ವಿಜಯಕುಮಾರ ಸೋನಾರೆ ಆವರನ್ನು ೨೦೨೩ನೆಯ ಸಾಲಿನ ‘ಕೆ.ಆರ್. ಲಿಂಗಪ್ಪಜಾನಪದ ದತ್ತಿ ಪ್ರಶಸ್ತಿ’
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ೨೦೨೩ನೆಯ ಸಾಲಿನ ‘ಕೆ.ಆರ್. ಲಿಂಗಪ್ಪಜಾನಪದದತ್ತಿ ಪ್ರಶÀಸ್ತಿ’ಯನ್ನು, ವಿಜಯಪುರ ಜಿಲ್ಲೆ ಸಿಂಧಗಿ ತಾಲ್ಲೂಕಿನ ಬೋರಗಿ ಗ್ರಾಮದ ಶ್ರೀವiತಿ ಇಮಾಂಬಿ ದೊಡ್ಡಮನಿ ಮತ್ತು ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಮಾಸಿಮಾಡ್ ಗ್ರಾಮದ ಶ್ರೀ ವಿಜಯಕುಮಾರ್ ಸೋನಾರೆ ಈ ಇಬ್ಬರು ಹೆಸರಾಂತ ಜನಪದ ಗಾಯಕರಿಗೆ ನೀಡಿ ಗೌರವಿಸುತ್ತಿದೆ.
ದಿನಾಂಕ: ೨೪.೭.೨೦೨೪ರ ಬುಧವಾರ ಬೆಳಗ್ಗೆ ೧೧.೩೦ಕ್ಕೆ ಯಾದಗಿರಿಯ ಹಳೇ ರ್ಕಾರಿ ಆಸ್ಪತ್ರೆ ರಸ್ತೆಯಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಫ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ಡಾ.ಸಿ. ಸೋಮಶೇಖರರವÀರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಗುರುಮಠಕಲ್ ಖಾಸಾಮಠದ ಪೂಜ್ಯಶ್ರೀ ಶಾಂತವೀರಗುರು ಮುರುಘರಾಜೇಂದ್ರ ಮಹಾಸ್ವಾಮಿಗಳವರು ದಿವ್ಯಸಾನ್ನಿಧ್ಯ ವಹಿಸಲಿದ್ದಾರೆ.ಡಾ. ಗೊ.ರು. ಚನ್ನಬಸಪ್ಪರವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ಶ್ರೀ ಅಪ್ಪಾರಾವ ಅಕ್ಕೋಣೆ ಮತ್ತು ಡಾ.ಎಲ್. ಪಂಚಾಕ್ಷರಿ ವಹಿಸಲಿದ್ದಾರೆ.ಜಾನಪದ ಸಾಹಿತಿಗಳಾದ ಡಾ. ಬಸವರಾಜ ನೆಲ್ಲಿಸರ ಅವರು ಕೆ.ಆರ್. ಲಿಂಗಪ್ಪಅವರ ಸಂಸ್ಮರಣಾ ಭಾಷಣ ಮಾಡಲಿದ್ದಾರೆ.
ಇದೇ ಸಂರ್ಭದಲ್ಲಿ ಯಾದಗಿರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಸಿದ್ಧಪ್ಪ ಶರಣಪ್ಪ ಹೊಟ್ಟಿಯವರು, ಆಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯಯುವ ವೇದಿಕೆ ಪ್ರತಿನಿಧಿ ಶ್ರೀ ಪ್ರಕಾಶ್ಅಂಗಡಿ ಕನ್ನೆಳ್ಳಿ ಮತ್ತು ಶ್ರೀ ಎಸ್.ಎಸ್. ಮಠ ಅವರುಗಳನ್ನು ವಿಶೇಷವಾಗಿ ಸನ್ಮಾನಿಸಲಿದ್ದಾರೆ.