ವೈಷ್ಣವಿ ಇಂಟರನ್ಯಾಶನಲ್ ಸ್ಕೂಲನಲ್ಲಿ ಶಿಕ್ಷಕರ ದಿನಾಚರಣೆ
ಬೀದರ್ :ನಗರದ ಹೊರವಲಯದಲ್ಲಿರುವ ವಿದ್ಯಾ ವಿಕಾಸ ಟ್ರಸ್ಟ ನೌಬಾದ್ ಅಡಿಯಲ್ಲಿ ನಡೆಯುತ್ತಿರುವ ವೈಷ್ಣವಿ ಇಂಟರನ್ಯಾಶನಲ್ ಸ್ಕೂಲ್ ಆಂಗ್ ಮಾಧ್ಯಮ ಮತ್ತು ವಿಶಾಲ ಪಬ್ಲಿಕ ಸ್ಕೂಲ್ ಕನ್ನಡ ಮಾಧ್ಯಮದಲ್ಲಿ ಸೆಪ್ಟೆಂಬರ 5ರಂದು ಕರನಾಟಕ ರಾಜ್ಯ ಮರಾಠ ನಿಗಮ ಮಂಡಳಿ ಮಾಜಿ ಅಧ್ಯಕ್ಷರು, ವಿದ್ಯಾ ವಿಕಾಸ ಟ್ರಸ್ಟ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಡಾ. ಎಂಜಿ ಮೂಳೆ ಅವರ ಜನ್ಮ ದಿನಾಚರಣೆ ಆಚರಿಸಲಾಯಿತು.
ಸೆ. 5 ರಂದು ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಬಸವರಾಜ ಬಳ್ಳೂರ ಪ್ರಾಚಾರ್ಯರು ಡಿಫಾರ್ಮಸಿ ಮಹಾವಿದ್ಯಾಲಯ ನೌಬಾದ ಬೀದರ, ಶ್ರೀರಾಮ ಬಿರಾದಾರ ನಿವೃತ್ತ ಮಾಜಿ ಸೈನಿಕ ಗುಮಾಸ್ತರು ಮತ್ತು ಸುನಿಲ ಕುಲಕರ್ಣಿ ಗುಮಾಸ್ತರು ಡಿಫಾರ್ಮಸಿ ಮಹಾವಿದ್ಯಾಲಯ ನೌಬಾದ ಬೀದರ, ಲಕ್ಮಣ ವೈ.ಎಮ್ ಪ್ರಾಚಾರ್ಯರು ಸಮಾಜ ಕಾರ್ಯ ಸ್ನಾತಕೋತ್ತರ ಮಹಾವಿದ್ಯಾಲಯ ನೌಬಾದ ಹಾಗೂ ಶಾಲಾ ಆಡಳಿತ ಅಧಿಕಾರಿಗಳಾದ ಶರಣಪ್ಪ ಚಂದನ್ಹಳ್ಳಿರವರು, ವಿಜಯಕುಮಾರ ವಾಘಮಾರೆ, ಸಮಾಜ ಕಾರ್ಯ ಸ್ನಾತಕೋತ್ತರ ಮಹಾವಿದ್ಯಾಲಯ ನೌಬಾದ, ಉಮಾದೇವಿ ಮುಖ್ಯಗುರುಗಳು, ವೈಷ್ಣವಿ ಇಂಟರನ್ಯಾಶನಲ್ ಸ್ಕೂಲ್ ಆಂಗ್ಲ ಮಾಧ್ಯಮ, ಅಶ್ವಿನಿ ವಿ. ದಾಮಾ ಮುಖ್ಯಗುರುಗಳು ವಿಶಾಲ ಪಬ್ಲಿಕ ಸ್ಕೂಲ್ ಕನ್ನಡ ಮಾಧ್ಯಮ ಹಾಗೂ ಸಿಬ್ಬಂದಿ ವರ್ಗದವರು ಮಕ್ಕಳಿಗೆ ಹಣ್ಣು – ಹಂಪಲುಗಳನ್ನು ನೀಡಿ ಹುಟ್ಟು ಹಬ್ಬವನ್ನು ವಿದ್ಯಾ ವಿಕಾಸ ಟ್ರಸ್ಟ್ ಶಿಕ್ಷಣ ಸಂಸ್ಥೆ ನೌದನಲ್ಲಿ ಆಚರಿಸಲಾಯಿತು.