ಬೀದರ್

ಶಾಂತಿ ಹಾಗೂ ಸೌಹಾರ್ದತೆಯಿಂದ ಜಿಲ್ಲೆಯಲ್ಲಿ ಆಚರಣೆ : ಪ್ರದೀಪ್ ಗುಂಟಿ

ಬೀದರ, ಆಗಸ್ಟ್. 29 ):- ಎಲ್ಲಾ ಧರ್ಮದವರು ಸೇರಿ ಕಾರ್ಯಕ್ರಮಗಳನ್ನು ಮಾಡುತ್ತೆವೆ ನಮ್ಮಲ್ಲಿ ಯಾವುದೇ ಭೇದಭಾವಗಳಿಲ್ಲ ಹಾಗಾಗಿ ಪ್ರತಿ ವರ್ಷ ಬೀದರನಲ್ಲಿ ಗಣೇಶ ಉತ್ಸವ ಹಾಗೂ ಈದ್ ಮಿಲಾದ ಹಬ್ಬಗಳನ್ನು ಶಾಂತಿಯುತವಾಗಿ ಆಚರಣೆ ಮಾಡುತ್ತಾ ಬರುತ್ತಿದ್ದೇವೆ ಎಂದು ಬೀದರ ನಗರಸಭೆ ಅಧ್ಯಕ್ಷರಾದ ಮೊಹಮ್ಮದ್ ಗೌಸ್ ಹೇಳಿದರು.
ಅವರು ಗುರುವಾರ ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಯಲ್ಲಿ ಬೀದರ ಜಿಲ್ಲಾ ಪೊಲೀಸ್ ವತಿಯಿಂದ ಸಾರ್ವಜನಿಕರಿಗೆ ಕರೆದ ಗಣೇಶ ಉತ್ಸವ ಹಾಗೂ ಈದ್ ಮಿಲಾದ್ ಸೌಹಾರ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಎಲ್ಲಾ ಸಮಾಜದವರು ಸೇರಿ ಈ ಹಬ್ಬಗಳನ್ನು ಶಾಂತಿಯುತವಾಗಿ ಆಚರಣೆ ಮಾಡುವ ಸಂಬAಧ ಇಂದು ಎಲ್ಲರೂ ಸೇರಿದ್ದೆವೆ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಕೇವಲ ಪೊಲೀಸರದು ಮಾತ್ರವಲ್ಲ. ಸಾರ್ವಜನಿಕರ ಪಾತ್ರವು ಬಹಳ ಇದೆ. ಗಣೇಶ ಮಂಡಳಿಯವರು ತಮ್ಮ ವಾಲೆಂಟರಿಗಳಿಗೆ ನಿಯೋಜನೆ ಮಾಡಿ ಕಾರ್ಯಕ್ರಮ ಚೆನ್ನಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಮಾತನಾಡಿ, ಎಲ್ಲರೂ ಸೇರಿ ಹಬ್ಬಗಳನ್ನು ಚೆನ್ನಾಗಿ ಆಚರಣೆ ಮಾಡುವ ಸಂಬAಧ ಸಭೆಯನ್ನು ಕರೆಯಲಾಗಿದೆ. ಎಲ್ಲಾ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಿರಿ. ಗಣೇಶ ಉತ್ಸವ ಹಾಗೂ ಈದ್ ಮಿಲಾದ್ ಹಬ್ಬಗಳನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಜಿಲ್ಲೆಯಲ್ಲಿ ಆಚರಣೆ ಮಾಡುವುದರ ಜೊತೆಗೆ ನಮ್ಮ ಪೊಲೀಸ್ ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೆ ಸಹಕಾರ ನೀಡಬೇಕು ಎಂದರು.
ಗಣೇಶ ಮಂಡಳಿಯವರು ಸಿಂಗಲ್ ವಿಂಡೋ ಮೂಲಕ ಪರ್ಮಿಷನ್ ಪಡೆದುಕೊಳ್ಳಬೇಕು. ವಿವಾದಿತ ಸ್ಥಳಗಳಲ್ಲಿ ಗಣೇಶ ಕೂಡಿಸಬಾರದು. ಗಣೇಶ ಸಾರ್ವಜನಿಕವಾಗಿ ಕೂಡಿಸುವಾಗ ಒಂದು ಕಮೀಟಿ ಮಾಡಬೇಕು ಮತ್ತು ತಮ್ಮ ವಾಲೆಂಟರಿಗಳಿಗೆ ಐಡಿ ಕಾರ್ಡಗಳನ್ನು ಕೊಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ದೊಡ್ಡ- ದೊಡ್ಡ ಗಣಪತಿಗಳನ್ನು ಕೂಡಿಸುವ ಸ್ಥಳಗಳಲ್ಲಿ ಸುರಕ್ಷತೆ ದೃಷ್ಟಿಯಿಂದ ಸಿಸಿಟಿವಿ ಅಳವಡಿಸಬೇಕು. ಸಾರ್ವಜನಿಕರಿಗೆ ಟ್ರಾಫಿಕ್ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಬ್ಯಾನರ್. ಭಂಟಿAಗ್ ಯಾವುದೇ ಧರ್ಮ ಮತ್ತು ಜಾತಿಗಳಿಗೆ ಧಕ್ಕೆ ತರುವಂತಹುಗಳನ್ನು ಹಾಕಬಾರದು.
