ಬೀದರ್

ಶಾಸಕ ಪ್ರಭು ಚವ್ಹಾಣರಿಂದ ಶಿರಡಿ ಸಾಯಿಬಾಬಾ ದರ್ಶನ

ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಜುಲೈ 13 ರಂದು ಮಹಾರಾಷ್ಟ್ರ ರಾಜ್ಯದ ಶಿರಡಿಯಲ್ಲಿರುವ ಶ್ರೀ ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ‌ ನೀಡಿ‌ ದರ್ಶನ ಪಡೆದರು.
ಕುಟುಂಬದ ಸದಸ್ಯರು, ಮುಖಂಡರು ಹಾಗೂ ಕಾರ್ಯಕರ್ತರು ಸೇರಿದಂತೆ ನೂರಾರು ಅಭಿಮಾನಿಗಳ ಜೊತೆಗೆ ರಸ್ತೆ ಮೂಲಕ ಶಿರಡಿ ಸಾಯಿಬಾಬಾ ಮಂದಿರಕ್ಕೆ ತೆರಳಿ, ಪೂಜೆ, ಅರ್ಚನೆ ನೆರವೇರಿಸಿದರು. ಔರಾದ(ಬಿ) ವಿಧಾನಸಭಾ ಕ್ಷೇತ್ರದಲ್ಲಿ ಉತ್ತಮ ಮಳೆಯಾಗಿ ರೈತರ ಬದುಕು ಹಸನಾಗಲೆಂದು ಪ್ರಾರ್ಥಿಸಿದರು.
ಬಳಿಕ ಮಾತನಾಡಿದ ಅವರು, ಸಂತ‌ ಶ್ರೀ ಸಾಯಿಬಾಬಾ ಅನೇಕ ಪವಾಡಗಳನ್ನು ಮಾಡಿದ‌ ಮಹಾಪುರುಷರು. ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಸಾಯಿಬಾಬಾರ ಸನ್ನಿಧಾನಕ್ಕೆ ಭೇಟಿ ನೀಡಿದರೆ ದೂರವಾಗುತ್ತವೆ‌ ಎನ್ನುವ ಪ್ರತೀತಿಯಿದೆ. ಸಾಯಿಬಾಬಾ ದರ್ಶನದಿಂದ ಜೀವನ ಸುಖಮಯವಾಗುತ್ತದೆ ಎಂಬ ನಂಬಿಕೆಯಿದೆ. ಈ ಕಾರಣಕ್ಕಾಗಿಯೇ ಪ್ರತಿದಿನ ಲಕ್ಷಾಂತರ ಭಕ್ತರು ಶಿರಡಿಧಾಮಕ್ಕೆ ಭೇಟಿ ನೀಡಿ ಪುನೀತರಾಗುತ್ತಾರೆ ಎಂದರು.
ನಾನು ಕೂಡ ಪ್ರತಿ ವರ್ಷ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಜೊತೆಗೆ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರ ದರ್ಶನ ಪಡೆಯುತ್ತೇನೆ. ಈ ವರ್ಷವೂ ನೂರಾರು ಕಾರ್ಯಕರ್ತರೊಡನೆ ಆಗಮಿಸಿ ಸಾಯಿ ಬಾಬಾರ ದರ್ಶನ ಪಡೆದಿದ್ದು, ನಾಡಿನ ಒಳಿತಿಗಾಗಿ, ರೈತರ ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಕೈಯಾರೆ ಊಟ ಬಡಿಸಿದ ಶಾಸಕರುಸಾಯಿಬಾಬಾ ದೇವಸ್ಥಾನದ ಪ್ರಸಾದ ನಿಲಯದಲ್ಲಿ ಶಾಸಕರಾದ ಪ್ರಭು ಚವ್ಹಾಣ ಅವರು ಭಕ್ತಾದಿಗಳಿಗೆ ತಮ್ಮ ಕೈಯಿಂದ ಊಟ ಬಡಿಸಿ ಗಮನ ಸೆಳೆದರು.
ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ಸಿಇಓ ಗೋರಕ್ಷಾ ಗಡಿಲಕರ್, ಮುಖಂಡರಾದ ವಸಂತ ಬಿರಾದಾರ, ಸತೀಷ ಪಾಟೀಲ, ದೊಂಡಿಬಾ ನರೋಟೆ, ಮಾರುತಿ ಚವ್ಹಾಣ, ಶಿವಾಜಿರಾವ ಪಾಟೀಲ ಮುಂಗನಾಳ, ಸುರೇಶ ಭೋಸ್ಲೆ, ರಾಮಶೆಟ್ಟಿ ಪನ್ನಾಳೆ, ಸಚಿನ ರಾಠೋಡ್, ಕಿರಣ ಪಾಟೀಲ, ಅರಹಂತ ಸಾವಳೆ, ಬಸವರಾಜ ಪಾಟೀಲ, ಗಿರೀಶ ಒಡೆಯರ್, ಶಿಬರಾಜ ಅಲ್ಮಾಜೆ, ಅಶೋಕ ಅಲ್ಮಾಜೆ, ಶೇಷರಾವ ಕೋಳಿ, ಮಲ್ಲಪ್ಪ ದಾನಾ, ಖಂಡೋಬಾ ಕಂಗಟೆ, ಪ್ರಕಾಶ ಮೇತ್ರೆ, ಪ್ರತೀಕ್ ಚವ್ಹಾಣ ಸೇರಿದಂತೆ ಇತರರಿದ್ದರು.
Ghantepatrike kannada daily news Paper

Leave a Reply

error: Content is protected !!