ವಿವೇಕ ವಾಲಿ ಫೌಂಡೇಶನದಿಂದ ಖಂಡ್ರೆರಿಗೆ ಸನ್ಮಾನ ಬೀದರ ಜಿಲ್ಲಾ ಅಭಿವೃದ್ಧಿಗಾಗಿ ಶ್ರಮಿಸುವೆ -ಸಾಗರ ಖಂಡ್ರೆ
ಬೀದರ್,ಜೂ.13:- ಬೀದರ ಲೋಕಸಭಾ ಕ್ಷೇತ್ರದ ನೂತನ ಕಾಂಗ್ರೇಸ್ ಪಕ್ಷದ ಸಂಸದ, ಎನ್.ಎಸ್.ಯು.ಐ.ನ ರಾಜ್ಯ ಪ್ರಧಾನ ಕಾರ್ಯದರ್ಶಿ ಯುವ ಉತ್ಸಾಹಿ ದೇಶದ ಅಂತ್ಯತ ಕಿರಿಯ ವಯಸ್ಸಿನವರಾದ ಸಾಗರ ಈಶ್ವರ ಖಂಡ್ರೆರವರಿಗೆ ಇಂದು ಬೀದರ ಜಿಲ್ಲಾ ಕೇಂದ್ರದ ಗಡಿಪ್ರದೇಶದ ತೆಲಂಗಾಣದ ಹೊಸಳ್ಳಿ ಬಳಿ ಬೀದರಿನ ವಿವೇಕ ದೀಪಕ ವಾಲಿ ಫೌಂಡೇಶನ ಅಧ್ಯಕ್ಷ ತರುಣ ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕøತರಾದ ವಿವೇಕ ದೀಪಕ ವಾಲಿ ಅವರು ಶಾಲು ಹೊದಿಸಿ ಹೂ ಹಾರಹಾಕಿ ಸನ್ಮಾನಿಸಿ ಗೌರವಿಸಿದರು.
ಇವರ ತಂಡದ ವಿವೇಕ ಅನೀಲ ಚಿಲ್ಲರ್ಗೆ ಮನಿಶ್ ಕುಲಕರ್ಣಿ, ಹರಿಷ್ ಚಿಲ್ಲರ್ಗೆ, ರಮೇಶ ಮರ್ಜಾಪೂರ, ರವಿ ಕೋಡಗೆ, ಆಕಾಶ ಕೋಡಗೆ, ಸಿದ್ದಣ್ಣಾ ಎಳಸಂಗಿ, ಆನಂದ ಕಾಂಬಳೆ, ವಿವೇಕ ಸ್ವಾಮಿ, ಪ್ರಶಾಂತ ತಪಸಾಳೆ, ಅವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬೀದರ ಜಿಲ್ಲಾ ಅಭಿವೃದ್ಧಿಗಾಗಿ ಶ್ರಮಿಸುವಂತೆ ವಿವೇಕ ವಾಲಿ ಅವರು ಕೋರಿದಾಗ ಅದಕ್ಕೆ ಭರವಸೆ ನೀಡಿದ ಕಾಂಗ್ರೇಸ್ ಪಕ್ಷದ ಬೀದರ ನೂತನ ಸಂಸದರಾದ ಸಾಗರ ಖಂಡ್ರೆ ಅವರು ಬೀದರ ಜಿಲ್ಲೆಯಲ್ಲಿ ಅಭಿವೃದ್ಧಿ ಸಾಧಿಸುವೆ, ಯುವ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದು ಹೇಳಿದರು.