ರಾಹುಲ್ ಗಾಂಧಿ ವಿಚಾರ ಮಂಚ್ ನ್ ಐದನೇ ವರ್ಷದ ವಾರ್ಷಿಕೋತ್ಸವ
ಬೀದರ್ ನಗರದ ರಾಹುಲ್ ಗಾಂಧಿ ವಿಚಾರ ಮಂಚ್ ನ ಕಛೇರಿಯಲ್ಲಿ ರಾಹುಲ್ ಗಾಂಧಿ ವಿಚಾರ ಮಂಚ್ ನ ಜಿಲ್ಲಾ ಅಧ್ಯಕ್ಷರಾದ ಶ್ರೀ ಪ್ರೆಮನಾಥ ಗಾಂವಕರ ರವರ ನೇತೃತ್ವದಲ್ಲಿ ರಾಹುಲ್ ಗಾಂಧಿ ವಿಚಾರ ಮಂಚ್ ನ 5 ನೆಯ ವಾರ್ಷಿಕೋತ್ಸವ ಜ್ಯೋತಿ ಬೆಳಗಿಸುವ ಮುಖಾಂತರ ನೆರವೇರಿಸಲಾಯಿತು ಈ ಕಾರ್ಯಕ್ರಮವನ್ನು ಉದ್ದೇಶಿಸಿ ರಾಹುಲ್ ಗಾಂಧಿ ವಿಚಾರ ಮಂಚ್ ನ ರಾಜ್ಯ ಕಾರ್ಯಧ್ಯಕ್ಷರಾದ ಶ್ರೀ ರವಿ ಬಿರಾದಾರ ಜ್ಯಾಂತಿ ರವರು ಮಾತನಾಡಿ ಈ ಸಂಘವು ಪ್ರಾರಂಭವಾಗಿ ಐದು ವರ್ಷ ಗತಿಸಿವೆ ಐದು ವರ್ಷಗಳಲ್ಲಿ ಜನಸಾಮಾನ್ಯರ ಧ್ವನಿಯಾಗಿ ಕಾರ್ಯಗಳು ಮಾಡುತ ಬಂದಿದೆ.ಎಂದು ತಿಳಿಸಿದರು ಇದೆ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಮಹೇಶ್ ಪಾಟೀಲ, ಸಂಘದ ಜಿಲ್ಲಾ ಅಧ್ಯಕ್ಷ ಪ್ರೆಮನಾಥ ಗಾಂವಕರ್,ಬೀದರ್ ನಗರದ ಅಧ್ಯಕ್ಷ ಪವನ್ ಮೆಟ್ಟಾರೆ,ಉಪಾಧ್ಯಕ್ಷರಾದ ಸಚಿನ್ ಮೇತ್ರೆ,ಹುಮಾನಬಾದ ತಾಲ್ಲೂಕು ಅಧ್ಯಕ್ಷ ಆಕಾಶ ಅರಳಿ ಭಾಲ್ಕಿ ತಾಲ್ಲೂಕು ಅಧ್ಯಕ್ಷ ಪವನ ಕುಮಾರ ಮೇತ್ರೆ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು, ಇದೆ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರ ನೀಡಲಾಯಿತು