ಲೋಕಾಯುಕ್ತದಲ್ಲಿ ಪಶು ವಿವಿದಲ್ಲಿ ನಡೆದ 32.26 ಕೋಟಿ ಅವ್ಯವಹಾರ ಸಾಭಿತು. 6.63 ಕೋಟಿ ವಾಪಸ್ ವೀರ ಕನ್ನಡಿಗರ ಸೇನೆ ರಾಜ್ಯ ಸಂಚಾಲಕ ಸುಬ್ಬಣ್ಣ ಕರಕನಳ್ಳಿ.
ಬೀದರ ನಂದಿನಗರದಲ್ಲಿರುವ ಕರ್ನಾಟಕ ಪಶುವೈದ್ಯಕೀಯ, ಪಶು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 2019 ರಲ್ಲಿ ನವಡೆದಿರುವ 32.26 ಕೋಟಿ ಹಣಕಾಸಿನ ಅವ್ಯವಹಾರ ಕುರಿತು ವೀರ ಕನ್ನಡಿಗರ ಸೇನೆ ರಾಜ್ಯ ಸಂಚಾಲಕ ಸುಬ್ಬಣ್ಣ ಕರಕನಳ್ಳಿ 1-10-2019 ರಂದು ಕರ್ನಾಟಕ ಲೋಕಾಯುಕ್ತ ಬೆಂಗಳೂರು ರವರಿಗೆ ಪಶುವಿವಿದ ಹಣಕಾಸು ನಿಯಂತ್ರಣಾಧಿಕಾರಿಯಾಗಿದ ಕೆ ಎಲ್ ಸುರೇಶ ಮತ್ತು ಕುಲಪತಿಗಳಾಗಿದ ಡಾ. ಎಚ್ ಡಿ ನಾರಾಯಣ ಸ್ವಾಮಿ, ಸಂಬAಧಪಟ್ಟ ಅಧಿಕಾರಿಗಳ ಮೇಲೆ ಸಂಬAಧಪಟ್ಟ ದಾಖಲಾತಿಗಳೊಂದಿಗೆ ದೂರನ್ನು ನೀಡಲಾಗಿತ್ತು. ಈ ಪ್ರಕರಣ 2019 ರಿಂದ 4-06-2024 ಕ್ಕೆ ಮುಕ್ತಾಯವಾಗಿದ್ದು, ಆಗಿರುವ ಹಣಕಾಸಿನ ಹಗರಣದಲ್ಲಿ 6 ಕೋಟಿ 63 ಲಕ್ಷ 19 ಸಾವಿರ 882 ನೂರು ರೂಪಾಯಿ ಭ್ರಷ್ಟಚಾರ ಮಾಡಿರುವ ಅಧಿಕಾರಿಗಳು ವಾಪಸ ಪಾವತಿ ಮಾಡಿರುವುದಾಗಿ, ದೂರುದಾರರಿಗೆ, 10-6-2024 ರಂದು ಲೋಕಾಯುಕ್ತ ಡಿ ಆರ್ ಇ-3 ಬೆಂಗಳೂರು, ಮಹ್ಮದ ಇಮ್ತಿಯಾಜ್ ಅಹ್ಮದ 16 ಲಿಖಿತ ಪುಟಗಳ ಲಿಖಿತ ಪತ್ರದ ಮೂಲಕ ತಿಳಿಸಿದ್ದಾರೆ. ಕರ್ನಾಟಕ ಪ್ರಜಾಶಕ್ತಿ ಸಮಿತಿ ಹಾಗೂ ವೀರ ಕನ್ನಡಿಗರ ಸೇನೆ ಜಂಟಿ ಹೋರಾಟದ ಮೂಲಕ ಅಂದಿನ ಪಶುಸಂಗೋಪನೆ ಸಚಿವರಾಗಿದ್ದ ಶ್ರೀ ಪ್ರಭು ಚೌವ್ಹಾಣ, ಮುಖ್ಯ ಮಂತ್ರಿಗಳಾಗಿ, ಶ್ರೀ. ಬಿ. ಎಸ್. ಯಡಿಯುರಪ್ಪ, ರಾಜ್ಯಪಾಲರಿಗೂ 9 ಸಲ ದೂರು ನೀಡಲಾಗಿತ್ತು. 