ರುಸ್ತಂಪುರ ಗ್ರಾಮದಲ್ಲಿ ನಿತ್ಯ ನೀರಿಗಾಗಿ ಪರದಾಡುತ್ತಿರುವ ಮಹಿಳೆಯರು ಮತ್ತು ಯುವಕರು
ಚಿಂಚೋಳಿ ತಾಲೂಕಿನ ಕನಕಪೂರ್ ಗ್ರಾಮ ಪಂಚಾಯತಿಯಲ್ಲಿ ಬರುವ ರುಸ್ತಂಪುರ ಗ್ರಾಮದಲ್ಲಿ ನಿತ್ಯ ನೀರಿಗಾಗಿ ಪರದಾಡುತ್ತಿರುವ ಪರಿಶಿಷ್ಟ ಜಾತಿ ಸೇರಿದ ಮಹಿಳೆಯರು ಮತ್ತು ಯುವಕರು ಕಳೆದ ನಾಲ್ಕೈದು ದಿನಗಳಿಂದ ಪರಶಿಷ್ಟ ಜಾತಿ ಓಣೆಯಲ್ಲಿ ನೀರಿನ ಸಮಸ್ಯೆಯಾಗಿದ್ದು ಇದನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಚುನಾಯಿತ ಜನಪ್ರತಿನಿಧಿಗಳು ಕಣ್ಣಿಗೆ ಕಂಡರೂ ಕಾಣದಂತೆ ಕಣ್ಮುಚ್ಚಿಕೊಳ್ಳುತ್ತಿದ್ದು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು ಕೂಡ ಕೇಳಿ ಕೇಳದಂತೆ ವರ್ತಿಸುತ್ತಿದ್ದು ಇದಕ್ಕೆ ಮುಖ್ಯ ಕಾರಣ ಸ್ಥಳೀಯ ಶಾಸಕರು ಏಕೆಂದರೆ ಮೀಸಲಾತಿ ಕ್ಷೇತ್ರದಿಂದ ಗೆದ್ದಂತ ಶಾಸಕರು, ಪರಿಶಿಷ್ಟ ಜಾತಿಯ ಓಣೆಯಲ್ಲಿ ನೀರು ಸಿಗದಂತಹ ಕಷ್ಟವಿರೋದು ದುರಂತ ಸಂಗತಿ ಮತ್ತು ಸ್ಥಳೀಯ ಮೇಲಾಧಿಕಾರಿಗಳು ಎನ್ನುವುದರಲ್ಲಿ ಯಾವುದೇ ಅನುಮಾನ ಇರುವುದಿಲ್ಲ ಈ ಕೂಡಲೇ ಇದನ್ನು ಶಾಸಕರು ಎಚ್ಚೆತ್ತುಕೊಂಡು ಸಂಬಂಧಪಟ್ಟ ಅಧಿಕಾರಿಗಳಿಗೆ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಕೂಡಲೇ ವರ್ಗಾವಣೆ ಮಾಡಬೇಕು 15 ದಿನಕ್ಕೊಮ್ಮೆ ಬರುವ ಕನಕಪುರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಈ ಕೂಡಲೇ ರುಸ್ತಂಪುರ ಗ್ರಾಮದ ಪರಿಶಿಷ್ಟ ಜಾತಿ ಓಣೆಯ ನೀರಿನ ಸಮಸ್ಯೆಗೆ ಕೂಡಲೇ ಪರಿಹರಿಸಬೇಕು, ಒಂದು ವೇಳೆ ಕೆಲಸದಲ್ಲಿ ವಿಳಂಬವಾದರೆ ದಲಿತ ಸೇನೆ ತಾಲೂಕ ಸಮಿತಿ ಚಿಂಚೋಳಿ ವತಿಯಿಂದ ಕನಕಪೂರ ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ ಬೀಗ ಜಡಿದು ಪಂಚಾಯತ್ ಮುತ್ತಿಗೆ ಹಾಕಲಾಗುವುದು ಎಂದು ದಲಿತ ಸೇನೆ ತಾಲೂಕ ಅಧ್ಯಕ್ಷ ರಾಘವೇಂದ್ರ ಎಸ್, ಹೂವಿನಭಾವಿ ಎಚ್ಚರಿಸಿದ್ದಾರೆ.