ರಾತ್ರಿ 10 ಗಂಟೆಯಿAದ ಬೆಳಿಗ್ಗೆ 6 ಗಂಟೆಗಳವರೆಗೆ ಲೌಡಸ್ಪೀಕರ್ ಹಚ್ಚಬಾರದು. ಹೆಚ್ಚಿನ ಶಬ್ದವನ್ನು ಇಟ್ಟು ಸಾರ್ವಜನಿಕರಿಗೆ ತೊಂದರೆ ಮಾಡಬಾರದು ಮತ್ತು ಡಿಜೆಗಳಿಂದ ಹೆಚ್ಚು ಶಬ್ದ ಇಡಬಾರದು. ಮೆರವಣಿಗೆ ಸಂದರ್ಭದಲ್ಲಿ ಹುಡುಗರು ಬೈಕ್ ಸೈಲೆನ್ಸರ್ ಕಿತ್ತಿ ಹೆಚ್ಚು ಶಬ್ದ ಮಾಡುತ್ತ ಬೈಕಗಳನ್ನು ಓಡಿಸದಂತೆ ನೋಡಿಕೊಳ್ಳಬೇಕು. ಯಾವುದೇ ವಿದ್ಯುತ್ ಅವಘಡಗಳನ್ನು ಸಂಭವಿಸದAತೆ ಮುಂಜಾಗ್ರತೆವಹಿಸಬೇಕು. ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳನ್ನು ಜಿಲ್ಲೆಯಲ್ಲಿ ಎಲ್ಲರೂ ಸೇರಿ ಶಾಂತಿಯುತವಾಗಿ ಆಚರಿಸಬೇಕೆಂದು ಹೇಳಿದರು.
ಹಿರಿಯ ಮುಖಂಡರಾದ ನಂದಕಿಶೋರ ಮಾತನಾಡಿ, ಪ್ರತಿ ವರ್ಷ ಗಣೇಶ ಹಬ್ಬವನ್ನು ಆಚರಿಸುತ್ತಾ ಬರುತ್ತಿದ್ದೆವೆ ಮತ್ತು ಪ್ರತಿ ವರ್ಷ ಕೂಡಿಸುವ ಜಾಗದಲ್ಲಿ ಗಣೇಶ ಕೂಡಿಸುತ್ತೆವೆ. ಹಿಂದು-ಮುಸ್ಲಿA ಸಹೋದರರು ಒಟ್ಟಿಗೆ ಸೇರುವಂತೆ ಮಾಡಿದಕ್ಕೆ ಪೊಲೀಸ್ ಇಲಾಖೆ ಧನ್ಯವಾದಗಳು. ಗಣೇಶ ಮಹಾಮಂಡಳ ಪಟ್ಟಿಯನ್ನು ತಮಗೆ ಕೊಡುತ್ತೆವೆ. ಪ್ರತಿ ವರ್ಷದಂತೆ ಈ ವರ್ಷ ಪೊಲೀಸ್ ಇಲಾಖೆಯವರು ನಮಗೆ ಸಹಕಾರ ನೀಡಬೇಕೆಂದು ಹೇಳಿದರು.
ಹಿರಿಯ ಪತ್ರಕರ್ತರಾದ ಶಿವಶರಣಪ್ಪ ವಾಲಿ ಮಾತನಾಡಿ, ನಗರದಲ್ಲಿ ಶಾಂತಿ ಇರಬೇಕು ಎಲ್ಲರೂ ಇದನ್ನೆ ಬಯಸುತ್ತಾರೆ. ಬೀದರ ಒಂದು ಸಣ್ಣ ಹಿಂದುಸ್ಥಾನದAತಿದೆ ಇಲ್ಲಿ ಎಲ್ಲಾ ಧರ್ಮ, ಜಾತಿಯ ಜನರಿದ್ದಾರೆ. ಕಾನೂನಿನ ಅರಿವು ಇಲ್ಲದವರು ಗಲಾಟೆ ಮಾಡುತ್ತಾರೆ ಅಂತಹವರ ಮೇಲೆ ಒಂದು ಕಣ್ಣು ಇಡಬೇಕು. ಎಲ್ಲಾ ಸಮುದಾಯದಲ್ಲಿ ಅಂಥ ಒಬ್ಬರು ಇರುತ್ತಾರೆ ಅವರನ್ನು ಆಯಾ ಸಮಾಜದವರು ತಿಳಿಹೇಳಬೇಕೆಂದು ಹೇಳಿದರು.
ಈ ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಚಂದ್ರಕಾAತ ಪೂಜಾರ, ಡಿವೈಎಸ್ಪಿ ಶಿವನಗೌಡ ಪಾಟೀಲ, ವಿವಿಧ ಗಣೇಶ ಮಂಡಳಿಯ ಅಧ್ಯಕ್ಷರು ಸದಸ್ಯರು ಹಾಗೂ ಹಿಂದೂ ಮತ್ತು ಮುಸ್ಲಿಂ ಸಮಾಜದ ಮುಖಂಡರು. ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂಧಿಗಳು ಸೇರಿದಂತೆ ಇತರೆ ಹಲವಾರು ಜನರು ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!