ಬೀದರ್

ವಿಶ್ವ ಹಿರಿಯ ನಾಗರಿಕರ ದಿನ ಹಾಗೂ ರಕ್ಷಾಬಂಧನ ಆಚರಣೆ

ದೇಶದಲ್ಲಿ ಪರಸ್ಪರ ಭ್ರಾತೃತ್ವ ಭಾವನೆಗಳು ನಶಿಸಿ ಹೋಗುತ್ತಿರುವುದು ಹಾಗೂ ನೈತಿಕತೆಯ ಮೌಲ್ಯ ಗಳು ಕುಸಿಯುತ್ತಿರುವುದು ಹಿರಿಯ ನಾಗರಿಕರಿಗೆ ಕಳ ವಳವನ್ನುಂಟು ಮಾಡಿದೆ ಎಂದು ಜೈ ಹಿಂದ ಹಿರಿಯ ನಾಗರಿಕರ ಸಂಘದ ಕಾರ್ಯದರ್ಶಿ ವೀರಭದ್ರಪ್ಪ ಉಪ್ಪಿನ ರವರು ಅಭಿಪ್ರಾ ಯ ಪಟ್ಟರು. ಅವರು ಇಂದು ಬೀದರ ನಗರದ ಬರೀದಶಾಹಿ ಉದ್ಯಾನ ದಲ್ಲಿ ಏರ್ಪಡಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾ ಚರಣೆಯಲ್ಲಿ ಮಾತನಾಡು ತ್ತಿದ್ದರು. ಮುಂದುವರೆದು ಮಾತನಾಡಿ, ಭಾರತ ದೇಶವು ಸರ್ವಧರ್ಮಗಳ ಶಾಂತಿಯ ತೋಟವಾಗಿದ್ಫು, ಆಧ್ಯಾತ್ಮಿಕ ವಿಚಾರಧಾರೆ ಯ ಋಷಿ ಮುನಿಗಳ ಬೀಡಾಗಿದೆ. ಅನ್ಯ ಪಾಶ್ಚಿ ಮಾತ್ಯ ದೇಶಗಳಿಗೆ ಮಾದರಿ ಯಾಗುವತ್ತ ಮುನ್ನಡೆದಿದೆ. ಈಗ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಲೈoಗಿಕ ಅತ್ಯಾಚಾರ,ಕೊಲೆ, ಸುಲಿಗೆ, ಭ್ರಷ್ಟಚಾರ, ಹಗಲು ದರೋ ಡೆ ಗಳನ್ನು ನೋಡಿದರೆ, ಹಿಂದೆ ಆಗಿ ಹೋದ ಮಹನೀಯರು ಇಂತಹ ದಿನಗಳನ್ನು ನೋಡಲು ತಮ್ಮ ಪ್ರಾಣ ತ್ಯಾಗ ಮಾಡಿ, ದೇಶಕ್ಕೆ ಸ್ವಾತಂತ್ರ‍್ಯ ಕೊಡಿ ಸಿದರೇ ಎನ್ನುವ ಆತಂಕ ಮೂಡುತ್ತಿದೆ ಎಂದರು. ಯೋಗ ಮೇಲ್ವಿ ಚಾರಕ ರಾದ ಗಂಗಪ್ಪ ಸಾವಳೇ ಯವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಆಗುತ್ತಿರುವ ಪೈಶಾಚಿಕ ಕಷ್ಟಗಳನ್ನು ನೋಡಿ ಹಿರಿಯ ನಾಗ ರಿಕರು ಮಮ್ಮಲ ಮರುಗು ತ್ತಿದ್ದಾರೆ ಎಂದು ನುಡಿದರು. ಹಿರಿಯ ನಾಗರಿಕರಾದ ಮಲ್ಲಿಕಾರ್ಜುನ ಪಾಟಿಲ ಹಾಗೂ ನಿಜಲಿಂಗಪ್ಪ ತಗಾರೆಯವರು ಮಾತ ನಾಡಿದರು. ಪವಿತ್ರ ಹಬ್ಬ ರಕ್ಷಾ ಬಂಧನದ ನಿಮಿತ್ಯ, ಸಹೋದರಿಯರಾದ ಯೋಗ ಸಾಧಕಿಯರು, ಸಹೋದರರಾದ ಯೋಗ ಸಾಧಕರಿಗೆ ರಾಖಿ ಕಟ್ಟಿ ಶುಭವನ್ನು ಕೋರಿದರು. ಸಂಜು ಶೀಲವಂತ, ವೀರಶೆಟ್ಟಿ, ಚಂದ್ರಶೇಖರ ದೇವಣೀ, ಸಂಜು ಪಾಟೀಲ, ಈಶ್ವರ ಕನೆರಿ, ಮೀನಾಕ್ಸಿ, ವೀಣಾ, ವಿಜಯಲಕ್ಷ್ಮಿ, ಸರೋಜಾದೇವಿ ಮುಂತಾ ದವರು ಪಾಲ್ಗೊಂಡಿದ್ದರು.

Ghantepatrike kannada daily news Paper

Leave a Reply

error: Content is protected !!