ಬೀದರ್

ವ್ಯಕ್ತಿಯು ಎಷ್ಟೇ ಉನ್ನತ ಮಟ್ಟಕ್ಕೇರಿದರೂ ಆರಂಭಿಕ ಅಕ್ಷರ ಕಲಿಸಿದ ಗುರುಗಳನ್ನು ಮರೆಯಬಾರದು ..ಪಿ. ಸೋಮಣ್ಣ

 ಬೀದರ: ವ್ಯಕ್ತಿಯು ಎಷ್ಟೇ ಉನ್ನತ ಶಿಕ್ಷಣ ಪಡೆದಿದ್ದರೂ, ಉನ್ನತ ಮಟ್ಟಕ್ಕೇರಿದರೂ, ಆರಂಭದಲ್ಲಿ ಅಕ್ಷರಗಳನ್ನು ಕಲಿಸಿದ ಗುರುಗಳನ್ನು ಮರೆಯಬಾರದು ಎಂದು ರಾಣಿ ಕಿತ್ತೂರು ಚೆನ್ನಮ್ಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ವಿ. ಸೋಮಣ್ಣನವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ಇಂದು ರಾಣಿ ಕಿತ್ತೂರು ಚೆನ್ನಮ್ಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ ಅಂತರರಾಷ್ಟ್ರೀಯ ಶಿಕ್ಷಕರ ದಿನಾಚರಣೆ, ಸಾಧಕರಿಗೆ ಸನ್ಮಾನ ಹಾಗೂ ಪರಿಸರ ಜಾಗೃತಿ ಅಭಿಯಾನದಲ್ಲಿ ಮಾತನಾಡುತ್ತಿದ್ದರು. ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳು ಮಣ್ಣು ಮುದ್ದೆಯಂತಾಗಿರುತ್ತಾರೆ. ಅವರಿಗೆ ಆರಂಭಿಕ ರೂಪ ಕೊಡುವವರೇ ಶಿಕ್ಷಕರು. ಮುಂದಿನ ದಿನಮಾನಗಳಲ್ಲಿ ಅವರು ಉನ್ನತ ಶಿಕ್ಷಣ ಪಡೆದು ಉನ್ನತವಾದ ಹುದ್ದೆಗಳನ್ನು ಅಲಂಕರಿಸಿದರೂ ಕೂಡ ಶಿಕ್ಷಕರಿಗೆ ಅವರು ಮಕ್ಕಳೇ ಆಗಿರುತ್ತಾರೆ. ಆದ್ದರಿಂದ ಶಿಕ್ಷಕರಿಗೆ ಗೌರವ ಸನ್ಮಾನ ನೀಡುವುದು ಮಕ್ಕಳ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು. ತಮ್ಮ ತಾಯಿಯ ಹೆಸರಿನಲ್ಲಿ ವರ್ಷಕ್ಕೊಂದು ಸಸಿಯನ್ನು ನೆಡಬೇಕೆಂದು ಆಗ್ರಹಿಸಿದರು.
ಪಶುವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ನಿವೃತ್ತ ಉಪ ಹಣಕಾಸು ಅಧಿಕಾರಿ ಆಗಿರುವ ವೀರಭದ್ರಪ್ಪ ಉಪ್ಪಿನರವರು ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿ, ಶಿಕ್ಷಕರ ಬಗ್ಗೆ ಭಯ- ಭಕ್ತಿಗಳಿರುವುದು ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಮಟ್ಟದ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರು ತ್ತದೆ. ಇದನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಪಾಲನೆ ಮಾಡಿಕೊಂಡು ಬರಬೇಕೆಂದು ಕಿವಿಮಾತು ಹೇಳಿದರು. ಶಿಕ್ಷಕರಿಗೆ ಮಕ್ಕಳ ಬಗ್ಗೆ ಇರುವ ಕಾಳಜಿಯನ್ನು ಲಕ್ಷದಲ್ಲಿಟ್ಟುಕೊಂಡು, ಡಾಕ್ಟರ್ ರಾಧಾ ಕೃಷ್ಣನ್ ರವರು ತಮ್ಮ ಹುಟ್ಟು ಹಬ್ಬವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುವ ನಿರ್ಣಯವನ್ನು ಕೈಗೊಂಡಿರುವುದು ಅತ್ಯಂತ ಶ್ಲಾಘನಿಯವಾಗಿದೆ ಎಂದು ನುಡಿದರು.
ಅತಿಥಿಯಾಗಿ ಆಗಮಿಸಿದ ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅರವಿಂದ ಕುಲಕರ್ಣಿಯವರು ಮಾತನಾಡಿ, ಪ್ರಥಮ ಪ್ರಜೆಗಳಾಗಿರುವ, ಡಾಕ್ಟರ್ ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ಭಾರತದ ದ್ವಿತೀಯ ರಾಷ್ಟ್ರಪತಿಗಳಾಗಿದ್ದರು. ಶಿಕ್ಷಕರ ಕಠಿಣ ಪರಿಶ್ರಮ ಹಾಗೂ ಮಕ್ಕಳ ಬಗ್ಗೆ ಅವರಿಗೆ ಇರುವ ಕಾಳಜಿಯನ್ನು ಕೊಂಡಾಡಿದರು ಡಾ. ರಾಧಾ ಕೃಷ್ಣನರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಸಿಗೆ ನೀರೆರೆ ಯುವ ಮೂಲಕ ಕಾರ್ಯಕ್ರ ಮಕ್ಕೆ ಚಾಲನೆ ನೀಡಲಾಯಿತು.
ಸಾಧಕರಿಗೆ ಸನ್ಮಾನ:-
ಸರ್ಕಾರಿ ಅನುದಾನಿತ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷರಾಗಿ ಚುನಾಯಿತಗೊಂಡ ಶ್ರೀ ಸಂಗ್ರಾಮ್ ಚಾಮಾ ರವರನ್ನು ಹಾಗೂ ಜಿಲ್ಲಾ ಕಾರಾಗ್ರಹದ ಸಂದರ್ಶಕರ ಸಮಿತಿಯ ಸದಸ್ಯರಾಗಿ ನಾಮನಿರ್ದೇಶನ ಗೊಂಡ ವೀರಭದ್ರಪ್ಪ ಉಪ್ಪಿನ್‌ರವರಿಗೂ ಈ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಶಿಕ್ಷಕಿ ಮಾಲಾಶ್ರೀ ಹೆಡಗಾಪುರೆ ಯವರು ನಿರೂಪಣೆ ಮಾಡಿದರು. ಮುಖ್ಯೋಪಾಧ್ಯಾಯ ಚಾಮಾರವರು ಸ್ವಾಗತಿಸಿದರು. ವಿಶಾಲ ಬಿ. ಶಿಕ್ಷಕರು ವಂದಿಸಿದರು. ಸುಜಾತಾ,ಶಿವಪ್ರಿಯ, ಸಿದ್ದಲಿಂಗ, ಸವಿತಾ, ನಿಶಾ, ಭುವನೇಶ್ವರಿ, ಮಹಾನಂದಾ, ಲಕ್ಷ್ಮಿ, ಸುನಿತಾ ಹಾಗೂ ಅಸಂ ಖ್ಯಾತ ಮಕ್ಕಳು ಹಾಜರಿದ್ದರು.

Ghantepatrike kannada daily news Paper

Leave a Reply

error: Content is protected !!