ಬೀದರ್

ವಿಧಾನಮಂಡಲ ಅಧಿವೇಶನದಲ್ಲಿ ಶಾಸಕ ಬೆಲ್ದಾಳೆ ಚರ್ಚೆ* ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಪರಿಶಿಷ್ಟರ ಓಣಿ ಅಭಿವೃದ್ಧಿಗಿಲ್ಲ ನಯಾಪೈಸೆ ಹಣ!

ಬೀದರ್:ಪರಿಶಿಷ್ಟರ ಓಣಿಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ರಾಜ್ಯ ಸರ್ಕಾರ ೨೦೨೩-೨೪ ಹಾಗೂ ೨೦೨೪-೨೫ನೇ ಸಾಲಿನಲ್ಲಿ ನಯಾ ಪೈಸೆ ಅನುದಾನ ಬಿಡುಗಡೆ ಮಾಡಿಲ್ಲ ಎಂಬ ವಿಷಯ ಮಂಗಳವಾರ ವಿಧಾನಮಂಡಲ ಅಧಿವೇಶನದಲ್ಲಿ ಪ್ರತಿಧ್ವನಿಸಿತು.
ವಿಧಾನಸ¨S್ವ ಅಧಿವೇಶನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಮೇಲೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರು ಈ ವಿಷಯ ಪ್ರಸ್ತಾಪಿಸಿದರು. ಮಾತೆತ್ತಿದ್ದರೆ ಮುಖ್ಯಮಂತ್ರಿಗಳು ನಮ್ಮದು ಪರಿಶಿಷ್ಟರ ಕಲ್ಯಾಣದ ಸರ್ಕಾರ ಎಂದು ಹೇಳುತ್ತಾರೆ. ಆದರೆ ಈ ಬಡಾವಣೆಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ನಯಾ ಪೈಸೆ ಅನುದಾನ ಕೊಟ್ಟಿಲ್ಲ. ಎಲ್ಲಿದೆ ಹಣ?ಎಲ್ಲಾಗಿದೆ ಅಭಿವೃದ್ಧಿ? ಎಂದು ಖಾರವಾಗಿ ಪ್ರಶ್ನಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೀದರ್ ಜಿಲ್ಲೆಯಲ್ಲಿ ಆರು ವಿಧಾನಸಭಾ ಕ್ಷೇತ್ರಗಳಿವೆ. ಪ್ರತಿ ಕ್ಷೇತ್ರದಲ್ಲೂ ಪರಿಶಿಷ್ಟ ಪಂಗಡದ ಸರಾಸರಿ ೪೦ ಸಾವಿರದಷ್ಟು ಜನರಿದ್ದಾರೆ. ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಈ ಸಂಖ್ಯೆ ೫೦ ಸಾವಿರಕ್ಕೂ ಜಾಸ್ತಿಯಿದೆ. ಕುರುಬರು, ಕಬ್ಬಲಿಗರು, ವಾಲ್ಮೀಕಿ ಸಮಾಜದ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇನ್ನು ಪರಿಶಿಷ್ಟ ಜಾತಿಯವರ ಸಂಖ್ಯೆ ಇದಕ್ಕೂ ದುಪ್ಪಟ್ಟಿದೆ. ಹೀಗಿರುವಾಗ ಈ ಓಣಿಗಳಲ್ಲಿ ಒಂದೇ ಒಂದು ಪ್ರಗತಿ ಕೆಲಸ ಆಗಿಲ್ಲ ಎಂದರೆ ಹೇಗೆ? ನಾವು ಈ ಸಮಾಜದ ಜನರು ಕೇಳಿದರೆ ಏನು ಹೇಳಬೇಕು? ಎಂದು ಪ್ರಶ್ನಿಸುವ ಮೂಲಕ ಡಾ.ಬೆಲ್ದಾಳೆ ಅವರು ಸದನದ ಗಮನ ಸೆಳೆದರು.
ಪರಿಶಿಷ್ಟರ ಬಡಾವಣೆಗಳಲ್ಲಿ ಅಭಿವೃದ್ಧಿ ಕೆಲಸ ಮಾಡಲು ನನ್ನ ವಿಧಾನಸಭಾ ಕ್ಷೇತ್ರದಲ್ಲಿ ೩೩ ಕೋಟಿ ರೂ.ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ಕೊಟ್ಟಿರುವ ಮಾಹಿತಿ ಶುದ್ಧ ಸುಳ್ಳು ಇದೆ.ಪ್ರಗತಿ ಕಾಲೋನಿ, ನವಗ್ರಾಮ ಯೋಜನೆ ಸೇರಿದಂತೆ ಯಾವುದರಲ್ಲೂ ನಯಾಪೈಸೆ ಹಣ ಬಂದಿಲ್ಲ. ಈ ಕುರಿತಾಗಿ ನಾನು ನಿರಂತರ ಅಧಿಕಾರಿಗಳೊಂದಿಗೆ ಸಂಪರ್ಕ ಮಾಡುತ್ತಲೇ ಇದ್ದೇನೆ. ಆದರೆ ಅಂಕಿಅAಶ ತಪ್ಪು ನೀಡಿರುವುದು ಖಂಡನೀಯ. ನನ್ನ ಕ್ಷೇತ್ರಕ್ಕಂತೂ ಹಣ ಬಂದಿಲ್ಲ. ಬೇರೆಯವರ ಕ್ಷೇತ್ರಕ್ಕೆ ಬಂದಿದ್ದು ಗೊತ್ತಿಲ್ಲ ಎಂದು ಬೆಲ್ದಾಳೆ ಅವರು ಹೇಳಿದಾಗ, ಇತರೆ ಬಿಜೆಪಿ ಶಾಸಕರು ಸಹ ಇದಕ್ಕೆ ದನಿಗೂಡಿಸಿ, ನಮಗೂ ನಯಾಪೈಸೆ ಬಂದಿಲ್ಲ ಎಂದರು. ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ಕೊಟ್ಟಿದ್ದೀರಾ ಎಂದು ಪ್ರಶ್ನಿಸಿ ಡಾ.ಬೆಲ್ದಾಳೆ ಟಾಂಗ್ ಸಹ ನೀಡಿದರು.
ಸರ್ಕಾರ ಪರಿಶಿಷ್ಟರ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ೩೯ ಸಾವಿರ ಕೋಟಿ ರೂ.ಮೀಸಲಿಟ್ಟಿದೆ ಎಂದು ಹೇಳುತ್ತಿದೆ. ಮುಖ್ಯಮಂತ್ರಿಗಳAತೂ ಮಾತೆತ್ತಿದ್ದರೆ ಪರಿಶಿಷ್ಟರ ಕಲ್ಯಾಣ, ಹಿತದ ಬಗ್ಗೆ ಮಾತನಾಡುತ್ತಾರೆ. ಆದರೆ ಈ ಬಡಾವಣೆಗೆ ಏಕೆ ಹಣ ಕೊಟ್ಟಿಲ್ಲ? ಸಿಸಿ ರಸ್ತೆ, ಚರಂಡಿ, ಹೈಮಾಸ್ಟ್ ದೀಪ ಅಳವಡಿಕೆ ಸೇರಿದಂತೆ ಯಾವೊಂದು ಕೆಲಸ ಆಗಿಲ್ಲ. ಮುಖ್ಯಮಂತ್ರಿಗಳೇ ಈ ಬಗ್ಗೆ ಉತ್ತರ ನೀಡಲಿ ಎಂದು ಬೆಲ್ದಾಳೆ ಅವರು ಒತ್ತಾಯಿಸಿದರು.
ಮುಖ್ಯಮಂತ್ರಿಗಳ ಪರವಾಗಿ ಸಚಿವ ಎಚ್.ಕೆ.ಪಾಟೀಲ್ ಅವರು ಉತ್ತರಿಸಿ, ದಕ್ಷಿಣ ಕ್ಷೇತ್ರಕ್ಕೆ ೨೦೨೩-೨೪ನೇ ಸಾಲಿನಲ್ಲಿ ೭೦೭ ಲಕ್ಷ ರೂ.ಕೊಡಲಾಗಿದೆ. ೨೦೨೪-೨೫ರಲ್ಲಿ ಬಿಡುಗಡೆ ಮೊದಲ ಕಂತಿನಲ್ಲಿ ೧೯ ಲಕ್ಷ ರೂ. ಬಿಡುಗಡೆಯಾಗಿದೆ. ಪರಿಶಿಷ್ಟರ ವಿದ್ಯಾರ್ಥಿಗಳ ಶಿಷ್ಯವೇತನ, ಧನಸಹಾಯ, ಹಾಸ್ಟೆಲ್ ವೆಚ್ಚ ಇತರಕ್ಕೆ ಇದು ನೀಡಲಾಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳ ಧನಸಹಾಯದ ಹಣ ಬಂದಿದೆ. ಪರಿಶಿಷ್ಟರ ಬಡಾವಣೆ ಅಭಿವೃದ್ಧಿಗೆ ನಯಾಪೈಸೆ ಬಂದಿಲ್ಲ. ಇನ್ನು ಅಧಿಕಾರಿಗಳು ೩೩ ಕೋಟಿ ರೂ. ಬಿಡುಗಡೆ ಬಗ್ಗೆ ಕೊಟ್ಟಿದ ಬಗ್ಗೆ ಸುಳ್ಳು ಮಾಹಿತಿ ಕೊಟ್ಟಿದ್ದಾರೆ. ಈ ಬಗ್ಗೆ ಉತ್ತರಿಸಿ ಎಂದು ಶಾಸಕ ಬೆಲ್ದಾಳೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸುಳ್ಳು ಮಾಹಿತಿ ನೀಡಿದ್ದೇ ಆದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪರಿಶಿಷ್ಟರ ಓಣಿಯಲ್ಲಿ ಎರಡು ಬಜೆಟ್‌ನಿಂದ ಒಂದೇ ಒಂದು ಕೆಲಸ ಆಗದಿರುವುದು ಅತೀ ಗಂಭೀರ ಪ್ರಕರಣವಿದೆ. ಈ ಬಗ್ಗೆ ಗಮನ ಹರಿಸಿ ಕೂಡಲೇ ಹಣ ಬಿಡುಗಡೆ ಮಾಡಬೇಕು. ಯಾವುದೇ ಕಾರಣಕ್ಕೂ ಈ ಸಮಾಜಕ್ಕೆ ಅನ್ಯಾಯ ಆಗಬಾರದು ಎಂದು ಡಾ.ಬೆಲ್ದಾಳೆ ಅವರು ಸ್ಪೀಕರ್ ಅವರಲ್ಲಿ ಮನವಿ ಮಾಡಿದರು. ಈ ಬಗ್ಗೆ ಸ್ಪೀಕರ್ ಅವರು ಸೂಕ್ತ ಕ್ರಮದ ಭರವಸೆ ನೀಡಿ, ಚರ್ಚೆಗೆ ತೆರೆ ಎಳೆದರು.

Ghantepatrike kannada daily news Paper

Leave a Reply

error: Content is protected !!