರ್ದ ತರಬೇತಿ ಕೇಂದ್ರದ ಉಪನ್ಯಾಸಕರಾದ ಮಂಜುನಾಥ ಭಾಗವತ ಕಾರ್ಯಕ್ರಮ ನಿರ್ವಹಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಸಂಜು ಸ್ವಾಮಿಯವರು ಉಪನ್ಯಾಸ ನೀಡಿದರು. ಅನಿಲ್ ಪರೇಶ್ಯಾನೆ ಕಾರ್ಯಕ್ರಮ ನಿರ್ವಹಿಸಿದರು.

Ghantepatrike kannada daily news Paper

Leave a Reply

error: Content is protected !!