ಶರಣು ಪಾಟೀಲ್ ಮೋತಕಪಲ್ಲಿ ಮತ ಯಾಚನೆ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಚಿಂಚೋಳಿ ತಾಲೂಕ ಘಟಕದ ಚುನಾವಣೆ ಪ್ರಯುಕ್ತ ಅಧ್ಯಕ್ಷ ಹುದ್ದೆಯ ಅಭ್ಯರ್ಥಿ ಶರಣು ಪಾಟೀಲ್ ಮೋತಕಪಲ್ಲಿ ತಾಲೂಕಿನ ಶರಣ ಬಂಧುಗಳು ಹಾಗು ಸಮಾಜದ ಹಿರಿಯರೊಂದಿಗೆ ನಗರದ ಶ್ರೀ ಹಾರಕೂಡ ಚನ್ನಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಪೂಜೆ ಸಲ್ಲಿಸಿ ಮನೆ ಮನೆಗೆ ತೆರಳಿ ಮತ ಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶರಣು ಪಾಟೀಲ್ ಮೋತಕಪಲ್ಲಿ ವೀರಶೈವ ಲಿಂಗಾಯತ್ ಮಹಾಸಭೆ ಚುನಾವಣೆ ಪ್ರಯುಕ್ತ ಪ್ರಥಮ ಬಾರಿಗೆ ನಾನು ಚುನಾವಣೆಗೆ ಸ್ಪರ್ಧಿಸಿದ್ದು ನನ್ನ ಸಮಾಜದ ಏಳಿಗೆಗೆ ಸರ್ವ ಪ್ರಯತ್ನ ಮಾಡುವುದಲ್ಲದೆ ಯಾವುದೇ ಸಮಯದಲ್ಲೂ ಕೂಡ ಹಗಲು ರಾತ್ರಿ ಎನ್ನದೆ ಸದಾ ಸಮಾಜಕ್ಕಾಗಿ ನನ್ನ ತನುಮನ ಧನವನ್ನ ಅರ್ಪಿಸುತ್ತೇನೆ ಒಂದು ಬಾರಿ ಅವಕಾಶ ಕೊಟ್ಟು ನೋಡಿ ನಮ್ಮ ಸಮಾಜವನ್ನು ಹೇಗೆ ಬಲಪಡಿಸುತ್ತೇನೆ ಎಂದು ಹೇಳಿದರು.