ವಿಶ್ವವನ್ನು ಬಂಧುತ್ವವೆಂದು ಪರಿಗಣಿಸಿದವರು ಪ್ರಕಾಶಮಣಿ ದಾದಿ: ಪ್ರತಿಮಾ ಬಹೆನ್‍ಜಿ
ಬೀದರ್: ವಿಶ್ವವನ್ನು ಬಂಧುತ್ವ ಭಾವದಿಂದ ಪರಿಗಣಿಸಿದ ಮಹಾನ ಚೇತನ ಶಕ್ತಿ ಪ್ರಕಾಶಮಣಿ ದಾದಿಯವರು ಎಂದು ಬ್ರಹ್ಮಾಕುಮಾರಿ ಕೇಂದ್ರ ಪಾವನಧಾಮ ಸಂಚಾಲಕಿ ಬಿ.ಕೆ ಪ್ರತಿಮಾ ಬಹೆನ್‍ಜಿ ಹೇಳಿದರು.
ಶುಕ್ರವಾರ ನಗರದ ಜನವಾಡ ರಸ್ತೆಯಲ್ಲಿರುವ ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ರಾಜಯೋಗ ಕೇಂದ್ರ ಪಾವನಧಾಮ ಅವರಣದಲ್ಲಿ ದಾದಿ ಪ್ರಕಾಶಮಣಿಯವರ ಸ್ಮøತಿ ದಿವಸ ಅಂಗವಾಗಿ ಆಚರಿಸಲಾಗುವ ವಿಶ್ವ ಬಂಧುತ್ವ ದಿವಸ ಕಾರ್ಯಕ್ರಮ ಹಾಗೂ ರಕ್ಷಾ ಬಂಧನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ವಸುದೈವ ಕುಟುಂಬಕಂ ಎಂಬ ಸಂಕಲೊದಡಿ ಎಲ್ಲರನ್ನು ಒಂದೆ ತಳಹದಿಯಲ್ಲಿ ಕೊಂಡೊಯ್ಯುವ ಹಾಗೂ ಉಚ್ಛ, ನೀಚ, ಬಡವ-ಶ್ರೀಮಂತ, ಹಿರಿಯ-ಕಿರಿಯ ಎಂಬ ಯಾವುದೇ ಭೇದ ಭಾವ ಮಾಡದೇ ಎಲ್ಲರನ್ನು ಸಹೋದರತ್ವ ಭಾವದಿಂದ ಬಿಗಿದಪ್ಪಿಕೊಳ್ಳುವ ಮಾತೃವಾತ್ಸಲ್ಯ ದಾದಿಯವರದಾಗಿತ್ತು ಎಂದು ಹೇಳಿದರು.
ಏಕತೆಯಲ್ಲಿ ಅಖಂಡತೆ ಕಂಡು ಕೊಂಡವರು ದಸಾದಿಯವರು. ಸದಾ ಒಂದೇ ಭಾವನೆ ವ್ಯಕ್ತಪಡಿಸುವುದರ ಜೊತೆಗೆÉೂಂದೆ ಭಾವ ನೆನಪು ಮಾಡಿಕೊಡುವ ಸ್ವಭಾವ ಅವರದಾಗಿತ್ತು. ಇಂಥ ಔದಾರ್ಯವನ್ನು ಪರಿಗಣಿಸಿ ಅವರ ಪುಣ್ಯ ಸ್ಮøತಿ ದಿವಸವನ್ನು ವಿಶ್ವ ಬಂಧುತ್ವ ದಿನವೆಂದು ಇಡೀ ವಿಶ್ವದಾದ್ಯಂತ ಆಚರಿಸಲಾಗುತ್ತದೆ ಎಂದರು.
