ಬೀದರ್

ರೈತರ ಆಪ್ತರಕ್ಷಕ ಫಸಲ್ ಬಿಮಾ: ಭಗವಂತ ಖೂಬಾ

ಸಣ್ಣ ಪ್ರೀಮಿಯಂ ದೊಡ್ಡ ಸುರಕ್ಷೆಯಾಗಿರುವ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಕ್ಷೇತ್ರದ ಸಮಸ್ತ ರೈತರು ನೊಂದಾಯಿಸಿಕೊಳ್ಳಬೇಕು, ಈ ತಿಂಗಳು ೩೧ ಕೊನೆ ದಿನವಾಗಿರುತ್ತದೆ, ಆದ್ದರಿಂದ ರೈತರು ತಮ್ಮ ಹತ್ತಿರದ ಪಿ.ಕೆ.ಪಿ.ಎಸ್. ಬ್ಯಾಂಕ್, ಸಿ.ಎಸ್.ಸಿ. ಸೆಂಟರ, ಗ್ರಾಮ-ಒನ್, ಕರ್ನಾಟಕ ಒನ್ ಮತ್ತು ರಾಷ್ಟಿçÃಕೃತ ಬ್ಯಾಂಕುಗಳಲ್ಲಿ ನೊಂದಣಿ ಮಾಡಿಸಿಕೊಳ್ಳಬೇಕೆಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ರೈತರಲ್ಲಿ ಮನವಿ ಮಾಡಿಕೊಂಡಿರುತ್ತಾರೆ.

ಕಳೆದ ೭-೮ ವರ್ಷಗಳಿಂದ ಬೀದರ ಜಿಲ್ಲೆಯೂ ನೊಂದಣಿ ಮತ್ತು ಪರಿಹಾರ ಪಡೆದುಕೊಳ್ಳುವಲ್ಲಿ ಕ್ಷೇತ್ರದ ರೈತರು ಯಶಸ್ವಿಯಾಗಿದ್ಧಾರೆ, ಈ ನಡುವೆ ಈ ಯೋಜನೆ ಬಗ್ಗೆ ತುಂಬಾ ಅಪಪ್ರಚಾರ ಮಾಡಿದರು, ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಇರುವ ಕಾರಣ ಈ ಯೊಜನೆ ಬಗ್ಗೆ ಅಸಡ್ಡೆ ತೊರಿ, ಅಧಿಕಾರಿಗಳಿಂದ ಸರಿಯಾದ ಬೆಳೆ ಸಮಿಕ್ಷೆ ಮಾಡಿಸಲಿಲ್ಲಾ, ಆದರೂ ಸಹ ೨೦೨೩-೨೪ನೇ ಸಾಲಿಗೆ ೧,೦೬,೯೨೩ ರೈತರು ರೂ. ೪೮.೩೦ ಕೋಟಿ ಪರಿಹಾರ ಪಡೆದುಕೊಂಡಿದ್ದಾರೆ.

ಫಸಲ್ ಬಿಮಾಗೆ ರಾಜ್ಯಗಳಿಂದ ಸರಿಯಾದ ರಿತಿಯಲ್ಲಿ ಸಹಕಾರ ಸಿಗದೆ ಇರುವುದರಿಂದ ಫಸಲ್ ಬಿಮಾ ಮಾರ್ಗಸೂಚಿಗಳಲ್ಲಿ ಕೆಲವೊಂದು ಬದಲಾವಣೆಗಳು ಕೇಂದ್ರ ಸರ್ಕಾರದಿಂದ ತರಲಾಗಿದೆ, ಇದರಿಂದ ರೈತರಿಗೆ ಇನ್ನಷ್ಟು ಹೆಚ್ಚಿನ ಅನುಕೂಲವಾಗಲಿದೆ, ಆದರೆ ರೈತರು ಜಾಗರೂಕರಾಗಿ ಈ ಯೋಜನೆಯ ಲಾಭ ಪಡೆದುಕೊಳ್ಳಲು ಮುಂದಾಗಬೆಕೆAದಿದ್ದಾರೆ.

