ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೀದರ ಹಾಗೂ ಬೀದರ ವಿಶ್ವವಿದ್ಯಾಲಯ ಬೀದರ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭಕ್ಕೆ ಆಗಮಿಸಿದ ಬೀದರ್ ವಿಶ್ವವಿದ್ಯಾಲಯ ಬೀದರನ ಸಮಾಜ ನಿಕಾಯದ ಡೀನರು ಹಾಗೂ ವಸತಿ ಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾಲೇಜು ಗೋಡಂಪಳ್ಳಿಯ ಪ್ರಾಂಶುಪಾಲರಾದ ಪೆÇ್ರ.ದೇವಿದಾಸ ತುಮಕುಂಟೆ ಅವರು ಮಾತನಾಡುತ್ತಾ ‘ಇಂದಿನ ಯುವಕರೇ ನಾಳಿನ ನಾಗರಿಕರು ಹಾಗಾಗಿ ಎಲ್ಲಾ ಯುವಕರ ಮೇಲೆ ಗುರುತರವಾದಂತಹ ಜವಾಬ್ದಾರಿ ಇದೆ. ಹೆತ್ತ ತಾಯಿ, ಹೊತ್ತ ಭೂಮಿ ಇವೆರಡು ಸ್ವರ್ಗಕ್ಕೆ ಸಮಾನ. ಹಾಗಾಗಿ ನಾವು ಅವರ ಸಂರಕ್ಷಣೆ ಮಾಡುವುದು ಮತ್ತು ಗುರು ಹಿರಿಯರನ್ನು ಗೌರವದಿಂದ ನೋಡಿಕೊಳ್ಳಬೇಕು ಎಂದು ಹೇಳಿದರು. ಇಂತಹ ಶಿಬಿರಗಳು ನಮ್ಮಲ್ಲಿ ರಾಷ್ಟ್ರೀಯ ಭಾವೈಕ್ಯತೆ, ಸಮಾನತೆ, ಸಹೋದರತೆ, ಸಹ ಬಾಳ್ವೆ , ಸಪಂಕ್ತಿ ಭೋಜನ ಇಂಥ ಉದಾರವಾದ ಗುಣಗಳನ್ನು ಬೆಳೆಸುತ್ತವೆ. ಕಾಡು ಬೆಳೆಸಿ ನಾಡು ಉಳಿಸಿ ಎನ್ನುವ ಶೀರ್ಷಿಕೆಡಿಯಲ್ಲಿ ನಾವು ಕಾರ್ಯಕ್ರಮವನ್ನು ಹಮ್ಮಿಕೊಂಡು ಈ ಸಮಾಜದಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಆಗÀ ಮಾತ್ರ ಸಕಾಲಕ್ಕೆ ಮಳೆ ಬೆಳೆಯು ಆಗುತ್ತವೆ. ಇಲ್ಲವಾದಲ್ಲಿ ಮುಂದೊಂದು ದಿನ ಕುಡಿಯುವ ನೀರಿಲ್ಲದೆ ಬವಣೆಗೆ ಸಿಲುಕಬಹುದು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪೆÇ್ರ. ಜಯಶ್ರೀ ಪ್ರಭಾ ಅವರು ಮಾತನಾಡುತ್ತ ಮಾಧ್ಯಮಗಳ ಪ್ರಭಾವದಿಂದಾಗಿ ಇಂದು ನಾವು ಸ್ವದೇಶಿ ಸಂಸ್ಕøತಿಯನ್ನು ಬಿಟ್ಟು ವಿದೇಶಿ ಸಂಸ್ಕೃತಿಗೆ ಮಾರುಹೋಗುತ್ತಿದ್ದೇವೆ. ಇಂತಹ ಸಂಸ್ಕೃತಿಯಿಂದ ನಮ್ಮ ಸಮಾಜ ಹಾಳಾಗಿ ಹೋಗುತ್ತದೆ. ಹಾಗಾಗಿ ಇವತ್ತು ನೀವು ಸ್ವದೇಶಿಯ ಸಂಸ್ಕೃತಿ, ಇಲ್ಲಿಯ ರೀತಿ ನೀತಿ, ನಡೆ ನುಡಿ ಬಗ್ಗೆ ಕಳಕಳಿ ಉಳ್ಳವರಾದಾಗ ಮಾತ್ರ ತಾವು ಮುಂದೆ ಸತ್ಪ್ರಜೆಯಾಗಲು ಸಾಧ್ಯವಾಗುತ್ತದೆ ಎಂದರು.
ಆರಂಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಂಯೋಜಕರಾದ ಡಾ.ಸುಚಿತಾನಂದ ಕೆ. ಮಲ್ಕಾಪುರ ಅವರು ಸರ್ವರನ್ನು ಸ್ವಾಗತಿಸಿ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯ ಪ್ರಜ್ಞೆ, ಪರಿಸರ ಪ್ರಜ್ಞೆ, ಸಾಮಾಜಿಕ ಪ್ರಜ್ಞೆ ಮತ್ತು ರಾಷ್ಟ್ರೀಯ ಪ್ರಜ್ಞೆ ಹೀಗೆ ಹಲವು ಹತ್ತು ಜವಾಬ್ದಾರಿಗಳನ್ನು ಕಲಿಸಿಕೊಡುತ್ತದೆ. ವಿದ್ಯಾರ್ಥಿಗಳು ಚಾಚು ತಪ್ಪದೆ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಿದಾಗ ಮಾತ್ರ ತಾವು ಅಭ್ಯಾಸ ಮಾಡಿದ್ದು ಇಂತಹ ಶಿಬಿರಗಳಲ್ಲಿ ಭಾಗಿಯಾಗಿದ್ದು ಸಾರ್ಥಕವಾಗುತ್ತದೆ ಎಂದರು. ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಇಂತಹ ಅನೇಕ ಆದರ್ಶ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದರು.ಮುಂದುವರೆದು ನಾವೆಲ್ಲರೂ ಆರೋಗ್ಯದಿಂದ ಇರಬೇಕಾದರೆ ಸ್ವದೇಶಿ ವಸ್ತುಗಳಿಗೆ ಒತ್ತು ಕೊಡಬೇಕಾಗುತ್ತದೆ ಅದರಲ್ಲಿ ವಿಶೇಷವಾಗಿ ಮಜ್ಜಿಗೆ ,ನಿಂಬು ಶರಬತ್ತು ಎಳೆ ನೀರು ಹೀಗೆ ನಮ್ಮ ಸುತ್ತಮುತ್ತಲಿರುವ ಪದಾರ್ಥಗಳನ್ನು ಸೇವಿಸಿದಾಗ ಮಾತ್ರ ನಮ್ಮ ಆರೋಗ್ಯ ವೃದ್ಧಿಯಾಗಲಿಕ್ಕೆ ಸಾಧ್ಯವಾಗುತ್ತದೆ ಎಂದರು.
ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಲಹಾ ಸಮಿತಿಯ ಸದಸ್ಯರಾದ ಪೆÇ್ರ. ಏಲಿಶಾ ದೇವಿದಾಸ್ ಅವರು ಕಾರ್ಯಕ್ರಮ ನಿರೂಪಿಸಿದರು ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಂಚಾಲಕರಾದ ಡಾಕ್ಟರ್ ಗಿರಿಜಾ ಮಂಗಳಗಟ್ಟಿ ಅವರು ಕೊನೆಯಲ್ಲಿ ವಂದಿಸಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಲಹಾ ಸಮಿತಿಯ ಸದಸ್ಯರುಗಳಾದ ಡಾ.ರಾಜಕುಮಾರ ಅಲ್ಲೂರೆ ಡಾ.ಚನ್ನಕೇಶವಮೂರ್ತಿ,ಪೆÇ್ರ.ಪಲ್ಲೆದ ಮಹೇಶ್ವರಿ ಡಾ.ನಾಗಮ್ಮ ಬಂಗರಗಿ ಪೆÇ್ರ. ಶ್ರೀಕಾಂತ್ ಪಾಟೀಲ್ , ಪೆÇ್ರ. ಸಪ್ನಾ ಮಾನಕಾರಿ, ಡಾ. ಶೀಲಾ ಎಸ್.ಎನ್, ಶ್ರೀ ಬಾಲಸುಬ್ರಮಣ್ಯಂ ಚಾಲಾಕ ಡಾ. ನಗ್ಮಾ ಸೋಣಾ ಮತ್ತು ಡಾ. ಜೈಭಾರತ ಎಂ. ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಉಪಸ್ಥಿತರಿದ್ದರು.