ದಾದಿಯವರ ವಿಶೇಷತೆ ಎಂದರೆ ಕಡಿಮೆ ಸಮಯದಲ್ಲಿ ಯೋಗಿ ಜೀವನದಡಿ ಶಕ್ತಿಶಾಲಿ ಆಗಬೇಕೆನ್ನುವ ಧಥೃಢಸಂಕಲ್ಪ ಅವರಲ್ಲಿತ್ತು. ತನ್ನೊಂದಿಗೆ ಇತರರಿಗೂ ಸಫಲತೆ ಮಾರ್ಗದತ್ತ ಕೊಂಡೊಯ್ಯುವ ಭಾವನೆ ದಾದಿಯವರದ್ದಾಗಿತ್ತು. ಯೋಗಿಗಳು ಸದಾ ಸಹಯೋಗಿಗಳಾಗಿರುತ್ತಾರೆ ಎಂಬುದಕ್ಕೆ ಇವರ ತ್ಯಾಗಮಯ ಜೀವನ ನಮ್ಮೆಲ್ಲರಿಗೂ ಸ್ಪೂರ್ತಿ ಹಾಗೂ ಶಕ್ತಿಯಾಗಿ ಪರಿಣಮಿಸಿದೆ ಎಂದರು.
ದಾದಿಯವರು ತಮ್ಮ ಇಡೀ ಜೀವನದುದ್ದಕ್ಕೂ ಅಲ್ಪ ಸಮಯದಲ್ಲಿ ಶ್ರೇಷ್ಠ ಸಂಕಲ್ಪದೊಂದಿಗೆ ಬ್ರಹ್ಮಾಬಾಬಾ ಅವರೊಟ್ಟಿಗೆ ಸೇವೆ ಒದಗಿಸಿ, ಇತರರ ಜೀವನದಲ್ಲೂ ಸೇವಾಧಾರಿಯಾಗಿ ಹೊರಹೊಮ್ಮಿರುವ ಮಹಾನ ಪರೋಪಕಾರಿ ಅವರು. ತಮ್ಮ ವಾಣಿಯಿಂದ ಪ್ರಭಾವಶಾಲಿಯಾಗಿ ಹೊರಹೊಮ್ಮುವುದರ ಜೊತೆಗೆ ಇತರರ ಮನಸ್ಸು ಅರಿತುಕೊಳ್ಳುವ ಸಾಮಥ್ರ್ಯ ಅವರಲ್ಲಿತ್ತು. ಮಿತ ಭಾಷಿಯಾಗಿ ಇತರರಿಗೂ ಮಿತವಾಗಿ ಮಾತನಾಡುವ ಕೌಶಲ್ಯ ಕಲಿಸುವ ಸ್ವಭಾವದವರಾಗಿದ್ದರು. ಅವರ ಬಳಿ ಹೋದವರೆಲ್ಲ ಒಂದು ನಿರ್ದಿಷ್ಟ ಭಾವನೆಯಿಂದ ಹಿಂದಿರುಗುತ್ತಿದ್ದರು. ಅವರ ಜೀವನದಲ್ಲಿ ಒಂದು ಗುರಿ ಕಂಡುಕೊಳ್ಳುವ ಭಾವನೆ ಹೊಂದುತ್ತಿದ್ದರು.ಸ್ವತಃ ದಾದಿ ಸ್ವಚ್ಛವಾಗಿದ್ದು, ತನ್ನ ಪರಿಸರದಲ್ಲಿರುವವರನ್ನು ಶುಚಿಯಾಗಿ ಪರಿವರ್ತಿಸಿದ ಕೀರ್ತಿ ಅವರಲ್ಲಿದ್ದುದರಿಂದಲೇ ಇಡೀ ಬ್ರಹ್ಮಾಕುಮಾರಿ ಸಂಸ್ಥೆಗೆ ಒಂದು ಮಾದರಿ ಶಕ್ತಿಯಾಗಿ ಹೊರಹೊಮ್ಮಿದ್ದಾರೆ ಎಂದು ಬಹೆನ್‍ಜಿ ತಿಳಿಸಿದರು.