32. ಕೋಟಿ 26 ಲಕ್ಷ ಹಣಕಾಸಿನ ಅವ್ಯವಹಾರ ಮುಚ್ಚಿಹಾಕುವ ಎಲ್ಲಾ ಪ್ರಯತ್ನಗಳು ನಡೆದಿರುತ್ತವೆ. ಇದನ್ನು ನೋಡಿ ವೀರ ಕನ್ನಡಿಗರ ಸೇನೆ, ವತಿಯಿಂದ ಕರ್ನಾಟಕ ಲೋಕಾಯುಕ್ತರಿಗೆ ದೂರನ್ನು ನೀಡಲಾಯಿತು. ಐದು ವರ್ಷದ ಬಳಿಕೆ ಹೋರಾಟಕ್ಕೆ ನ್ಯಾಯ ಸಿಕ್ಕಿದೆ. ಪಶು ವಿವಿಯಲ್ಲಿ ನಡೆದಿರುವ, ಬ್ಯಾಕಲಾಗ ಹುದ್ದೆಗಳ ನೇಮಕಾತಿ 53 ಎಂಟರಪ್ರೆöÊಜೆಸ್ ಮೂಲಕ ಮಾಡಿರುವ ಹಣಕಾಸಿನ ಅವ್ಯವಹಾರ ಸಾಬಿತಾಗಿದ್ದು, 6,63,19,882 ರೂಪಾಯಿ ಉಸಲಾತಿ ಮಾಡಿರುವುದು ನಿರಂತರವಾದ ಹೋರಾಟ ಕಾನೂನುನಾತ್ಮಕ್ಕೆ ಸಿಕ್ಕ ಜೈಯವಾಗಿದ್ದೆಯೆಂದು ಪತ್ರಿಕಾ ಪ್ರಕಟಣೆಯಲ್ಲಿ ವೀರ ಕನ್ನಡಿಗರ ಸೇನೆ ರಾಜ್ಯ ಸಂಚಾಲಕ ಸುಬ್ಬಣ್ಣ ಕರಕನಳ್ಳಿ ತಿಳಿಸಿದ್ದಾರೆ. ಕಳೆದ ಐದು ವರ್ಷಗಳಿಂದ ಮಾಡುತ್ತಾ ಬಂದಿರುವ ಹೋರಾಟವನ್ನು ಮಾಧ್ಯಮದಲ್ಲಿ ಪ್ರಕಟಿಸಿ, ಸಂಘಟನಕಾರರಿಗೆ ಶಕ್ತಿ ನೀಡಿರುವ ಮಾಧ್ಯಮ ಮೀತ್ರರಿಗೆ ಧನ್ಯವಾದಗಳು ಸಲ್ಲಿಸುತ್ತೇನೆ. ಹೋರಾಟಕ್ಕೆ ಕೈಜೋಡಿಸಿದ, ಕರ್ನಾಟಕ ಪ್ರಜಾಶಕ್ತಿ ಸಮಿತಿ ವಿಭಾಗಿ ಅಧ್ಯಕ್ಷ ಪ್ರೇಮಕುಮಾರ ಕಾಂಬಳೆ, ಜಿಲ್ಲಾಧ್ಯಕ್ಷ ಸಾಯಿ ಸಿಂಧೆ, ವೀರ ಕನ್ನಡಿಗರ ಸೇನೆ ಜಿಲ್ಲಾಧ್ಯಕ್ಷ ಮುಕೇಶ ಶಾಹಗಂಜ್, ಹಾಗೂ ಪದಾಧಿಕಾರಿಗಳ ಹೋರಾಟದ ಫಲವಾಗಿ ಜೈಯಸಿಕ್ಕಿದೆ.