ಶಾಲಾ ಶಿಕ್ಷಕರನ್ನು ಮತಗಟ್ಟೆ ಅಧಿಕಾರಿಗ¼ ಕೆಲಸದಿಂದ ಬಿಡುಗಡೆಗೆ ಮನವಿ
ಜುಲೈ 31 ರಂದು ತಹಸೀಲ್ದಾರರು ಬಿ.ಎಲ್.ಓ. ಸಭೆ ಕರೆದಿದ್ದ ಪ್ರಯುಕ್ತ ಬೀದರ ತಾಲೂಕಿನ ಎಲ್ಲಾ ಬಿ.ಎಲ್.ಓ. ಗಳು ತಹಸೀಲ್ ಕಚೇರಿಗೆ ಬಂದು, ಶಿಕ್ಷಕರನ್ನು ಬಿ.ಎಲ್.ಓ ಸೇವೆಯಿಂದ ಬಿಡುಗಡೆ ಮಾಡುವಂತೆ ಮಾನ್ಯ ಉಚ್ಛ ನ್ಯಾಯಾಲಯ ಹಾಗೂ ನಿರ್ದೇಶಕರು, ಶಿಕ್ಷಣ ಇಲಾಖೆ, ಬೆಂಗಳೂರು ಅವರು ಸಂಬAಧಪಟ್ಟ ಚುನಾವಣಾಧಿಕಾರಿಗಳಿಗೆ ಆದೇಶ ನೀಡಿರುತ್ತಾರೆ.
ಆದರೆ ಸಭೆಗೆ ಹಾಜರಾಗುವುದಿಲ್ಲ, ನಮಗೆ ಬಿ.ಎಲ್.ಓ. ಸೇವೆಯಿಂದ ಮುಕ್ತಗೊಳಿಸಬೇಕೆಂದು ಬೀದರ ತಹಸೀಲ್ದಾರ್ ಅವರಿಗೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮನವಿ ಪತ್ರದಲ್ಲಿ ಒತ್ತಾಯಿಸಿದೆ.
ಈ ಸಭೆಯಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಪ್ರಕಾಶ ರೆಡ್ಡಿ ಸೇರಿದಂತೆ 115 ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ಪಾಲ್ಗೊಂಡಿದ್ದರು.