ರೋಟರಿ ಕ್ಲಬ್ ಹುಮ್ನಾಬಾದ ನಿಂದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಹಿರಿಯ ನಾಗರಿಕರು ಚಿಂತೆ ಮಾಡದೆ ಚಿಂತನ ಮಾಡಬೇಕು – ಪ್ರೊ. ದೇವೇಂದ್ರ ಕಮಲ್
ಚಿಂತೆ ಬಿಟ್ಟು ಚಿಂತನೆ ಮಾಡುವ ಅಭ್ಯಾಸ ಹಾಕಿಕೊಂಡರೆ ಆಯಸ್ಸು ವೃದ್ಧಿಸುವುದು. ಹಿರಿಯ ನಾಗರಿಕರು ಚಿಂತನಾ ಶೀಲರಾಗಿದ್ದರೆ ಹೆಚ್ಚು ಕಾಲ ಬಾಳಬಹುದು ಎಂದು ಬಿವಿಬಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ದೇವೇಂದ್ರ ಕಮಲ್ ರವರು ಅಭಿಪ್ರಾಯ ಪಟ್ಟರು. ಅವರು ಇಂದು ಗುರು ನಾನಕ ಕಾಲೋನಿಯಲ್ಲಿ ರುವ ಜೈಹಿಂದ್ ಹಿರಿಯ ನಾಗರಿಕರ ಸಂಘ ಹಾಗೂ ಹುಮ್ನಾಬಾದ್ ರೋಟರಿ ಕ್ಲಬಗಳ ಸಂಯುಕ್ತಾಶ್ರಯ ದಲ್ಲಿ ಏರ್ಪಡಿಸಲಾಗಿದ್ದ “”ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡು ತ್ತಿದ್ದರು. ಚಿಂತೆಯು ಚಿತೆ ಯನ್ನೂ ಸುಡುತ್ತದೆ. ಚಿಂತ ನೆಯು ಮನುಷ್ಯನ ಕ್ರಿಯಾ ಶೀಲತೆಯನ್ನು ಹೆಚ್ಚಿಸುತ್ತದೆ ಎಂದು ಅಭಿಪ್ರಾಯ ಪಟ್ಟರು. ಹುಮನಾಬಾದ ರೋಟರಿ ಕ್ಲಬ್ ನ ಅಧ್ಯಕ್ಷ ರಾದ ನಾಗರಾಜ್ ಕರ್ಪೂರ ರವರು ಪ್ರಾಸ್ತಾವಿಕವಾಗಿ ಮಾತನಾಡಿ, ರೋಟರಿ ಕ್ಲಬ್ ನ ಕಾರ್ಯ ಚಟುವಟಿ ಕೆಗಳನ್ನು ವಿವರಿಸಿದರು. ಜೈಹಿಂದ್ ಸಂಘದ ಕಾರ್ಯ ದರ್ಶಿ ವೀರಭದ್ರಪ್ಪ ಉಪ್ಪಿನ ರವರು ನಿರೂಪಿಸಿದರು. ವಿಜಯ ಕುಮಾರ್ ಸೂರ್ಯಾನರವರು ಸ್ವಾಗ ತಿಸಿದರು. ಆರ್.ಆರ್. ಮುನಿಗ್ಯಾಲ್ ಆಧ್ಯಕ್ಷತೆ ವಹಿಸಿದ್ದರು. ವೀರ ಸಮ ರ್ಥ್ ರವರು ಸ್ವಾಗತ ಗೀತೆಯನ್ನು ಹಾಡಿದರು. ಗಂಗಪ್ಪ ಸಾವಳೆಯವರು ವಂದಿಸಿದರು. ನಾರಾಯಣ ರಾವ ಕಾಂಬ್ಳೆ, ರಾಮಚಂದ್ರ ಗಜರೆ , ಬಸವರಾಜ್ ಘುಳೆ, ಲಲಿತಾ ಬಾಯಿ, ಶಿವಪುತ್ರ ಮೆಟಗೆ, ಮಚೆoದ್ರ ಎಕಲಾರಕರ, ಡಾ.ಸುಭಾಷ ಪೋಲಾ, ಮೋಹನರಾವ್ ಕುಲಕರ್ಣಿ, ಶಿಮ್ರಾನ್, ರಾಜೇಂದ್ರ ಸಿಂಗ್ ಪವಾರ್, ಶಂಕರ್ ಚಿದ್ರಿ, ರೇಖಾ ಮುoತಾದವರು ಹಾಜರಿದ್ದರು. ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು