ಬೀದರ್

ಶ್ರೀ ವೈಷ್ಣೋದೇವಿ ಟ್ರಸ್ಟ್ ವತಿಯಿಂದ ಉಚಿತ ತರಕಾರಿ ಬೀಜಗಳ ವಿತರಣೆ

ಬೀದರಃ ನಗರದ ಗುಮ್ಮೆ ಕಾಲೋನಿಯ ಶ್ರೀ ವೈಷ್ಣೋದೇವಿ ಕಲ್ಚರಲ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ತರಕಾರಿ ಬೀಜಗಳ ವಿತರಣೆ ಕಾರ್ಯಕ್ರಮವನ್ನು ನಗರಸಭೆ ಉಪಾಧ್ಯಕ್ಷೆ ಶ್ರೀಮತಿ ಲಕ್ಷಿö್ಮÃಬಾಯಿ ಶಂಕರೆಪ್ಪ ಹಂಗರಗಿಯವರು ಮಣ್ಣಿನ ಕುಂಡಗಳಲ್ಲಿನ ಬೀಜಗಳಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು.

ನಗರ ಪ್ರದೇಶದಲ್ಲಿನ ಜನರು ತಮ್ಮ ಮನೆಯ ತಾರಸಿ ಮೇಲೆ ಮಣ್ಣಿನ ಕುಂಡದಲ್ಲಿ ತರಕಾರಿ ಬೀಜಗಳನ್ನು ಹಾಕಿ ಕಡಿಮೆ ಖರ್ಚಿನಲ್ಲಿ ಸಾವಯವ ಪದ್ಧತಿ ಮೂಲಕ ತರಕಾರಿ ಬೆಳೆಸುವುದರಿಂದ ಉತ್ತಮ ಆರೋಗ್ಯ ಪಡೆಯಬಹುದು. ಜೊತೆಗೆ ಹಣವೂ ಉಳಿಸಬಹುದು ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ಜೈವಿಕ ಕೇಂದ್ರದ ಸಹಾಯಕ ತೋಟಗಾರಿಕೆ ನಿರ್ದೇಶಕ ನೀಲಾಂಜನ ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಡಾ|| ಅಶ್ವಿನಿ ಭಾವೆ ಮಾತನಾಡಿ, ಇಂದಿನ ದಿನಮಾನಗಳಲ್ಲಿ ತರಕಾರಿ ಬೆಲೆಗಳು ಹೆಚ್ಚಾಗುತ್ತಿವೆ. ಪ್ರತಿಯೊಂದು ತರಕಾರಿಗೆ ಹೆಚ್ಚಿನ ರೀತಿಯಲ್ಲಿ ಕೇಮಿಕಲ್ ಬಳಸುತ್ತಿರುವುದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮನೆಯಲ್ಲಿಯೇ ಸಾವಯವ ಪದ್ಧತಿ ಮೂಲಕ ತರಕಾರಿ ಬೆಳೆಸಿ ಊಟ ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಲೋಕೇಶ ಬಿರಾದಾರ ಮಾತನಾಡಿ, ಶ್ರೀ ವೈಷ್ಣೋದೇವಿ ಟ್ರಸ್ಟ್ನವರು “ಸಾವಯವ ತಾರಸಿ ತೋಟ” ದಂತಹ ವಿನೂತನ ಕಾರ್ಯಕ್ರಮ ಮಾಡಿರುವುದು ಉತ್ತಮ ಕಾರ್ಯವಾಗಿದೆ. ಜನರು ಇದರ ಸದುಪಯೋಗ ಪಡೆಯಬೇಕು ಎಂದರು.

ವೈಷ್ಣೋದೇವಿ ಟ್ರಸ್ಟ್ನ ಅಧ್ಯಕ್ಷ ಸಂಗಮೇಶ ಬಿರಾದಾರ ಮಾತನಾಡಿ, ಟ್ರಸ್ಟ್ನ ವತಿಯಿಂದ ಯಾವುದೇ ಫಲಾಪೇಕ್ಷೆ ಇಲ್ಲದೆ ಹಲವಾರು ಸಾಮಾಜಿಕ ಕೆಲಸ ಕಾರ್ಯಗಳು ಮಾಡುತ್ತ ಬರಲಾಗುತ್ತಿದೆ. ತರಕಾರಿ ಬೀಜಗಳನ್ನು ಪಡೆದ ಎಲ್ಲರೂ ತಮ್ಮ ಮನೆಯಲ್ಲಿ ಬೆಳೆಸಿ, ಇತರರಿಗೂ ಮಾದರಿಯಾದಲ್ಲಿ ನಮ್ಮ ಟ್ರಸ್ಟ್ನ ಕೆಲಸಕ್ಕೆ ಸ್ಪೂರ್ತಿ ನೀಡಿದಂತಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ಹತ್ತು ನಮೂನೆಯ ತರಕಾರಿ ಬೀಜಗಳನ್ನು ಉಚಿತವಾಗಿ ವಿತರಿಸಲಾಯಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ಅಕ್ಕಮಹಾದೇವಿ ಭಜನಾ ಸಂಘದ ಕವಿತಾ ಸ್ವಾಮಿ ಹಾಗೂ ಸಂಗೀತಾ ಪಾಟೀಲ್ ಅವರು ಸ್ವಾಗತ ಗೀತೆ ಪ್ರಸ್ತುತ ಪಡಿಸಿದರು. ಸಿದ್ರಾಮಯ್ಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾಂಡುರAಗ ಪಾಂಚಾಳ ನಿರೂಪಿಸಿದರೆ, ನಾಗನಾಥ ಸುಂಕನಾಳೆ ವಂದಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ತೋಟಗಾರಿಕೆ ಇಲಾಖೆ ಸಹಾಯಕ ಕೃಷಿ ಅಧಿಕಾರಿ ಕಾಶಿನಾಥ ಸ್ವಾಮಿ ಆಗಮಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ನ ಕಾರ್ಯದರ್ಶಿ ಭಾರತಿ ಬಿರಾದಾರ, ಸುಭಾಷ ಬಿರಾದಾರ, ಚಂದ್ರಯ್ಯ ಸ್ವಾಮಿ, ಕಾಶಿನಾಥ ಭಂಗೂರೆ, ಶಿವಶರಣಪ್ಪ ಕಮಠಾಣೆ, ಚಂದ್ರಶೇಖರ ರೆಡ್ಡಿ, ವಿರುಪಾಕ್ಷ ದೇವರು, ಬಸವರಾಜ, ಗೀತಾ ಪಾಟೀಲ್, ಸೋರಜನಿ ಸ್ವಾಮಿ, ರೇಖಾ, ರತ್ನಮಾಲಾ ಸುಂಕನಾಳೆ, ಮಹಾನಂದಾ ಬೀಕ್ಲೆ, ಸರಸ್ವತಿ, ಮುಂತಾದವರು ಉಪಸ್ಥಿತರಿದ್ದರು.
ಈ ವರದಿಯನ್ನು ತಮ್ಮ ಘನಪತ್ರಿಕೆಯಲ್ಲಿ ಪ್ರಕಟಿಸಿ ಸಹಕರಿಸಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.

Ghantepatrike kannada daily news Paper

Leave a Reply

error: Content is protected !!