ಬೀದರ್

ವಿಕಲಚೇನತರ ಮನೆ ಬಾಗಿಲಿಗೆ ಯುಡಿಐಡಿ ಕಾರ್ಡ್ ಒದಗಿಸಲು ಕ್ರಮ ವಹಿಸಿ-ನಾಗರಾಜ ಮಠ

ಬೀದರ. ಆಗಸ್ಟ್.18 – ಜೂನ್ 01, 2023 ರಿಂದ ವಿಕಲಚೇತನರ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸೌಲಭ್ಯ ಪಡೆಯಲು ಯಿಡಿಐಡಿ ಕಾರ್ಡ್ ಕಡ್ಡಾಯವಾಗಿರುವ ಕಾರಣ ಎಂ.ಆರ್.ಡಬ್ಲೂö್ಯ, ವಿ.ಆರ್.ಡಬ್ಲೂö್ಯ,ಯು.ಆರ್.ಡಬ್ಲೂö್ಯ.ಗಳು ತಮ್ಮ ತಮ್ಮ ತಾಲ್ಲೂಕು, ಗ್ರಾಮ ಪಂಚಾಯತ, ನಗರ ವಾರ್ಡ್ ಮಟ್ಟದಲ್ಲಿ ಅರಿವು ಮೂಡಿಸಿ ಎಲ್ಲಾ ವಿಕಲಚೇತನರಿಗೆ ಯುಡಿಐಡಿ ಕಾರ್ಡ್ ಅವರ ಮನೆ ಬಾಗಿಲಿಗೆ ಒದಗಿಸುವಂತೆ ಕ್ರಮ ವಹಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ನಾಗರಾಜ ಮಠ ಕರೆ ನೀಡಿದರು.
ಅವರು ಗುರುವಾರ ಮೈಲೂರಿನ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಬೀದರ, ಜಿಲ್ಲಾ ವಿಕಲಚೇತನರ (ಅಂಗವಿಕಲರ) ಪುನರ್ವಸತಿ ಕೇಂದ್ರ ಬ್ರೀಮ್ಸ್ ಆಸ್ಪತ್ರೆ, ಬಈದರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲೆಯ ಗ್ರಾಮ ಪಂಚಾಯತಿ, ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ ವ್ಯಾಪ್ತಿಯಲ್ಲಿ “ವಿಕಲಚೇತನರ (ಅಂಗವಿಕಲರ) ಮನೆಯ ಬಾಗಿಲಿಗೆ ಯು.ಡಿ.ಐ.ಡಿ.ಕಾರ್ಡ್” ಎಂಬ ಘೋಷ ವಾಕ್ಯದಡಿಯಲ್ಲಿ ಆಗಸ್ಟ್ ತಿಂಗಳು ಮಾಸಾಚರಣೆ ಆಚರಿಸುವ ಕುರಿತು ಹಾಗೂ ಜಿಲ್ಲಾ ಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದ ಮುಖ್ಯಸ್ಥರಾದ ಸಂಜು ಬಿ.ಕೇರಿ, ವಿ.ಆರ್.ಡಬ್ಲೂö್ಯ, ಯು.ಆರ್.ಡಬ್ಲೂö್ಯ, ಜಿಲ್ಲಾ ಸಂಯೋಜಕರಾದ ಬಾಬುರಾವ ರಾಠೋಡ ಹಾಗೂ ಆಯಾ ತಾಲ್ಲೂಕಿನ ಎಂ.ಆರ್.ಡಬ್ಲೂö್ಯ.ಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
Ghantepatrike kannada daily news Paper

Leave a Reply

error: Content is protected !!