ಫಸಲ್ ಬಿಮಾ ನಿಯಮದಂತೆ, ೧) ಹಾಲಿ ಇರುವ ಬೆಳೆಗಳಿಗೆ (ಬಿತ್ತನೆಯಿಂದ ಕಟಾವು ಹಂತದವರೆಗೆ) ಬರ, ಶುಷ್ಕ ಪರಿಸ್ಥಿತಿ, ಆಲಿಕಲ್ಲು ಮಳೆ, ಭೂ ಕುಸಿತ ಮುಂತಾದವುಗಳಿAದ ಇಳುವರಿ ನಷ್ಟ ಸಂಭವಿಸಿದಲ್ಲಿ ಸಮಗ್ರ ವಿಮಾ ಭದ್ರತೆ ಒದಗಿಸಲಾಗುತ್ತದೆ. ೨) ಕಟಾವಿನ ನಂತರ ಬೆಳೆಯನ್ನು ಗುಚ್ಚಗಳಾಗಿ ಕಟ್ಟಿ ಜಮೀನಿನಲ್ಲೆ ಒಣಗಲು ಬಿಟ್ಟಂತಹ ಸಂರ್ದರ್ಭದಲ್ಲಿ, ೧೪ ದಿನಗಳೊಳಗೆ ಆಲಿಕಲ್ಲು ಮಳೆ, ಚಂಡಮಾರುತ, ಹಾಗು ಅಕಾಲಿಕ ಮಳೆಯಿಂದಾಗಿ ಬೆಳೆ ನಷ್ಟವಾದರೆ ನಷ್ಟದ ನಿರ್ಧರಣೆಯನ್ನು ವ್ಯಕ್ತಿಗತ ತಾಕು/ಹೊಲದ ಆಧಾರದ ಮೇಲೆ ನಿರ್ಧರಿಸಿ, ನಷ್ಟ ಪರಿಹಾರವನ್ನು ಒದಗಿಸಲಾಗುತ್ತದೆ.

ಈ ಎರಡು ಪರಿಸ್ಥಿತಿಗಳಲ್ಲಿ ವಿಮೆಗೆ ಒಳಪಟ್ಟ ರೈತರು ೭೨ ತಾಸುಗಳೊಳಗೆ ವಿಮಾ ಕಂಪನಿ, ಬ್ಯಾಂಕ್ ಅಥವಾ ಕೃಷಿ ಇಲಾಖೆ ಮೂಲಕ ದೂರು ದಾಖಲಿಸುವುದು ಕಡ್ಡಾಯವಾಗಿದೆ, ಇವು ಫಸಲ್ ಬಿಮಾ ಯೋಜನೆಯ ನಿಯಮಗಳಾಗಿವೆ.

ರೈತರ ಬಗ್ಗೆ ಕಾಳಜಿಯಿಲ್ಲದ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದೆ, ಆದ್ದರಿಂದ ರೈತರು ಸ್ವತಃ ಜಾಗರೂಕರಾಗಬೇಕಾಗಿದೆ, ಆದ್ದರಿಂದ ಕೂಡಲೆ ಕ್ಷೇತ್ರದ ಸಮಸ್ತ ರೈತರು ನೊಂದಣಿಗಾಗಿ ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ, ಆಧಾರಸಂಖ್ಯೆ ಜೋಡಿಸಿದ ಬ್ಯಾಂಕ್ ಖಾತೆ/ಪಾಸ್ ಬುಕ್ ಮತ್ತು ಆಧಾರ ಕಾರ್ಡ, ಮೇಲಿನ ಈ ಕೇಂದ್ರಗಳಲ್ಲಿ ನೀಡಿ ಫಸಲ್ ಬಿಮಾ ಯೋಜನೆಯಡಿ ನೊಂದಾಯಿಸಿಕೊಳ್ಳಲು ಮಾಜಿ ಸಚಿವ ಭಗವಂತ ಖೂಬಾ ರೈತರಲ್ಲಿ ವಿನಂತಿಸಿಕೊAಡಿದ್ದಾರೆ.

Ghantepatrike kannada daily news Paper

Leave a Reply

error: Content is protected !!