ಬೀದರ್

ವಿಶ್ವ ಫೋಟೊಗ್ರಾಫಿ ದಿನಾಚರಣೆ ನಿಮಿತ್ಯ ಗೋಪಿಚಂದ ತಾಂದಳೆ ಅವರಿಗೆ ಸನ್ಮಾನ

ಬೀದರ್: ವಿಶ್ವ ಫೋಟೊಗ್ರಾಫಿ ದಿನಾಚರಣೆ ನಿಮಿತ್ಯವಾಗಿ ಬೀದರ ನಗರದ ಖ್ಯಾತ ಛಾಯಾಗ್ರಾಹಕರಾದ ಗೋಪಿಚಂದ ಮಾರುತಿರಾವ್ ತಾಂದಳೆಯವರಿಗೆ ಪತ್ರಕರ್ತರ ಬಳಗದಿಂದ ಸನ್ಮಾನಿಸಿ, ಗೌರವಿಸಲಾಯಿತು.
ಇದೆ ಸಂದರ್ಭದಲ್ಲಿ ಕರ್ನಾಟಕ ಜಾನಪದ ಅಕಾಡೇಮಿ ಸದಸ್ಯರಾದ ವಿಜಯಕುಮಾರ ಸೋನಾರೆ ಅವರು ಮಾತನಾಡಿ, ಗೋಪಿಯವರು ಸುಮಾರು ವರ್ಷಗಳಿಂದ ಹಲವರು ಪತ್ರಿಕೆಗಳಿಗೆ ಒಳ್ಳೆಯರೀತಿಯಿಂದ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ತಂದೆಯವರು ಕೂಡಾ ಸುಮಾರು ವರ್ಷಗಳಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿರುತ್ತಾರೆ. ತಂದೆ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಇವರು ನಡೆಯುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬೀದರ ಕೋಟೆ ವಾರ ಪತ್ರಿಕೆ ಸಂಪಾದಕರಾದ ಅನೀಲಕುಮಾರ ಕಮಠಾಣೆ, ಬಿಂದಾಸ್ ಬೀದರ್ ವಾರ ಪತ್ರಿಕೆಯ ಸಂಪಾದಕರಾದ ಸುನೀಲ ಭಾವಿಕಟ್ಟಿ, ಬೀದರ ಕೋಟೆ ವಾರ ಪತ್ರಿಕೆಯ ಜಿಲ್ಲಾ ವರದಿಗಾರರಾದ ಸೋಮನಾಥ ಬಿರಾದಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!