ಶಂಕರಲಾಲ್ ವರ್ಮಾ ಪೆನಾಲ್‍ಗೆ ಜಯ
ಬಿದರ ಅ 11, ಬೀದರ ಜ್ವೇಲರ್ಸ್ ಅಸೋಸಿಯೆಶನ್ (ರಿ)ನ ಚುನಾವಣೆ ದಿ. 10-8-2023 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಬೀದರ ನಗರದ ವಿನಾಯಕ ಗಂಜ್ (ಉಸ್ಮಾನ ಗಂಜ್) ನಲ್ಲಿ ನಡೆದಿದ್ದು, ಚುನಾವಣೆಯಲ್ಲಿ ಶಂಕರಲಾಲ ವರ್ಮಾ ಅವರ ಪೆನಾಲ್ ವಿಜಯಿ ಸಾಧಿಸಿ ಸದಸ್ಯರ ಮೆಚ್ಚುಗೆ ಮತ್ತು ವಿಶ್ವಾಸ ಗಳಿಸಿದರು. 127 ಮತದಾರರಲ್ಲಿ 127 ಮತದಾರರು ಮತ ಚಲಾಯಿಸಿದರು. ಶಂಕರಲಾಲ ತಂದೆ ನಂದಕಿಶೋರ ವರ್ಮಾ 69 ಮತಗಳನ್ನು ಪಡೆದಿದ್ದು, ತಮ್ಮ ಸಮೀಪದ ಪ್ರತಿಸ್ಪರ್ಧಿ ಸಂತೋಷ ಬೆಲ್ದಾಳೆ ಅವರು 58 ಮತಗಳನ್ನು ಪಡೆಯುವ ಮೂಲಕ ಸೋಲಪ್ಪಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ವಸಂತರಾವ ಭೊಸ್ಲೆ ಅವರು 52 ಮತಗಳನ್ನು ಪಡೆದಿದ್ದು, ತಮ್ಮ ಸಮೀಪದ ಪ್ರತಿಸ್ಪರ್ಧಿ ವೆಂಕಟೇಶ ಎಸ್. ಔರಾದಕರ್ ಅವರಿಗೆ 18 ಮತಗಳಿಂದ ಸೋಲಿಸಿದ್ದಾರೆ.
ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ ರಾಜಕುಮಾರ ಮಲಿಗಿ ಅವರು 91 ಮತಗಳನ್ನು ಪಡೆದಿದ್ದು, ಪ್ರತಿಸ್ಪರ್ಧಿ ಪಿ. ರಘುಚಾರಿ ಅವರಿಗೆ 56 ಮತಗಳಿಂದ ಸೋಲಿಸಿದ್ದಾರೆ. ಸಹಕಾರ್ಯದರ್ಶಿ ಸ್ಥಾನಕ್ಕೆ ಟಿ. ರಮೇಶ ಅವರು 82 ಮತಗಳು ಪಡೆದಿದ್ದು, ಪ್ರತಿಸ್ಪರ್ಧಿ ಗೋರಕನಾಥ ಎಸ್. ಕುಂಬಾರ ಅವರನ್ನು 40 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಕೊಶಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಬಸವರಾಜ ಪಾಟೀಲ ಗುಮ್ಮಾ ಅವರು 79 ಮತಗಳನ್ನು ಪಡೆದಿದ್ದು, ಪ್ರತಿಸ್ಪರ್ಧಿ ಜಗದೀಶ ಎಂ. ಚೌಳಿ ಅವರಿಗೆ 32 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಶಂಕರಲಾಲ ನಂದಕಿಶೋರ ವರ್ಮಾ ಮೆನಾಲ್ ಃ ಸಂಪೂರ್ಣವಾಗಿ ವಿಜಯಿ ಸಧಿಸಿದ್ದು, ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಿದೆ. ಪಡೆದ ಮತಗಳ ವಿವರಃ- ಶಂಕರಲಾಲ ವರ್ಮಾ-69, ವಸಂತರಾವ ಭೊಸ್ಲೆ-52, ರಾಜಕುಮಾರ ಮಲಿಗಿ-91, ಟಿ. ರಮೇಶ 82, ಬಸವರಾಜ ಪಾಟೀಲ ಗುಮ್ಮಾ-79.
ಸಂತೋಷ ಬೆಲ್ದಾಳೆ ಪೆನಾಲ್ – ಸಂತೋಷ ಬೆಲ್ದಾಳೆ-58, ವೆಂಕಟೇಶ ಎಸ್. ಔರಾದಕರ-34, ಪಿ. ರಘುಚಾರಿ-35, ಗೋರಕನಾಥ ಎಸ್. ಕುಂಬಾರ-42, ಜಗದೀಶ ಎಂ. ಚೌಳಿ-47 ಮತಗಳು ಪಡೆದು ಬೆಲ್ದಾಳೆ ಪೆನಾಲ್ ಸಂಪೂರ್ಣವಾಗಿ ಸಂಪೂರ್ಣವಾಗಿ ಸೋಲಪ್ಪಿದೆ.