ಬೀದರ್

ಶ್ರೀ ಕೃಷ್ಣನ ಬಾಲ ಲೀಲೆಗಳು ತುಂಬ ಅದ್ಭುತ– ಊರ್ಮಿಳಾ ಬಕ್ಷಿ

ಸರಸ್ವತಿ ಶಿಕ್ಷಣ ವಿಕಾಸ ಸಮಿತಿ  ಬೀದರ ಸಂಚಾಲಿತ ಸರಸ್ವತಿ ಶಿಶುಮಂದಿರ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ನಿಮಿತ್ತ ಲೋಕಪಾಲಕ ಶ್ರೀ ಕೃಷ್ಣನ ತೊಟ್ಟಿಲು ಇಡುವುದರೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು ಹಾಗೂ ಶ್ರೀ ಕೃಷ್ಣರಾಧಾ ವೇಷಧಾರಿಯಾದ ಮಕ್ಕಳು ಅದ್ಭುತವಾದ ನೃತ್ಯವನ್ನು ಪ್ರದರ್ಶನ ಮಾಡಿದರು.
ಈ ಕಾರ್ಯಕ್ರಮದಲ್ಲಿ ಬೌದ್ಧಿಕ ನೀಡಿದ ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿಯಾದ ಶ್ರೀಮತಿ ಊರ್ಮಿಳಾ ಬಕ್ಷಿ ಇವರು “ವಸುದೇವ ಸುತಂ ದೇವಂ ಕಂಸ ಚಾಣೂರ ಮರ್ದನಂ ದೇವಕಿ ಪರಮಾನಂದA ಕೃಷ್ಣಂ ವಂದೇ ಜಗದ್ಗುರುಂ” ಎಂದು ಹೇಳುತ್ತಾ ಉಗ್ರಸೇನ ರಾಜನ ಮಗ ಕಂಸ ಇವನು ದುರಾಸೆಯಿಂದ ತನ್ನ ತಂದೆಯನ್ನೇ ಸೆರೆಮನೆಯಲ್ಲಿ ಇಟ್ಟನು, ತಾನೆ ಆಡಳಿತವನ್ನು ನಡೆಸುತ್ತಾ ದುಷ್ಟರಾಜನಾದ ಈ ದುಷ್ಟನನ್ನು ಸಂಹಾರ ಮಾಡುವ ಸಲುವಾಗಿ ಅವನ ತಂಗಿಯ ಗರ್ಭದಲ್ಲಿ 8 ನೇ ಮಗುವಾಗಿ ಶ್ರೀ ಕೃಷ್ಣನ ಜನನವಾಯಿತು. ಶ್ರೀ ಕೃಷ್ಣನು ನಂದ ಹಾಗೂ ಯಶೋಧೆಯ ಮಗನಾಗಿ ನಂದನವನದಲ್ಲಿ ಬೆಳೆಯುತ್ತಾನೆ. ಕೃಷ್ಣನ ಬಾಲ ಲೀಲೆಗಳು ತುಂಬ ಅದ್ಭುತವಾಗಿದವು. ಕೃಷ್ಣನು ಮುಖ್ಯವಾಗಿ ಕಂಸ ಹಾಗೂ ಇನ್ನಿತರ ರಾಕ್ಷಸರ ಸಂಹಾರಮಾಡುವುದಕ್ಕಾಗ್ಗಿ ಜನಿಸಿ ಶಾಂತಿಯನ್ನು ನೆಲೆಸುವಂತೆ ಮಾಡುತ್ತಾನೆ ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿಗಳಾದ ಹನುಮಂತರಾವ ಪಾಟೀಲಜೀ ಅವರು “ಪಾಪದ ಕೊಡ ತುಂಬಿ ತುಳುಕುತ್ತಿದ್ದಾಗ ರಾಕ್ಷಸ ಪ್ರವೃತ್ತಿ ಹೆಚ್ಚಾಗಿ ಇಡೀ ಜಗತ್ತು ಅಲ್ಲೋಲ ಕಲ್ಲೋಲವಾಗುತ್ತಿದ್ದಾಗ ಶ್ರೀ ಕೃಷ್ಣ ಪರಮಾತ್ಮನ ಜನನವಾಗುತ್ತದೆ. ನರಕ ಚತುರ್ದಶಿಯ ಉದ್ದೇಶ ಶ್ರೀ ಕೃಷ್ಣನು ನರಕಾಸುರನನ್ನು ಕೊಂದನು ನರಕಾಸುರನ ಹತ್ತಿರವಿದ್ದ ಸಾವಿರಾರು ಹೆಣ್ಣು ಮಕ್ಕಳನ್ನು ಅವರಿಗೆ ಒಂದು ಭವಿಷ್ಯ ರೂಪಿಸುವುದಕ್ಕಾಗಿ ನರಕಸುರನನ್ನು ಸಂಹಾರ ಮಾಡಿದನು. ಶ್ರೀ ಕೃಷ್ಣಜನ್ಮಾಷ್ಟಮಿ ಆಚರಣೆಯ ಉದ್ದೇಶ ಮಕ್ಕಳಲ್ಲಿ ಸಂಸ್ಕಾರ, ಒಳ್ಳೆಯ ಗುಣಗಳು ಬೆಳೆಯಬೇಕು, ಸಮಾಜಕ್ಕೆ ಒಂದು ಉತ್ತಮವಾದ ಸಂದೇಶ ನೀಡುವುದಾಗಿದೆ. ನಮ್ಮ ಹಿಂದು ಧರ್ಮ ಹಾಗೂ ಸಂಸ್ಕೃತಿಯನ್ನು ಬೆಳೆಸುವುದಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದ ವೇದಿಕೆ ಮೇಲೆ ಅತಿಥಿಗಳಾಗಿ ಆಗಮಿಸಿದ ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿಯಾದ ರಾಜಕುಮಾರ ಶಿಲವಂತ ಉಪಸ್ಥಿತರಿದ್ದರು ಹಾಗೂ ಸಂಸ್ಥೆಯ ಅಧ್ಯಕ್ಷರಾದ ಪ್ರೋ|| ಎಸ್.ಬಿ. ಸಜ್ಜನಶೆಟ್ಟಿ, ಆಡಳಿತ ಮಂಡಳಿಯ ಸದಸ್ಯರಾದ ನಾರಾಯಣರಾವ ಮುಖೇಡಕರ, ಶ್ರೀ ಶಿವರಾಜ ಹಲಶೆಟ್ಟಿ ಇವರು ಉಪಸ್ಥಿತರಿದ್ದರು.
ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಮುಖ್ಯಗುರುಗಳಾದ ಶ್ರೀಮತಿ ಅರುಣಾಕುಮಾರಿ ಪಾಟೀಲ ಹಾಗೂ ಶಿಶುಮಂದಿರ ಮುಖ್ಯಸ್ಥರಾದ ಶ್ರೀಮತಿ ಚನ್ನಮ್ಮಾ ಘಂಟೆ, ಶಿಕ್ಷಕ ವೃಂದದವರು ಹಾಗೂ ಮಾತೆಯರು ಉಪಸ್ಥಿತರಿದ್ದರು. ಸುಮಾರು 120 ಮಕ್ಕಳು ಶ್ರೀ ಕೃಷ್ಣನ ಹಾಗೂ ರಾಧೇಯ ವೇಷಧಾರಿಗಳಾಗಿ ಭಾಗವಹಿಸಿದರು.
ಮಾತೆಯರಾದ ಶ್ರೀಮತಿ ಸುಜಾತ ಶಾಂತಕುಮಾರ ಸ್ವಾಗತ ಪರಿಚಯ ಮಾಡಿದರು, ವೈಯಕ್ತಿಕ ಗೀತೆ ಶ್ರೀಮತಿ ಸುರೇಖಾ ಶಿರೀಷ, ಶ್ಲೋಕ ವೈಷ್ಣವಿ ಗುರುಬಸಪ್ಪಾ (ಉದಯ ವರ್ಗ) ಹೇಳಿದರು. ವಂದನಾರ್ಪಣೆ ಶ್ರೀಮತಿ ವರ್ಷಾ ಅಮಿತಕುಮಾರ ಮಾಡಿದರು ಹಾಗೂ ಸಂಚಾಲನೆ ವೈಜಯಂತಿ ಪ್ರಕಾಶ ಇವರು ಮಾಡಿದರು.

Ghantepatrike kannada daily news Paper

Leave a Reply

error: Content is protected !!