ಲಂಡನ್ ನಲ್ಲಿ ಕನ್ನಡ ಕಲರವ ಮೂಡಿಸಿದ ಬೀದರ್ ಯುವಕ ಭಾಷಣದಲ್ಲಿ ಬಸವಣ್ಣನವರ ವಚನ ಪಠಿಸಿ ಮಾದರಿ
ಲಂಡನ್, ಯುಕೆ – ಲಂಡನ್ ಯೂತ್ ಕೌನ್ಸಿಲ್ ನ ಮೊದಲ ಭಾರತೀಯ ಸದಸ್ಯರಾದ ಅಧೀಶ್ ರಜಿನೀಶ್ ವಾಲಿ ಅವರು, ಲಂಡನ್ ಸಂಸತ್ತಿನಲ್ಲಿ ತಮ್ಮ ಪ್ರಥಮ ಭಾಷಣದಲ್ಲಿ ಮಾತೃ ಭಾಷೆ ಕನ್ನಡದಲ್ಲಿ ಮಾತನಾಡುವ ಮೂಲಕ ಸಂಸತ್ತಿನ ಎಲ್ಲ ಸದಸ್ಯರ ಗಮನಸೆಳೆದರು. ತಮ್ಮ ಭಾಷಣವನ್ನು 12ನೇ ಶತಮಾನದ ತತ್ವಜ್ಞಾನಿ, ಸಾಮಾಜಿಕ ಸುಧಾರಕ, ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ವಚನಗಳನ್ನು ಹೇಳುವ ಮೂಲಕ ಪ್ರಾರಂಭಿಸಿ, ಪ್ರಾಚೀನ ಜ್ಞಾನ ಮತ್ತು ಇಂದಿನ ತಾತ್ಕಾಲಿಕ ಸಮಸ್ಯೆವಾದ ಹವಾಮಾನದಿಂದಾಗುತ್ತಿರುವ ವಲಸೆಗಳ ಬಗ್ಗೆ ಮಾತನಾಡಿದರು.
“ಹವಾಮಾನ ವಲಸೆ – ಯುಕೆ ಸರ್ಕಾರದ ನೀತಿ” ಎಂಬ ವಿಷಯದ ಮೇಲೆ ತಮ್ಮ ಪ್ರಸ್ತುತಿಯನ್ನು ಮಾಡುತ್ತಾ, ರಾಜಕೀಯ ಪ್ರತಿನಿಧಿಗಳು, ವಿಶ್ವಸಂಸ್ಥೆಯ ಪ್ರತಿನಿಧಿಗಳು ಮತ್ತು ಸರ್ಕಾರದ ಅಧಿಕಾರಿಗಳನ್ನೊಳಗೊಂಡ ಗಣ್ಯರ ಬಳಗವನ್ನುದ್ದೇಶಿಸಿ ಮಾತನಾಡಿದರು.
ಹವಾಮಾನ ಬದಲಾವಣೆಯಿಂದಾಗಿ ಪ್ರೇರಿತವಾದ ವಲಸೆ ಸಮಸ್ಯೆಯ ಬಗ್ಗೆ ವಿವರಿಸಿದರು ಮತ್ತು ವಲಸೆ ಸಮುದಾಯಗಳನ್ನು ಒಪ್ಪಿಕೊಳ್ಳುವ ನೀತಿಗಳನ್ನು ರೂಪಿಸುವ ಅವಶ್ಯಕತೆಯಿದೆ ಇದೆ ಎಂದು ಹೇಳಿದರು.
ಬಸವಣ್ಣನವರ ವಚನಗಳು ಸರ್ವ ಕಾಲೀನ ಪರಿಸ್ಥಿತಿಯ ಸಂಕೇತಾತ್ಮಕ ಸಂಬಂಧವನ್ನು ತೋರಿಸುತ್ತವೆ ಮತ್ತು ಇಂದಿನ ಈ ಸವಾಲಿನ ಪರಿಹಾರಕ್ಕಾಗಿ ಸಮಾನತೆ ಮತ್ತು ಸಹಾನುಭೂತಿ ಅಗತ್ಯವಿದೆ ಎಂಬುದನ್ನು ಒತ್ತಿ ಹೇಳುತ್ತವೆ. ಬಸವಣ್ಣನವರ ವಿಚಾರಗಳು ಸಮಾನತೆಯನ್ನು ಪ್ರೋತ್ಸಾಹಿಸಿದಂತೆ, ಹವಾಮಾನ ಬದಲಾವಣೆಯಿಂದ ಪ್ರತಿಕೂಲತೆಯನ್ನು ಅನುಭವಿಸುತ್ತಿರುವವರಿಗೆ ಸಹಾಯ ಮಾಡಲು ಆಧುನಿಕ ಸಮಾಜವು ಮುಂದಾಗಬೇಕೆಂದು ಸೂಚಿಸಿದರು.
ಇದನ್ನು ಲಂಡನ್ ಯುವ ಸಮಿತಿ ಯುಕೆ ಸಂಸತ್ತಿಗೆ ನೀಡಿದ ಶಿಫಾರಸುಗಳಲ್ಲಿ ಭಾಗವಾಗಿಸಿ, ಹವಾಮಾನ ವಲಸೆ ಕುರಿತಂತೆ ನವೀಕರಿತ ನೀತಿಗಳನ್ನು ರೂಪಿಸುವ ಆವಶ್ಯಕತೆಯನ್ನು ತಿಳಿಸಿದರು. ಯುವ ಸಮಿತಿಯ ಮೊದಲ ಭಾರತೀಯ ಸದಸ್ಯರಾಗಿರುವ ಆದೀಶ್ ರಜನೀಶ್ ವಾಲಿಯವರ ಪಾತ್ರವು ಜಾಗತಿಕ ಸಮಸ್ಯೆಗಳ ಕುರಿತಂತೆ ಯುಕೆ ನೀತಿಯನ್ನು ರೂಪಿಸುವಲ್ಲಿ ವಿಭಿನ್ನ ಸ್ವರಗಳ ಪ್ರಭಾವವನ್ನು ತೋರಿಸುತ್ತದೆ.
ಲಂಡನ್ ಯುವ ಸಮಿತಿಯಲ್ಲಿರುವುದರ ಜೊತೆಗೆ, ಕನ್ನಡ ಸಾಹಿತ್ಯ ಪರಿಷತ್ತಿನ ಯುನೈಟೆಡ್ ಕಿಂಗ್ಡಮ್ ಗೌರವಯುತ ಯುವ ಸಂಯೋಜಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದು, ಆದೀಶ್ ವಾಲಿಯವರು ತಮ್ಮ ಪರಂಪರೆಯ ಜೊತೆಗೆ ಭವಿಷ್ಯದ ಸಮಾನತೆಗಾಗಿ ಹೋರಾಟ ಮಾಡುವ ತಮ್ಮ ಸಂಕಲ್ಪವನ್ನು ಇನ್ನಷ್ಟು ಬಲಪಡಿಸಿದ್ದಾರೆ.
Adish wali x.com social media handle