ವಿವಿಧ ಗ್ರಾಮ ಪಂಚಾಯಗಳಿಗೆ ಸಿಇಒ ಡಾ. ಗಿರೀಶ್ ಬದೋಲೆ ಭೇಟಿ
ಬೀದರ, ಆ.25ಹುಮನಾಬಾದ ತಾಲೂಕಿನ ವಿವಿಧ ಗ್ರಾಮ ಪಂಚಾಯಗಳಿಗೆ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗಿರೀಶ್ ಬದೋಲೆ ಭೇಟಿ ನೀಡಿ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು.
ಬೇನಚಿಂಚೊಳ್ಳಿ ಗ್ರಾ.ಪಂ ವ್ಯಾಪ್ತಿಯ ಕಬೀರಾಬಾದ ವಾಡಿ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ, ನಂದಗಾಂವ್ ಗ್ರಾ.ಪಂನ ಕೂಸಿನ ಮನೆ ಶಿಶು ಪಾಲನ ಕೇಂದ್ರ, ಗ್ರಂಥಾಲಯ ಹಾಗೂ ಎಂ.ಎಸ್.ಪಿ.ಸಿ ಮಹಿಳಾ ಪೂರಕ ಆಹಾರ ತಯಾರಿಕ ಘಟಕ, ಬಿಸಿಎಂ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ, ಹುಡುಗಿ ತಾಲೂಕಿನ ಜನತಾ ನಗರ ಗ್ರಾಮದ ಕಸ್ತೂರಬಾ ಗಾಂಧಿ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ ವಿವಿಧ ಮೂಲಭೂತ ಸೌಕರ್ಯಗಳು ಹಾಗೂ ಕಡತಗಳನ್ನು ಪರಿಶೀಲಿಸಿ ಎಲ್ಲ ಅಧಿಕಾರಿಗಳು ತಮಗಿರುವ ಜವಾಬ್ದಾರಿಯುತ್ತ ಕೆಲಸಗಳನ್ನು ಕಟ್ಟುನಿಟ್ಟಾಗಿ ಮಾಡಲು ಮತ್ತು ಪಾಲಿಸುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು, ಸಿಡಿಪಿಒ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಶಾಲಾ ಸಿಬ್ಬಂದಿ ವರ್ಗದವರು ಹಾಗೂ ಇತರರು ಇದ್ದರು.