ರೇಜಂತಲ್ ದೇವಸ್ಥಾನದಲ್ಲಿ ದಕ್ಷಿಣ ಕರಾವಳಿ ಸಂಘದಿಂದ ಆಯೋಜನೆ ಯಕ್ಷಗಾನ: ಪ್ರೇಕ್ಷಕರ ಪುಳಕ
ಬೀದರ್: ದಕ್ಷಿಣ ಕರಾವಳಿ ಕನ್ನಡ ಸಂಘದ ವತಿಯಿಂದ ನೆರೆಯ ತೆಲಂಗಾಣದ ರೇಜಂತಲ್‍ನ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಗುರುವಾರ ಸಂಜೆ ಪ್ರದರ್ಶಿಸಿದ ಯಕ್ಷಗಾನ ಪ್ರೇಕ್ಷಕರನ್ನು ಪುಳಕಿತಗೊಳಿಸಿತು.
ಉಡುಪಿಯ ಮಂದಾರ್ತಿಯ ಶ್ರೀ ಮಹಾ ಗಣಪತಿ ಯಕ್ಷಗಾನ ಮಂಡಳಿಯ ಕಲಾವಿದರು ‘ಮಹಾ ಶಕ್ತಿ ವೀರಭದ್ರ’ ಪೌರಾಣಿಕ ಕಥಾ ಪ್ರಸಂಗವನ್ನು ಸುಂದರವಾಗಿ ಪ್ರಸ್ತುತಪಡಿಸಿದರು.
ನಾಟ್ಯಶ್ರೀ ನೃತ್ಯಾಲಯದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ ಸೇನಾ ನಾಯಕನ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದರು.
ಕಲಾವಿದರಾದ
ಕೊಕ್ಕರ್ಣೆ ಸದಾಶಿವ ಅಮೀನ್, ಗಣೇಶ್ ಆಚಾರ್ಯ ಬಿಲ್ಲಾಡಿ, ಲೋಹಿತ್ ಕೊಮೆ, ಕುಮಾರ್ ಅಮೀನ್ ಕೊಕ್ಕರ್ಣೆ,
ದಿನಕರ ಕುಂದರ್ ನಡೂರು, ನಾಗರಾಜ್ ದೇವಲ್ಕುಂದ, ರಾಕೇಶ್ ಶೆಟ್ಟಿ ಮೇಗರವಳ್ಳಿ, ಸತೀಶ್ ಕುಮಾರ್ ಹಾಲಾಡಿ, ಉಪ್ಪುಂದ ನಾಗೇಂದ್ರರಾವ್, ವಿಶ್ವನಾಥ ಪೂಜಾರಿ ಹೆನ್ನಾಬೈಲ್, ಹರೀಶ್ ಚಂದನ್ ಜಪ್ತಿ, ನಂದೀಶ್ ಕುಮಾರ್ ಜನ್ನಾಡಿ, ವಂಡಾರು ರಮೇಶ ಹಾಗೂ ರಾಘವೇಂದ್ರ ಉಳ್ಳೂರು ವಿವಿಧ ಪಾತ್ರಗಳಿಗೆ ಜೀವ ತುಂಬಿದರು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಹಾಗೂ ಸಾರ್ವಜನಿಕರು ಕರ್ನಾಟಕದ ಹೆಮ್ಮೆಯ ಕಲೆಯ ವೈಭವವನ್ನು ಕಣ್ತುಂಬಿಕೊಂಡರು.
ದೇವಸ್ಥಾನ ಸಮಿತಿಯ ಅಧ್ಯಕ್ಷ ಅಶೋಕ ರೇಜಂತಲ್, ದಕ್ಷಿಣ ಕರಾವಳಿ ಕನ್ನಡ ಸಂಘದ ಪ್ರಮುಖರಾದ ದಯಾನಂದ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ರಾಜೇಶ್ ಕೆ. ಪ್ರಭಾಕರ್ ಎ.ಎಸ್., ರಘು ರಾಮ ಉಪಾಧ್ಯಾಯ, ಕೆ.ಸತ್ಯಮೂರ್ತಿ, ಉಮೇಶ್ ನಾಯಕ್, ರವಿಚಂದ್ರ ಮೂರ್ತಿ, ಉದಯ ಶೆಟ್ಟಿ, ರಾಘವೇಂದ್ರ ಮೂರ್ತಿ, ಸುಬ್ರಹ್ಮಣ್ಯ ಪ್ರಭು, ಕಲಾವಿದೆ ಉಷಾ ಪ್ರಭಾಕರ್, ಶಾರದಾ ಶೆಟ್ಟಿ, ಮಮತಾ ಶೆಟ್ಟಿ, ಕ್ಷಮಾ ರಘುರಾಮ, ಉಮಾ ರಾಜೇಶ್, ಕುಸುಮಾ ಮೂರ್ತಿ, ಪ್ರಫುಲ್ಲಾ ಪ್ರಭು, ಮಾಲಿನಿ ಹೂಳ್ಳ ಮತ್ತಿತರರು ಇದ್ದರು.