ಕೇಂದ್ರದ ಹಿರಿಯ ಪ್ರವರ್ತಕ ಬಿ.ಕೆ ಪ್ರಭಾಕರ ಭಾಯಿ ಮಾತನಾಡಿ, 1977ರಲ್ಲಿ ದಾದಿ ಪ್ರಕಾಶಮಣಿಯವರು ಬೀದರ್‍ಗೆ ಬಂದಿದ್ದರು. ಇಂದು ಇಡೀ ವಿಶ್ವದಲ್ಲಿ ತೆರೆದಿರುವ ಬ್ರಹ್ಮಾಕುಮಾರಿ ಕೇಂದ್ರಗಳ ಉಗಮಕ್ಕೆ ಇವರೆ ಮುಖ್ಯ ಕಾರಣರು. ಬಾಬಾ ಅವರು ದಾದಿಜಿಗೆ ಸಂಸ್ಥೆಯ ಜವಾಬ್ದಾರಿ ವಹಿಸಿದ ಬಳಿಕ ಅದನ್ನು ಉತ್ಸುಂಗ ಶಿಖರದತ್ತ ಕೊಂಡೊಯ್ಯುವ ಕಾರ್ಯ ಮಾಡಿದರು. ಹಮ್ಮು, ಬಿಮ್ಮು ಅವರ ಬಳಿ ಸುಳಿಯಲಿಲ್ಲ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಸ್ಥೆಯ ಅಭಿವೃದ್ಧಿಗೆ ತಮ್ಮ ಜೀವನ ಸಮರ್ಪೀಸಿದ ಮಹಾನ ಆತ್ಮ ಅವರಾಗಿದ್ದರು ಎಂದರು.
ಹಿರಿಯ ರಾಜಯೋಗ ಶಿಕ್ಷಕಿ ಬಿ.ಕೆ ಗುರುದೇವಿ ಅಕ್ಕನವರು ಮಾತನಾಡಿ, ಶ್ರಾವಣ ಮಾಸ ಬಂತೆಂದರೆ ಎಲ್ಲೆಲ್ಲೂ ಖುಷಿ, ಆನಂದ, ಉತ್ಸಾಹ, ಅಧ್ಯಾತ್ಮದ ಛಾಯೆ ಎಲ್ಲ ಕಡೆ ಆವರಿಸಿದೆ. ಪಾಂಡವ ವನ, ಜ್ಞಾನ ಸರೋವರ, ಯೋಗ ಪಾಠಶಾಲೆ, ರಾಜಯೋಗ ಸಭಾಂಗಣ ಹೀಗೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳು ಮಾಡುವ ಮೂಲಕ ಜನಮಾನಸದಲ್ಲಿ ಅಚ್ಚಳಿಯದೇ ಉಳಿದರು ಎಂದು ಕೊಂಡಾಡಿದರು.
ಬಿ.ಕೆ ಮಂಗಲಾ ಬಹೆನ್ ಮಾತನಾಡಿ, ದಾದಿ ಪ್ರಕಾಶಮಣಿಯವರು ಮೌಂಟ್ ಅಬುಗೆ ಬರುವ ಪ್ರತಿಯೊಂದು ಆತ್ಮವನ್ನು ಬಲು ಹತ್ತಿರದಿಂದ ಕಾನುತ್ತಿದ್ದರು. ಪ್ರತಿಯೊಬ್ಬರ ಕುಶಲೊಪರಿ ವಿಚಾರಿಸಿ ಅವರ ಕಷ್ಟ, ಸುಖಗಳಲ್ಲಿ ಪರಸ್ಪರ ಭಾಗಿಯಾಗಿ ವಾತ್ಸಲ್ಯದ ವಾತಾವರಣ ನಿರ್ಮಾಣ ಮಾಡುತ್ತಿದ್ದರು ಎಂದರು.
ಇದೇ ಸಂದರ್ಭದಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ಆಯೋಜಿಸಲಾಯಿತು. ಬಹೆನ್‍ಜಿ ಅವರು ನಿತ್ಯ ಕೇಂದ್ರಕ್ಕೆ ಬರುವ ಸಹೋದರ, ಸಹೋದರಿಯರಿಗೆ ಪರಮಾತ್ಮನ ನಾಲ್ಕು ಸಂಕಲ್ಪದೊಂದಿಗೆ ತಿಲಕವನಿಟ್ಟು, ರಾಖಿ ಕಟ್ಟಿ, ದಿವ್ಯ ದೃಷ್ಟಿ ದಯಪಾಲಿಸಿದರು. ಕೇಂದ್ರದ ಬಿ.ಕೆ ಸಹೋದರ, ಸಹೋದರಿಯರು ಹಾಗೂ ಇತರರು ಉಪಸ್ಥಿತರಿದ್ದರು.